ಬೆಂಗಳೂರು : ಮಹಾನಗರಿ ಬೆಂಗಳೂರಿನಲ್ಲಿ ಸಾಂಕ್ರಾಮಿಕ ಕೋವಿಡ್ ವೈರಸ್ ತೀವ್ರ ಸ್ವರೂಪದಲ್ಲಿ ಹರಡುವ ಮುನ್ಸೂಚನೆ ಸಿಕ್ಕಿದ್ದು ಪರಿಸ್ಥಿತಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆ ಆಧಾರದಲ್ಲಿ ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ.
ಸದ್ಯ ಪ್ರತಿನಿತ್ಯ 10 ಸಾವಿರ ಟೆಸ್ಟಿಂಗ್ ಗುರಿ ತಲುಪಲು ಸರ್ಕಾರ ಟಾರ್ಗೆಟ್ ನೀಡಿದೆ.ಇದಕ್ಕಾಗಿ ಈಗ 200 ಸ್ವಾಬ್ ಕಲೆಕ್ಟರ್, 200 ಡೇಟಾ ಆಪರೇಟರ್ ಹಾಗು 100 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.ಇದರ ಜೊತೆಗೆ ಈಗಾಗಲೆ
ನಗರದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ಪಾಲಿಕೆಯಿಂದ 500 ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದೆ.
ಕಳೆದ ಬಾರಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಮಾರ್ಚ್ ನಲ್ಲಿ ಸೇವೆಯಿಂದ ಬಿಡಲಾಗಿತ್ತು. ಇದೀಗ ನಿತ್ಯ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಹಾಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ