ಬೆಂಗಳೂರು, ಆ.16-
ರಾಜಧಾನಿ ಮಹಾನಗರ ಬೆಂಗಳೂರಿನಿಂದ ನಿಗೂಢವಾಗಿ ನಾಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಕೊನೆಗೂ ಪತ್ತೆಯಾಗಿದ್ದಾರೆ ಆದರೆ ಆತ ನಾನು ಜೈಲಿಗೆ ಬೇಕಾದರೂ ಹೋಗುತ್ತೇನೆ, ಮನೆಗೆ ಬರುವುದಿಲ್ಲ ಎಂದು ರಚ್ಚೆ ಹಿಡಿದಿದ್ದಾನೆ
ಕಳೆದ ಒಂದು ವಾರದ ಹಿಂದೆ ಬೆಂಗಳೂರಿನಿಂದ ಕಾಣೆಯಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ವಿಪಿನ್ ಬೆನ್ನು ಬಿದ್ದ ಕೊಡಿಗೆಹಳ್ಳಿ ಪೊಲೀಸರು ಆತನನ್ನು ನೋಯ್ಡಾದಲ್ಲಿ ಪತ್ತೆ ಹಚ್ಚಿದ್ದಾರೆ.
ಈಗ ನಾಪತ್ತೆಯಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ ಆತನ ಪತ್ನಿ, ಪೊಲೀಸರು ನನ್ನ ಗಂಡನನ್ನು ಹುಡುಕುತ್ತಿಲ್ಲ ನನ್ನ ದೂರ ಸ್ವೀಕರಿಸಲು ಕೂಡ ತಡ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ನೋಯ್ಡಾದಲ್ಲಿ ಪತ್ತೆ ಹಚ್ಚಿದ್ದಾರೆ.ವಿಚಾರಣೆ ವೇಳೆ, ತಾನೇ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದಾನೆ.
ಪತಿ ಹಾಗೂ ಪತ್ನಿ ನಡುವೆ ವಯಸ್ಸಿನ ಅಂತರವಿದೆ. ಟೆಕ್ಕಿ ವಿಪಿನ್ ತನಗಿಂತ ಎಂಟು ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಪತ್ನಿಗೆ 42 ವರ್ಷ, ವಿಪಿನ್‌ಗೆ 34 ವರ್ಷ.
ಮೊದಲ ಪತಿಯನ್ನು ತೊರೆದಿದ್ದ ಆಕೆಯೊಂದಿಗೆ ಸಖ್ಯ ಹೊಂದಿದ್ದ ವಿಪಿನ್ ಬಳಿಕ ಅವರನ್ನು ಮದುವೆಯಾಗಿದ್ದ. ಮೊದ ಮೊದಲು, ಎಲ್ಲವೂ ಚೆನ್ನಾಗಿಯೇ ಇತ್ತು. ವಯಸ್ಸಿನಲ್ಲಿ ದೊಡ್ಡವಳಾದ ಕಾರಣಕ್ಕೋ ಏನೋ ಆಕೆ ಮನೆಯಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸ ತೊಡಗಿದರು ಎಲ್ಲವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡರು ಇದು ವಿಪಿನ್‌ಗೆ ಕಿರಿಕಿರಿ ಎಣಿಸತೊಡಗಿತು ಆ ನಂತರದಲ್ಲಿ ಆತ ಇದನ್ನು ಹಿಂಸೆ ಎಂದು ಪರಿಗಣಿಸ ತೊಡಗಿದರು.
ಈ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಬೆಳೆಯಿತು ಪ್ರತಿ ವಿಷಯಕ್ಕೂ ಇಬ್ಬರಲ್ಲೂ ಹೊಂದಾಣಿಕೆ ಕೊರತೆ ಕಾಣಿಸಿಕೊಂಡು ವಾಗ್ವಾದ ನಡೆಯತೊಡಗಿತು.
ಇದನ್ನು ಪೋಲೀಸರ ಬಳಿ ಹೇಳಿಕೊಂಡ ಆತ ತನ್ನ
ಪತ್ನಿ ನನಗೆ ಮಾನಸಿಕ ಹಿಂಸೆ ನೀಡುತ್ತಾಳೆ. ಎಲ್ಲವನ್ನೂ ನಿಯಂತ್ರಣ ಮಾಡುತ್ತಾ, ಮನೆಯಲ್ಲೆಲ್ಲಾ ಸಿಸಿಟಿವಿ ಹಾಕಿಸಿ ಮೇಲೆ ನಿಗಾ ಇಟ್ಟಿದ್ದಾರೆ.ಇದರಿಂದ
ಮನನೊಂದು ಆಕೆಯ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾನೆ.
ಪತಿ ಕಾಣೆಯಾದ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಗೋಳು ತೋಡಿಕೊಂಡಿದ್ದ ಮಹಿಳೆ, ಪ್ರಧಾನ ಮಂತ್ರಿಗೂ ಎಕ್ಸ್ ಈ ಪೋಸ್ಟನ್ನು ಟ್ಯಾಗ್ ಮಾಡಿದ್ದಳು.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ, ನಾನು ಮನೆಗೆ ಹೋಗುವುದಿಲ್ಲ ಎಂದು ಟೆಕ್ಕಿ ಪಟ್ಟು ಹಿಡಿದಿದ್ದಾನೆ.
ನನ್ನನ್ನು ಜೈಲಿಗೆ ಬೇಕಿದ್ದರೂ ಹಾಕಿ ಆದರೆ ನಾನು ಮತ್ತೆ ಮನೆಗೆ ಹೋಗಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಈ ಗಂಡ- ಹೆಂಡತಿ ಬಿಕ್ಕಟ್ಟನ್ನು ಹೇಗೆ ಪರಿಹರಿಸುವುದು ಎಂದು ಅರ್ಥವಾಗದೆ ಕೊಡಿಗೇಹಳ್ಳಿ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ
Previous Articleರಾಜ್ಯ ಸರ್ಕಾರಿ ನೌಕರರಿಗೆ ಹೊಸ ಟ್ಯಾಗ್
Next Article ಪಶ್ಚಿಮಘಟ್ಟ ಉಳಿಸಲು ಸಚಿವ ಖಂಡ್ರೆ ಪ್ಲಾನ್.