ಚೆನ್ನೈ
ದ್ರಾವಿಡ ನಾಡು ತಮಿಳುನಾಡಿನ ರಾಜಕೀಯದಲ್ಲಿ ಇದೀಗ ಮತ್ತೊಂದು ಸಂಚಲನ ಸೃಷ್ಠಿಯಾಗಿದೆ. ತಮಿಳು ಸಿನಿಮಾ ರಂಗದ ಪುದಿಯ ದಳಪತಿ
ನಟ ವಿಜಯ್ ಇದೀಗ ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ.
ತಮ್ಮ ಅಭಿಮಾನಿಗಳು ಬೆಂಬಲಿಗರು ಹಾಗೂ ಇತರೆ ಪಕ್ಷಗಳ ಹಲವು ಮುಖಂಡರೊಂದಿಗೆ ತಮ್ಮ ಕಚೇರಿಯಲ್ಲಿ ಪಕ್ಷದ ಹೆಸರು ಮತ್ತು ಧ್ವಜವನ್ನು ಅನಾವರಣಗೊಳಿಸಿದ್ದಾರೆ.
ದಳಪತಿ ವಿಜಯ್ ತಮ್ಮ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂ’ Tamizhaga Vetri Kazhagam ಎಂದು ನಾಮಕರಣ ಮಾಡಿದ್ದಾರೆ ತಮಿಳಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡು ವಿಜಯ ಪಕ್ಷ’ ಇದು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.
ಚಿತ್ರರಂಗದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಪಡೆಯಲು ಹೊಂದಿರುವ ವಿಜಯ್ ಅವರಿಗೆ ದೊಡ್ಡ ಪ್ರಮಾಣದ ಜಾತಿ ಬಲವೂ ಇದೆ ಎನ್ನಲಾಗುತ್ತಿದೆ. ನಟ ವಿಜಯಕಾಂತ್ ನಿಧನ ನಂತರ ಅವರ ಪಕ್ಷ ಡಿಎಂಡಿಕೆ ಬಹುತೇಕ ಅಸ್ತಿತ್ವ ಕಳೆದುಕೊಂಡಿದ್ದು ಕಮಲಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮೈಯಂ ಅಂತಹ ದೊಡ್ಡ ಪರಿಣಾಮ ಬೀರಿಲ್ಲ ಹೀಗಾಗಿ ಲಭ್ಯವಿರುವ ವಾತಾವರಣದಲ್ಲಿ ದಳಪತಿ ವಿಜಯ್ ಅವರ ಪಕ್ಷ ಆಡಳಿತರೂಢ ಡಿಎಂಕೆಗೆ ಸವಾಲು ತರಲಿದೆ ಎಂದು ವಿಶ್ಲೇಷಿಸಲಾಗಿದೆ

2 ಪ್ರತಿಕ್ರಿಯೆಗಳು
mcluck Wisconsin mcluckcasinogm mcluck Р Рђ
wowvegasus.com impresses with its massive collection of mod slots, current casino features, and alluring no-deposit bonuses to go to late users. As a legitimate community casino, it offers entertainment-focused gaming with licit prize opportunities in most US states.