ಬೆಂಗಳೂರು,ಸೆ.13: ಸೈಬರ್ ವಂಚನೆಗೆ ಕಡಿವಾಣ ಹಾಕಲು ದೇಶದಲ್ಲೇ ಮೊದಲ ಸೈಬರ್ ಕಮಾಂಡ್ ಸೆಂಟರ್ ನಗರದಲ್ಲಿ ಪ್ರಾರಂಭಗೊಂಡಿದೆ.
ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಂತಿ ಅವರನ್ನು ಡಿಜಿಪಿಯಾಗಿ ಕಮಾಂಡ್ ಸೆಂಟರ್‌ಗೆ ನೇಮಕ ಮಾಡಲಾಗಿದೆ.
ಕೇವಲ ಸೈಬರ್ ಅಪರಾಧಗಳ ಪತ್ತೆ ಸೀಮಿತವಾಗಿ ಪ್ರಾರಂಭಗೊಂಡಿರುವ ಕಮಾಂಡ್ ಸೆಂಟರ್‌ನಲ್ಲಿ ನಾಲ್ಕು ವಿಂಗ್‌ಗಳು ಕಾರ್ಯನಿರ್ವಹಣೆ ಮಾಡಲಿವೆ.
ಅದರಲ್ಲಿ ಸೈಬರ್ ಕ್ರೈಂ ವಿಂಗ್ ಸೈಬರ್ ಅಪರಾಧಗಳನ್ನು ಪತ್ತೆ ಮಾಡಿ, ದೂರು ದಾಖಲಿಸಿಕೊಂಡು ತನಿಖೆ ನಡೆಸಲಿದೆ. ಸೈಬರ್ ಸೆಕ್ಯೂರಿಟಿ ವಿಂಗ್, ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣ, ಸಾಫ್ಟ್‌ವೇರ್ ಹ್ಯಾಕ್ ಮಾಡುವವರನ್ನ ಪತ್ತೆ ಮಾಡಲಿದೆ.
ಐಡಿಟಿಯು ವಿಂಗ್, ಸೈಬರ್ ಅಪರಾಧಿಗಳ ಸ್ಥಳ ಪತ್ತೆ ಮಾಡುವುದು, ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಿಂದ ಮಾಹಿತಿ ಪಡೆಯುವುದು. ಐಪಿ ಅಡ್ರೆಸ್ ಪತ್ತೆ ಮಾಡಲಿದೆ.
ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಜನಜಾಗೃತಿ ದಳವು, ಸೈಬರ್ ಕಮಾಂಡ್ ಸೆಂಟರ್ ಅಧಿಕಾರಿಗಳಿಗೆ ತರಬೇತಿ ನೀಡುವುದು. ಟೆಕ್ನಿಕಲ್ ಜ್ಞಾನ ವೃದ್ಧಿ ಮಾಡುವುದು. ಹೊಸ ತಂತ್ರಜ್ಞಾನಗಳ ತಿಳುವಳಿಕೆ ನೀಡುವುದು. ಮತ್ತು ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳಿಗೆ ಸೈಬರ್ ಅಪರಾಧ ಅರಿವು ಮೂಡಿಸುವ ಕೆಲಸ ಮಾಡಲುದೆ.
ಸೈಬರ್ ಕಮಾಂಡ್ ಸೆಂಟರ್ ಗೆ ಪ್ರತ್ಯೇಕ ಪೊಲೀಸ್ ಠಾಣೆಗಳು ನಗರದಲ್ಲಿವೆ. ಜಿಲ್ಲಾ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳು ಎಸ್ಪಿಗಳ ಅಧೀನದಲ್ಲಿ ತನಿಖೆಗೆ ಒಳಪಟ್ಟಿರುತ್ತವೆ.
ಈಗಾಗಲೇ 16 ಸಾವಿರ ಸೈಬರ್ ಪ್ರಕರಣಗಳು ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಅಲ್ಲದೇ ದಿನೇದಿನೆ ಸೈಬರ್ ಪ್ರಕರಣ ಹೆಚ್ಚಾಗತೊಡಗಿವೆ.
Previous ArticleDrugs peddler ಗಳ ಜೊತೆ ಇದ್ದ ಪೊಲೀಸರು.
Next Article ಕುರುಬರು ಪರಿಶಿಷ್ಟ ಪಂಗಡ ಪಟ್ಟಿ ಸೇರುತ್ತಾರಾ.?

