ಬೆಂಗಳೂರು,ಜ.23:
ಕಲಿಯುಗದ ಆರಾಧ್ಯ ದೈವ ಎಂದೆ ಪೂಜಿಸಲ್ಪಡುವ ತಿರುಪತಿಯ ವೆಂಕಟೇಶ್ವರನನ್ನು ಆರಾಧಿಸಲು ತೆರಳುವ ಭಕ್ತರು ವಸತಿ ಹಾಗೂ ದೇವರ ದರ್ಶನಕ್ಕೆ ಪರದಾಡುತ್ತಾರೆ.ಈ ಭಕ್ತರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ ಇದೀಗ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ರಾಜ್ಯ ಸರ್ಕಾರವು ತಿರುಪತಿಯ ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುವ ರಾಜ್ಯದ ಯಾತ್ರಾರ್ಥಿಗಳಿಗೆ 200 ಕೋಟಿಗಳ ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿಯಲ್ಲಿ ಈಗಾಗಲೇ 110 ಹವಾ ನಿಯಂತ್ರಿತ ಕೊಠಡಿಗಳ ಬ್ಲಾಕ್ -2 ( ಹಂಪಿ ಬ್ಲಾಕ್) ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾರ್ಪಣೆಗೊಳಿಸಲಾಗಿದೆ.
ಕರ್ನಾಟಕ ಛತ್ರದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಸಂಕೀರ್ಣಗಳ ಪೈಕಿ 132 ಹವಾನಿಯಂತ್ರಣರಹಿತ ಕೊಠಡಿಗಳನ್ನು ಹೊಂದಿರುವ ಐಹೊಳೆ ಬ್ಲಾಕ್ ಕಟ್ಟಡವನ್ನು ಮಂಗಳವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.
ಈ ಕಟ್ಟಡದಲ್ಲಿನ ಪ್ರತಿ ಕೊಠಡಿಗಳಿಗೆ 24 ಗಂಟೆಗಳ ಅವಧಿಗೆ ಕೊಠಡಿ ನಿರ್ವಹಣಾ ಶುಲ್ಕ ರೂ.1350/- (+ಜಿಎಸ್ ಟಿ) ನಿಗದಿ ಪಡಿಸಿದ್ದು, ಕಡಿಮೆ ಬೆಲೆಯಲ್ಲಿ ಸುಸಜ್ಜಿತ ಕೊಠಡಿಗಳನ್ನು ಯಾತ್ರಾರ್ಥಿಗಳಿಗೆ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ.
ಕಲ್ಯಾಣ ಮಂಟಪ ಪೂರ್ಣ:
ನೂತನವಾಗಿ ತಿರುಮಲದಲ್ಲಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣ ಮತ್ತು ಶ್ರೀ ಕೃಷ್ಣದೇವರಾಯ ಬ್ಲಾಕ್ ನಲ್ಲಿನ 36 ಹವಾ ನಿಯಂತ್ರಿತ ಸೂಟ್‌ಗಳನ್ನು ಹಾಗೂ 500 ಆಸನಗಳ ಸಾಮರ್ಥ್ಯವುಳ್ಳ ತಿರುಮಲದಲ್ಲಿಯೇ ಬೃಹತ್ ಹಾಗೂ ನವೀನ ಮಾದರಿಯ ಸುಸಜ್ಜಿತ ಕಲ್ಯಾಣ ಮಂಟಪವಾದ ಶ್ರೀ ಕೃಷ್ಣ ಒಡೆಯರ್ ಬ್ಲಾಕ್ ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಅಂತಿಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ.
ತಿರುಪತಿ ಹಾಗೂ ತಿರುಚಾನೂರಿನಲ್ಲಿ ಕರ್ನಾಟಕ ರಾಜ್ಯ ಛತ್ರದಲ್ಲಿ ಹಾಲಿ ಇರುವ 24 ಕೊಠಡಿಗಳನ್ನು ಮತ್ತು ಕಲ್ಯಾಣ ಮಂಟಪಗಳನ್ನು ನವೀಕರಣಗೊಳಿಸಿ, ಯಾತ್ರಾರ್ಥಿಗಳಿಗೆ ಹಂಚಿಕೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಛತ್ರದಲ್ಲಿ 50 ಸುಸಜ್ಜಿತ ಕೊಠಡಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲು ಯೋಜನೆ ಸಿದ್ಧಗೊಳಿಸಲಾಗುತ್ತಿದೆ.
ಕಲ್ಯಾಣ ಮಂಟಪ ಬ್ಲಾಕ್:
ಕಲ್ಯಾಣ ಮಂಟಪ ಬ್ಲಾಕ್ ಹಾಗೂ ವಿವಿಐಪಿ ಕೊಠಡಿಗಳ ಬ್ಲಾಕ್ 2025ರ ಏಪ್ರಿಲ್ ಅಥವಾ ಮೇ ಮಾಹೆಯಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದ್ದು, ಸದರಿ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಸಿಎಂ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನೆರವೇರಿಸಲಾಗುವುದು.
ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ ದೇವಾಲಯಗಳ ವಸತಿ ಕಾಯ್ದಿರಿಸುವಿಕೆಯ ವೆಬ್ಸೈಟ್ Karnatakatemplesaccommodation.com ಮೂಲಕ ಶೇ.60% ರಷ್ಟು ಆನಗ ಲೈನ್ ಮೂಲಕ ಹಾಗೂ ಶೇ.40% ಆಫ್ ಲೈನ್ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಿ ಅನುಕೂಲ ಮಾಡಿಕೊಡಲಾಗುತ್ತಿದೆ.
Previous Articleರಾಜ್ಯ ಸಿನಿಮಾ ಪ್ರಶಸ್ತಿ ಯಾರಿಗೆಲ್ಲಾ ಗೊತ್ತಾ
Next Article ಭೀಭತ್ಸ ಹತ್ಯೆ – ಬೆಚ್ಚಿ ಬಿದ್ದ ಜನ

15 ಪ್ರತಿಕ್ರಿಯೆಗಳು
betmgm New Jersey online casino betmgm play betmgm HI
mostbet ios ilova mostbet ios ilova
Dive deep into themed adventures and bonus quests. crown coins casino offers quest-based rewards for engaging play. Quest, win, and repeat!

hacksaw gaming stake Originals + Pragmatic Play + Evolution + Hacksaw + Nolimit = unbeatable game selection. Crypto speed included.

DraftKings exclusive games Casino: Wins start here. New players unlock 500 spins with a $5 bet and up to $1K credits on first losses. Join the action now!