ಬೆಂಗಳೂರು: ಮಹಾಭಾರತದ ‘ಅಶ್ವತ್ಥಾಮ’ನಾಗಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಿದ್ಧರಾಗುತ್ತಿದ್ದಾರೆ.
ಹೌದು, ಶಿವರಾಜ್ ಕುಮಾರ್ “ಅಶ್ವತ್ಥಾಮ’ ಎಂಬ ಸಿನಿಮಾ ಮಾಡಲಿದ್ದಾರೆ. ಈಗ ಈ ಚಿತ್ರ ಸೆಟ್ಟೇರುವ ಹಂತಕ್ಕೆ ಬಂದಿದೆ. ಚಿತ್ರ ಸೆಪ್ಟೆಂಬರ್‌ನಿಂದ ಆರಂಭವಾಗುವ ಸಾಧ್ಯತೆ ಹೆಚ್ಚಿದೆ.
“ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ಸಚಿನ್ ಈ ಚಿತ್ರ ನಿರ್ದೇಶಿಸುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ಸಚಿನ್ ಅವರೇ ಹೊರಲಿದ್ದಾರೆ. ಸಿನಿಮಾದಲ್ಲಿ ಶಿವಣ್ಣ ಮಹಾಭಾರತದ ಅಶ್ವತ್ಥಾಮನಾಗಿ ಬಣ್ಣ ಹಚ್ಚಲಿದ್ದು, ಇದೊಂದು ಆಕ್ಷನ್-ಸ್ಪೈ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತ ಸಾಗುವ ಇಡೀ ಕಥೆಯಲ್ಲಿ ಶಿವಣ್ಣ ಸೂಪರ್ ಹೀರೋ ಆಗಿ ಕಾಣಿಸಲಿದ್ದಾರೆ. ಚಿತ್ರದಲ್ಲಿ ಗ್ರಾಫಿಕ್‌ಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು, ಶಿವರಾಜ್‌ಕುಮಾರ್ ನಟಿಸಿರುವ ‘ಬೈರಾಗಿ’ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ‘ವೇದ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.