ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಕೆನಡಾ ಪಾರ್ಲಿಮೆಂಟಿನಲ್ಲಿ ತನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿ ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ.
ಇವರು ಮೂಲತಹ ಸಿರಾ ತಾಲೂಕಿನ ದ್ವಾರಾಳು ಗ್ರಾಮದವರಾಗಿದ್ದು ಪ್ರಸ್ತುತ ಕೆನಡಾ ದೇಶದಲ್ಲಿ ನೆಲೆಸಿದ್ದು ಈಗಾಗಲೇ ನೇಪಿಯನ್ ಕ್ಷೇತ್ರದಿಂದ ಮೂರು ಬಾರಿ ಅಲ್ಲಿನ ಸಂಸತ್ತಿಗೆ ಆಯ್ಕೆಯಾಗಿದ್ದಾರೆ .
ಇವರ ತಂದೆ ಗೋವಿಂದಪ್ಪ ಕೃಷಿ ಅಧಿಕಾರಿಯಾಗಿ, ಕುಂಚಿಟಿಗರ ಸಂಘದಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ಜನರು ಮಾತನಾಡುತ್ತಾರೆ ಎಂದರು.
ಭಾರತದ ಹೊರಗಿನ ಜಗತ್ತಿನ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು ಮತ್ತು ಹೆಮ್ಮೆಯ ವಿಚಾರ ನಮ್ಮ ದೇಶದ ಸಂಸತ್ತಿನಿಂದ ಮತ್ತು ರಾಜಕೀಯದಿಂದ ದೇಶಭಾಷೆಗಳನ್ನು ಕಣ್ಮರೆಯಾಗಿಸುವ ನಿರಂತರವಾದ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಚಂದ್ರ ಆರ್ಯ ಅವರ ತಾಯಿನುಡಿಯ ಕುರಿತು ಸಹಜ ಕಾಳಜಿ, ಭಾವುಕತೆ, ಉತ್ಸಾಹ ಅನುಕರಣೀಯ.
Previous Articleಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ವಿಮಾನ ಹಾರಾಟ ವಿಳಂಬ
Next Article ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆ!