ಮಂಡ್ಯ : ಮಧ್ಯಪ್ರದೇಶ-ಉತ್ತರ ಪ್ರದೇಶದಲ್ಲಿ ಆರಂಭವಾಗಿದ್ದ ಬುಲ್ಡೋಜರ್ ರಾಜಕೀಯ ಸದ್ದಿಲ್ಲದೆ ಮಂಡ್ಯಕ್ಕೂ ಎಂಟ್ರಿ ಕೊಟ್ಟಿದೆ. ಬುಲ್ಡೋಜರ್ ಗೆ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಚಾಲನೆ ನೀಡುವಂತೆ ಮನವಿ ಮಾಡಿದ್ದಾರೆ.
ಮಂಡ್ಯ ನಗರದ ಶಕ್ತಿದೇವತೆ ಕಾಳಿಕಾಂಭ ದೇವಸ್ಥಾನದಲ್ಲಿ ಬುಲ್ಡೋಜರ್ ಗೆ ಪೂಜೆ ಸಲ್ಲಿಸಿ, ಈಡುಗಾಯಿ ಹೊಡೆದಿದ್ದಾರೆ.
ಮುಸ್ಲಿಂರು-ಹಿಂದೂಗಳು ಅಣ್ಣ-ತಮ್ಮಂದಿರ ರೀತಿ ಇದ್ದೇವೆ.ಈ ಭಾರತ ದೇಶದಲ್ಲಿ ನಾವೆಲ್ಲರೂ ಒಂದಾಗಿರಬೇಕೆಂಬ ಉದ್ದೇಶದಿಂದ ಈ ಪೂಜೆ. ಮಧ್ಯಪ್ರದೇಶ-ಉತ್ತರಪ್ರದೇಶ ಸಿಎಂಗಳ ರೀತಿ ನಮ್ಮ ಸಿಎಂ ಆಗಬೇಕು.ಜಹಾಂಗೀರ್ ಪೂರಿಯಲ್ಲಿ ನಡೆದ ಬುಲ್ಡೋಜರ್ ಕಾರ್ಯಕ್ರಮದ ತರಹ ನಮ್ಮ ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆ ನಡೆಯಬೇಕು.ನಾವು ಹಾಗೂ ಮುಸ್ಲಿಂರು ಅಣ್ಣ ತಮ್ಮಂದಿರು ಇದ್ದಾಗೆ.ನಮ್ಮ ಎತ್ತುಗಳಿಗೆ ಲಾಳ ಹಾಕುವವರು,ನಮ್ಮ ಸೈಕಲ್ ಗೆ ಪಂಚರ್ ಹಾಕುವವರು ಅವರೇ.ಹಿಂದೂ-ಮುಸ್ಲಿಂರ ಅನ್ಯೋನ್ಯತೆಯನ್ನ ತಡೆಯಲಾಗದೆ ಕೆಲವು ಮುಸ್ಲಿಂ ಕಿಡಿಗೇಡಿಗಳು, ದುಷ್ಕರ್ಮಿಗಳು ಕಿಡಿ ಹಚ್ಚಿದ್ದಾರೆ.ಅಂತ ಕಿಡಿಗೇಡಿಗಳ ಮನೆ ಮೇಲೆ ನಮ್ಮ ಕರ್ನಾಟಕದಲ್ಲೂ ಬುಲ್ಡೋಜರ್ ದಾಳಿ ಮಾಡಬೇಕು.
ಕರ್ನಾಟಕದ ನಮ್ಮ ಸಿಎಂ ಬುಲ್ಡೋಜರ್ ಬಸವಣ್ಣ ಆದ್ರೆ ಮಾತ್ರ.ನಮ್ಮ ಕರ್ನಾಟಕದಲ್ಲಿ ಹಿಂದೂಗಳು ತಲೆ ಎತ್ತಬಹುದು.
ಹನುಮ ಜಯಂತಿ, ರಾಮನವಮಿ, ಸಂತೋಷದಿಂದ ಆಚರಣೆ ಮಾಡಬಹುದು.ತಕ್ಷಣವೇ ಕಿಡಿಗೇಡಿ ಮುಸ್ಲಿಂರ ಮನೆ ಮೇಲೆ ಬುಲ್ಡೋಜರ್ ದಾಳಿ ಮಾಡಿ ಎಂದು ಗೃಹ ಸಚಿವ ಹಾಗು ಸಿಎಂಗೆ ಬಿಜೆಪಿ ಕಾರ್ಯಕರ್ತರ ಮನವಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ನಡೆದ ಬುಲ್ಡೋಜರ್ ಪೂಜೆ ಸಲ್ಲಿಸಿ ಮನವಿ ಮಾಡಲಾಯಿತು.