ಮರ ಬೆಳೆಸಿ, ಕಾವೇರಿ ಮೂಲ ಉಳಿಸಿ ಮೊದಲಾದ ಆಂದೋಲನಗಳ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಇದೀಗ ಭೂಮಿ ಮತ್ತು ಮಣ್ಣಿನ ಸಂರಕ್ಷಣೆಯ ಸಲುವಾಗಿ ಮಣ್ಣು ಉಳಿಸಿ ಅಭಿಯಾನವನ್ನು ಆರಂಭಿಸಿದ್ದಾರೆ.
ವಿಶ್ವದೆಲ್ಲೆಡೆ ಈ ಬಗ್ಗೆ ಅರಿವು ಮೂಡಿಸಲು ಸದ್ಗುರು 100-ದಿನಗಳ ಕಾಲ ಏಕಾಂಗಿಯಾಗಿ 30,000-ಕಿಮೀ ಮೋಟಾರ್ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ.
ಕಳೆದ ಮಾರ್ಚ್ 21 ರಂದು ಲಂಡನ್ನಿಂದ ಪ್ರಾರಂಭವಾದ ಸದ್ಗುರ್ ಬೈಕ್ ಯಾತ್ರೆ ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯದಾದ್ಯಂತ 27 ದೇಶಗಳಲ್ಲಿ ಸಂಚರಿಸಿ ಮಣ್ಣಿನ ಮಹತ್ವ ಮತ್ತು ಮಣ್ಣು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಿದೆ. ತಮ್ಮ ಬೈಕ್ ಯಾತ್ರೆಯ ವೇಳೆ ಸದ್ಗುರು, ಆಂದೋಲಕ್ಕೆ ಮಾಧ್ಯಮಗಳು ರಾಜಕೀಯ ನಾಯಕರು, ವಾಣಿಜ್ಯೋದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾಂಸ್ಕೃತಿಕ ರಾಯಭಾರಿಗಳನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ.
ಜಗತ್ತಿನೆಲ್ಲೆಡೆ ಆರಂಭವಾದ ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಚಾಲನೆ ನೀಡಿದ್ದರು.
ಸದ್ಗುರು ಅವರ ಬೈಕ್ ಯಾತ್ರೆಯು ಜೂನ್ 19 ರಂದು ಕರ್ನಾಟಕವನ್ನು ತಲುಪಲಿದೆ. ಮೈಸೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಯಾತ್ರೆ ಅಂತ್ಯಗೊಳ್ಳಲಿದೆ. ಆದರೆ ಆಂದೋಲನ ಮುಂದುವರೆಯಲಿದೆ. ಇದೀಗ ಈ ಅಭಿಯಾನಕ್ಕೆ ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಬೆಂಬಲ ನೀಡಿದ್ದಾರೆ. ತಮ್ಮೆಲ್ಲಾ ರಾಜಕೀಯ ಸಿದ್ದಾಂತ, ಹಿತಾಸಕ್ತಿ ಬದಿಗೊತ್ತಿ ಸದ್ಗುರು ಆಂದೋಲನದಲ್ಲಿ ಭಾಗಿಯಾಗಲು ಒಗ್ಗೂಡಿದ್ದಾರೆ.
‘ಮಣ್ಣು ಉಳಿಸಿ ಇಂದೇ ಕಣಕ್ಕೆ’ ಎಂಬ ಭಿತ್ತಿಪತ್ರ ಹಿಡಿದು ಸದ್ಗುರ ಆಂದೋಲನದಲ್ಲಿ ಜೊತೆಯಾಗಿದ್ದಾರೆ..