ಮಂಡ್ಯ,ಡಿ.13-ಜೈಲಿನಲ್ಲಿದ್ದ ಮಗನನ್ನು ನೋಡಲು ಬಂದ ತಂದೆ ಬಂಧಿತನಾಗಿರುವ ಘಟನೆ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಗನಿಗಾಗಿ ಜೈಲಿಗೆ ತಂದಿದ್ದ ಬಟ್ಟೆ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾಗಿ ಪುತ್ರನ ದುಶ್ಚಟಕ್ಕೆ ಅಮಾಯಕ ತಂದೆ ಜೈಲು ಪಾಲಾಗಿದ್ದಾರೆ.
ರೌಡಿಶೀಟರ್ ಮಧುಸೂಧನ ಎಂಬಾತನ ತಂದೆ ಗಾಂಜಾ ತಂದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ. ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ಮಧುಸೂಧನ್, ತನ್ನ ತಂದೆಗೆ ಸ್ನೇಹಿತ ನೀಡುವ ಬಟ್ಟೆ ಬ್ಯಾಗ್‌ಅನ್ನು ತರುವಂತೆ ತಂದೆಗೆ ತಿಳಿಸಿದ್ದ.
ಮಧುಸೂದನ್ ಸೂಚನೆಯಂತೆ ಆತನ ತಂದೆ ಶಿವಣ್ಣ ಜೈಲಿಗೆ ಬಟ್ಟೆ ಬ್ಯಾಗ್‌ಅನ್ನು ತಂದಿದ್ದು, ಜೈಲು ಸಿಬ್ಬಂದಿ ಬ್ಯಾಗ್ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದ್ದು. ತಕ್ಷಣ ಜೈಲು ಸಿಬ್ಬಂದಿ ಶಿವಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಶಿವಣ್ಣ ಮಗನ ಸೂಚನೆಯಂತೆ ಬ್ಯಾಗ್ ತಂದೆ ಎಂದು ಹೇಳಿದ್ದಾರೆ. ಗಾಂಜಾ ಇದ್ದ ಬಗ್ಗೆ ತನಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಇನ್ನೊಂದೆಡೆ ತಾನೇ ಬ್ಯಾಗ್ ತರಿಸಿದ್ದಾಗಿ ಮಧುಸೂದನ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ.
ಸಹ ಕೈದಿ ಸಂಜು ಸೂಚನೆಯಂತೆ ಮಧುಸೂಧನ್ ಬ್ಯಾಗ್ ತರಿಸಿದ್ದಾನೆ. ಈಗ ಎನ್ ಡಿ ಪಿಎಸ್ ಕಾಯ್ದೆಯಡಿ ಶಿವಣ್ಣ ಬಂಧನವಾಗಿದ್ದು, ಬ್ಯಾಗ್ ಕೊಟ್ಟ ಮಧುಸೂಧನನ ಸ್ನೇಹಿತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
Previous Articleಕೌನ್ಸೆಲಿಂಗ್ ಮೂಲಕ ಸಬ್ ರಿಜಿಸ್ಟರ್ ಗಳ ವರ್ಗಾವಣೆ.
Next Article ಒಂದು ದೇಶ ಒಂದು ಚುನಾವಣೆ ಇದಕ್ಕಾಗಿ ಅಂತೆ.


3 ಪ್ರತಿಕ್ರಿಯೆಗಳು
Дом из клееного бруса или каркасник — что лучше для СПб
Mostbet: qualidade premium, bГґnus gigante e emoГ§ГЈo 24 horas – https://mostbetpt.pro/como-se-registrar/ , Descubra o Mostbet: bГґnus de 200% + 250 rodadas grГЎtis para novos jogadores .
Spin like the casino personally insulted your wallet – https://clobetasolbuy.com , The screen already knows you’re about to break it .