ಬೆಂಗಳೂರು, ಜುಲೈ 01:
ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಯೋಜನೆಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ವೈಫಲ್ಯ ಹಾಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಹಲವಾರು ವಿಷಯಗಳು ಆಡಳಿತ ಮತ್ತು ಪ್ರತಿಪಕ್ಷ ನಡುವೆ ವಾಕ್ ಸಮರಕ್ಕೆ ಕಾರಣವಾಗಿದೆ.
ಈ ವಿಷಯಗಳ ಮುಖಾಮುಖಿ ಚರ್ಚೆಗೆ ಇದೀಗ ವೇದಿಕೆ ಸಜ್ಜುಗೊಂಡಿದ್ದು ರಾಜ್ಯ ವಿಧಾನ ಮಂಡಳದ ಮುಂದುವರಿದ ಬಜೆಟ್ ಹಾಗೂ ಮುಂಗಾರು ಅಧಿವೇಶನ ಈ ತಿಂಗಳ 15ರಿಂದ 26ರ ವರೆಗೆ ನಡೆಯಲಿದೆ.
ವಿಧಾನ ಮಂಡಲ ಮುಂಗಾರು ಅಧಿವೇಶನವನ್ನು 10 ದಿನಗಳ ಕಾಲ ನಡೆಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸಚಿವ ಸಂಪುಟ ತಮಗೆ ನೀಡಿದ್ದ ಅಧಿಕಾರವನ್ನು ಬಳಸಿ ಇದೀಗ ಜುಲೈ 15 ರಿಂದ 26ರ ವರೆಗೆ ಅಧಿವೇಶನ ಸಮಾವೇಶಗೊಳ್ಳಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಮನವಿ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಕೆ ಪಾಟೀಲ್ ಅಧಿವೇಶನದ ವೇಳಾಪಟ್ಟಿ ಪ್ರಕಟಿಸಲು ಅವಕಾಶ ನೀಡುವಂತೆ ರಾಜ್ಯಪಾಲರನ್ನು ಕೋರಿದ್ದಾರೆ.
Previous Articleಸತ್ಯ ಶೋಧನೆಗೆ ಮುಂದಾದ ಕೆಪಿಸಿಸಿ.
Next Article ಗಗನಯಾತ್ರೆ ಮಾಡಬೇಕಾ..ಇಲ್ಲಿದೆ ಸಿಹಿ ಸುದ್ದಿ..