ಕೋಲಾರ. ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲ, ಅಡುಗೆ ಎಣ್ಣೆ ದರ ಗಗನಕ್ಕೆ ಏರುತ್ತಿದ್ದಂತೆಯೇ ತರಕಾರಿ ಬೆಲೆಗಳೂ ದಿನೇ ದಿನೇ ಹೆಚ್ಚುತ್ತಲಿದ್ದು ಬಡವನ ತರಕಾರಿಯೆಂದೇ ಹೇಳಲಾಗುವ ಟಮೋಟೋ ಬೆಲೆಯೂ ಇದೀಗ ಶತಕಕ್ಕೆ ಬಂದು ನಿಂತಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಬೆಳೆಯುವ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಟಮೋಟೋ ಕೆ ಜಿ ಗೆ ನೂರು ತಲುಪುತ್ತಿದ್ದರೆˌ ಸೊಪ್ಪು ಹಾಗೂ ತರಕಾರಿಗಳೂ ಸಹ ಯಾವುದಕ್ಕೂ ಕಡಿಮೆ ಇಲ್ಲದಂತೆ ಎಲ್ಲವೂ 50 ರೂ. ಗಳ ಮೇಲಕ್ಕೆ ಏರಿದೆ.
ನುಗ್ಗೇಕಾಯಿ ಕೆ ಜಿ ಗೆ100 ತಲುಪಿದ್ದರೆ ಬೀನ್ಸ್ 80 , ಕ್ಯಾರೆಟ್ 50 , ಬದನೇಕಾಯಿ 50 , ಹೀಗೆ ಯಾವ ತರಕಾರಿಯೂ ಕಡಿಮೆ ದರದಲ್ಲಿ ಕೈಗೆಟುಕುವ ಸ್ಥಿತಿಯಲ್ಲಿಲ್ಲ.
ಕಳೆದೆರಡು ತಿಂಗಳುಗಳ ಹಿಂದೆಯಷ್ಟೇ ಬಡಾವಣೆಗಳಲ್ಲಿ ಕಾಣಸಿಗುತ್ತಿದ್ದ ತಳ್ಳುವ ತರಕಾರಿ ಗಾಡಿಗಳವರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗದೇ ಬರುವುದನ್ನೇ ನಿಲ್ಲಿಸಿದ್ದುˌಶ್ರೀಸಾಮಾನ್ಯ ತರಕಾರಿಗಳನ್ನು ಕೊಳ್ಳಲು ಅಂಗಡಿಗೆ ಹೋಗುವುದೇ ವಿರಳವಾಗಿದ್ದರೆ ಬಡುವನಂತೂ ಟಮೋಟೋ ಕೊಳ್ಳುತ್ತಲೇ ಇಲ್ಲ.
ಟಮೋಟೋ ಬೆಳೆ ಬರುತ್ತಿರುವುದು ಕಡಿಮೆ ಯಾದ್ದರಿಂದ ದರ ಹೆಚ್ಚುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಸಣ್ಣ ಪುಟ್ಟ ತರಕಾರಿ ಬೆಳೆಗಳು ಕೊಳೆಯುತ್ತಿದ್ದು ಬೆಳೆ ನೆಲಕಚ್ಚಿದೆ. ಒಟ್ಟಾರೆˌ ಎಲ್ಲಾ ಬೆಲೆಗಳು ಗಗನಕ್ಕೇರಿರುವುದರಿಂದ ದುನಿಯಾ ದುಬಾರಿ ಯಾಗಿದೆ
Previous Articleಬೆಳೆವಿಮೆಗೆ ಜೂ.30 ಕೊನೆ ದಿನ
Next Article ಹೆಲ್ಮೆಟ್ ಹಾಕಿದ್ದರೂ ದಂಡ ಬೀಳಬಹುದು, ಹುಷಾರು!