ಬೆಂಗಳೂರು, ನ. 21- ಒಂದೂವರೆ ವರ್ಷದಿಂದ ಪ್ರೀತಿಸಿ ಮನೆ ಮಗಳನ್ನು ಕರೆದುಕೊಂಡು ಓಡಿ ಹೋಗಿದ್ದೂ ಅಲ್ಲದೆ ಅತ್ತೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೂ ಕಳವು ಮಾಡಿದ್ದ ಖತರ್ನಾಕ್ ಅಳಿಯನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ, ಅತ್ತೆ ರೆಜಿನಾ ಕನ್ಯಾಕುಮಾರಿಗೆ ಹೋಗಿದ್ದಾಗ ಸಂಚು ರೂಪಿಸಿ ಆರೋಪಿ ಬೆಲೆ ಬಾಳುವ ವಸ್ತುಗಳನ್ನು. ಕಳ್ಳತನ ಮಾಡಿ ತೆಗೆದುಕೊಂಡು ಹೋಗುವಾಗ ಅಕ್ಕಪಕ್ಕದ ನಿವಾಸಿಗಳು ನೋಡಿ ಪ್ರಶ್ನೆ ಮಾಡಿದಾಗ ನಾನು ಅವರ ಸಂಬಂಧಿಕ ಎಂದು ಹೇಳಿದ್ದ.
ಆದರೆ ಸ್ಥಳೀಯರು ಚಾಣಾಕ್ಷತನ ಕಳವು ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಪ್ರದೀಪ್ ಕುಮಾರನ ಫೊಟೋವನ್ನು ಮೊಬೈಲ್ ನಲ್ಲಿ ಕರೆ ಹಿಡಿದು ರೆಜಿನಾ ಅವರಿಗೆ ಕರೆ ಮಾಡಿ, ಕಳ್ಳತನವಾಗಿರುವುದನ್ನು ಫೋಟೋ ಸಮೇತ ಮಾಹಿತಿ ನೀಡಲು ಯತ್ನಿಸಿದ್ದರು. ಆದರೆ ರೆಜಿನಾ ಅವರ ನಂಬರ್ ನಾಟ್ ರೀಚಬಲ್ ಆದ ಹಿನ್ನೆಲೆ ಸಂಪರ್ಕ ಸಾಧ್ಯವಾಗಿರಲಿಲ್ಲ.
ನಂತರ ರೆಜಿನಾ ಕನ್ಯಾಕುಮಾರಿಯಿಂದ ವಾಪಾಸ್ ಬಂದಾಗ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಒಳಗೆಲ್ಲಾ ಪರಿಶೀಲಿಸಿದಾಗ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿ 40 ಲಕ್ಷ ರೂ ಕಳ್ಳತನವಾಗಿರುವುದು ಖಚಿತಪಟ್ಟಿದೆ. ಈ ಮಧ್ಯೆ ಅಕ್ಕಪಕ್ಕದ ನಿವಾಸಿಗಳು ಬಂದು ಕಳ್ಳನನ್ನು ತಾವು ನೋಡಿರುವುದಾಗಿ ರೆಜಿನಾಗೆ ತಿಳಿಸಿದ್ದಾರೆ. ಫೊಟೋ ನೋಡಿದಾಗ ತನ್ನ ಅಳಿಯನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ರೆಜಿನಾ ಅವರ ಕೊನೆಯ ಮಗಳು ಲಾವಣ್ಯಾಳನ್ನ ಪ್ರೀತಿಸಿ ಕರೆದುಕೊಂಡು ಹೋಗಿದ್ದ ಪ್ರದೀಪ್. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಗಳು ಎಲ್ಲಿದ್ದಾಳೆಂದು ಕೂಡ ರೆಜಿನಾ ಅವರಿಗೆ ತಿಳಿಸಿಲ್ಲವಂತೆ. ಈ ಸಂಬಂಧ ತನ್ನ ಅಳಿಯನ ವಿರುದ್ಧವೇ ರೆಜಿನಾ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

2 ಪ್ರತಿಕ್ರಿಯೆಗಳು
Descubra por que tantos jogadores escolhem Mostbet todos os dias – https://mostbetpt.pro/ , Registre-se no Mostbet e pegue 125% extra + 220 free spins imediatamente .
References:
Purchase steriods
References:
https://platform.joinus4health.eu/forums/users/bronzetemper8/