Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚನ್ನಪಟ್ಟಣದಲ್ಲಿ ಯಾರು ಗೆಲ್ಲುತ್ತಾರೆ ಗೊತ್ತಾ.
    ಚುನಾವಣೆ

    ಚನ್ನಪಟ್ಟಣದಲ್ಲಿ ಯಾರು ಗೆಲ್ಲುತ್ತಾರೆ ಗೊತ್ತಾ.

    vartha chakraBy vartha chakraಅಕ್ಟೋಬರ್ 26, 2024ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    (ಚುನಾವಣೆ ಸಮೀಕ್ಷೆ
    ಆರ್.ಎಚ್.ನಟರಾಜ್, ಹಿರಿಯ ಪತ್ರಕರ್ತ.)

    ಬೊಂಬೆ ನಗರಿ ಚನ್ನಪಟ್ಟಣ ರಾಮನಗರ ಜಿಲ್ಲೆಯ ಅತ್ಯಂತ ಪ್ರಮುಖ ನಗರ ರಾಜಕೀಯವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಜನತಾ ಪರಿವಾರ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಆದರೆ ಮತ್ತೆ ಸಾದತ್ ಅಲಿ ಖಾನ್ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಬರುವಂತೆ ಮಾಡಿದ್ದರು.
    ಆದರೆ 1999ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಹಾಗೂ ಚಿತ್ರನಟ ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸುವ ಮೂಲಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಾಯಿಸಿದರು. ಈ ಕ್ಷೇತ್ರವನ್ನು ಪಕ್ಷರಾಜಕಾರಣದ ಮುಷ್ಟಿಯಿಂದ ಹೊರಗೆಳೆದು ವ್ಯಕ್ತಿಗತ ರಾಜಕಾರಣದ ಅಖಾಡವಾಗಿ ಪರಿವರ್ತಿಸಿದರು.
    ಅಂದಿನಿಂದ ಇಂದಿನವರೆಗೆ ಈ ಕ್ಷೇತ್ರ ರಾಜಕೀಯ ಪಕ್ಷದ ಬದಲಾಗಿ ವ್ಯಕ್ತಿ ಪ್ರತಿಷ್ಠೆಯ ಅಖಾಡವಾಗಿ ಪರಿಣಮಿಸಿದೆ. ಅದರಲ್ಲೂ ಸಿಪಿ ಯೋಗೇಶ್ವರ್ ಈ ಕ್ಷೇತ್ರದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿಕೊಂಡರೆ ಇವರಿಗೆ ತೀವ್ರ ಪೈಪೋಟಿ ನೀಡುತ್ತಿರುವುದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.
    ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ಪ್ರಾಬಲ್ಯ ಸಾಧಿಸುತ್ತಿದ್ದಂತೆ ಇಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸು ಕಳೆದುಕೊಂಡಿತು. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಮಯದಲ್ಲಿ ದಾಖಲೆ ಅಂತರದೊಂದಿಗೆ ಕಾಂಗ್ರೆಸ್ ಜಯಗಳಿಸಿದೆ. ಯೋಗೇಶ್ವರ್ ಕಾಂಗ್ರೆಸ್ ಬಿಟ್ಟ ಸಮಯದಲ್ಲಿ ಪಕ್ಷದ ಸಾಧನೆ ಶೋಚನೀಯವಾಗಿದೆ.
    ಈ ಬಾರಿ ವಿಭಿನ್ನ ರೀತಿಯ ಚುನಾವಣೆ ನಡೆಯುತ್ತಿದೆ ಯೋಗೇಶ್ವರ್ ಜೆಡಿಎಸ್ ನ ದೊಡ್ಡ ಕುಟುಂಬದ ಮೂರನೇ ವ್ಯಕ್ತಿಯ ವಿರುದ್ಧ ಸೆಣೆಸುತ್ತಿದ್ದಾರೆ. ಮೊದಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದು ಅವರನ್ನು ಮಣಿಸಿದ ಯೋಗೇಶ್ವರ್ ನಂತರ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ ಇದೀಗ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ.
    ಕ್ಷೇತ್ರದಲ್ಲಿ ಒಟ್ಟು 2,17,573 ಮತದಾರರಿದ್ದಾರೆ ಇದರಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ 1,05,000, ಮತದಾರರಿದ್ದರೆ,ಪರಿಶಿಷ್ಟ ಜಾತಿಯ 40,000, ಮುಸ್ಲಿಂ ಸಮುದಾಯದ 35,000, ಲಿಂಗಾಯತರ 11,000, ಹಾಗೂ ಕುರುಬ ಸಮಾಜದ 8,000 ಮಾತುಗಳಿವೆ.ಇತರೆ ವರ್ಗದ 31,000 ಮತಗಳಿವೆ. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವೈಶಿಷ್ಟ್ಯ.
    ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸಮಯದಲ್ಲಿ ಯೋಗೇಶ್ವರ್ ಎರಡು ಬಾರಿ ಜೆಡಿಎಸ್ ನ ಎಂ ಸಿ ಅಶ್ವತ್ ಅವರನ್ನು ಮಣಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದಾಗ ಎಂ ಸಿ ಅಶ್ವಥ್ ಎದುರು ಸೋಲು ಅನುಭವಿಸಿದ್ದಾರೆ.
    2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಯೋಗೇಶ್ವರ್ ಜೆಡಿಎಸ್‌ನ  ಸಿ.ಲಿಂ. ನಾಗರಾಜು ಅವರನ್ನು 17,803 ಮತಗಳ ಅಂತರದಿಂದ ಸೋಲಿಸಿದರು.
    ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದ ಯೋಗೇಶ್ವರ್ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಅವರನ್ನು 8,000 ಮತಗಳ ಅಂತರದಿಂದ ಸೋಲಿಸಿದರು.
    ನಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಯೋಗೀಶ್ವರ್ ಅವರನ್ನು ಕುಮಾರಸ್ವಾಮಿ ಸೋಲಿಸಿದರು.
    ಇದೀಗ ಬದಲಾದ ಲೆಕ್ಕಾಚಾರದೊಂದಿಗೆ ಚನ್ನಪಟ್ಟಣದಲ್ಲಿ ಚುನಾವಣೆ ನಡೆಯುತ್ತಿದೆ. ಮುಸ್ಲಿಂ ಮತ್ತು ಕುರುಬ ಸಮುದಾಯ ಪ್ರಬಲವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದೆ. ಈ ಹಿಂದೆ ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್ ಬೆಂಬಲಕ್ಕೆ ನಿಲ್ಲುತ್ತಿತ್ತು. ಆದರೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಈ ಸಮುದಾಯ ಇದೀಗ ಬಿಜೆಪಿಯಂತೆ ಜೆಡಿಎಸ್ ನಿಂದ ದೂರ ಉಳಿದಿದೆ .
    ಹೀಗಾಗಿ ಪರಿಶಿಷ್ಟ ಜಾತಿ ಇತರೆ ಹಿಂದುಳಿದ ಮತ್ತು ಒಕ್ಕಲಿಗ ಸಮುದಾಯದ ಹೆಚ್ಚಿನ ಮತಗಳನ್ನು ಪಡೆಯಲು ಜೆಡಿಎಸ್ ರಣತಂತ್ರ ರೂಪಿಸಿದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಚುನಾವಣೆ ತಂತ್ರಗಾರಿಕೆ ಹೆಣೆಯುವಲ್ಲಿ ಅತ್ಯಂತ ಚಾಣಾಕ್ಷರು ಹೀಗಾಗಿ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಯೋಗೇಶ್ವರ್ ಪರ ವಾತಾವರಣ ಇದ್ದಂತೆ ಕಂಡು ಬಂದರೂ ಕೂಡ ರಾಜಕೀಯ ಚಾಣಾಕ್ಷರ ತಂತ್ರ ಇವರಿಗೆ ದೊಡ್ಡ ಸವಾಲಾಗಿದೆ.

    BJP channapattana Congress Karnataka Politics ಕಾಂಗ್ರೆಸ್ ಚುನಾವಣೆ ಜೆಡಿಎಸ್ ದೇವೇಗೌಡ ಬಿಜೆಪಿ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಶಹಬ್ಬಾಸ್ ಬಿಬಿಎಂಪಿ
    Next Article ಸಂಡೂರು :(ಗಣಿ ಉದ್ಯಮಿಗಳ ಕದನ)
    vartha chakra
    • Website

    Related Posts

    ವಿಧಾನ ಪರಿಷತ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್.

    ಮೇ 29, 2025

    ಬಿಕೆ ಹರಿಪ್ರಸಾದ್ ಗೆ ಸಿಎಂ ಕೊಟ್ಟ ಜವಾಬ್ದಾರಿ ಏನು ಗೊತ್ತಾ ?

    ಮೇ 29, 2025

    ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರಾ..?

    ಮೇ 29, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.

    ವಿಧಾನ ಪರಿಷತ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್.

    ಬಿಕೆ ಹರಿಪ್ರಸಾದ್ ಗೆ ಸಿಎಂ ಕೊಟ್ಟ ಜವಾಬ್ದಾರಿ ಏನು ಗೊತ್ತಾ ?

    ಕೋಮು ಸಂಘರ್ಷ ತಡೆ ಕಾರ್ಯಪಡೆ ರಚನೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jacobpaity ರಲ್ಲಿ ಹಿಜಾಬ್ ನಿಷೇಧ ಆದೇಶ ರದ್ದಾಯಿತು | Hijab Ban
    • Jacobpaity ರಲ್ಲಿ ವಿಧಾನಸಭೆ ಪ್ರವೇಶಿಸಿದ ಅನಾಮಿಕ
    • narkologiyakalugavucky ರಲ್ಲಿ ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    Latest Kannada News

    ಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.

    ಮೇ 29, 2025

    ವಿಧಾನ ಪರಿಷತ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್.

    ಮೇ 29, 2025

    ಬಿಕೆ ಹರಿಪ್ರಸಾದ್ ಗೆ ಸಿಎಂ ಕೊಟ್ಟ ಜವಾಬ್ದಾರಿ ಏನು ಗೊತ್ತಾ ?

    ಮೇ 29, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    500 ರೂಪಾಯಿ ನೋಟ್ ಬ್ಯಾನ್ !#narendramodi #chandrababunaidu #viralvideo #facts #reel #news #money #ban
    Subscribe