ನವ ದೆಹಲಿ:
ಮಲ್ಲಿಗೆಯ ಹೂವು ಅದರ ಪರಿಮಳ ಎಂತಹವರನ್ನು ಕೂಡ ಸೆಳೆಯುತ್ತದೆ ಹೆಣ್ಣು ಮಕ್ಕಳಂತೂ ಮಲ್ಲಿಗೆ ಕಂಡರೆ ಸಾಕು ಅದನ್ನು ಕಿತ್ತು ಮುಡಿಗೇರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಮಲ್ಲಿಗೆ ಮುಡಿದ ತಪ್ಪಿಗೆ ಬರೋಬ್ಬರಿ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ದಂಡ ಕಟ್ಟಿದ್ದಾರೆ
ಈ ರೀತಿ ದಂಡ ಕಟ್ಟಿದವರು ಬೇರಾರು ಅಲ್ಲ ಮಲಯಾಳ ಸಿನಿಮಾದ ಜನಪ್ರಿಯ ನಟಿ ನವ್ಯಾ ನಾಯರ್.
ಕೇರಳದ ಅತಿ ದೊಡ್ಡ ಹಬ್ಬ ಓಣಂ ಆಚರಿಸಿಕೊಂಡು ಅವರು ತಮ್ಮ ತಂದೆ ತೆಗೆಸಿಕೊಟ್ಟ ಮಲ್ಲಿಗೆಯನ್ನು ಮುಡಿದು ಆಸ್ಟ್ರೇಲಿಯಾದರಲ್ಲಿ ಕೇರಳ ಸಮಾಜ ಆಯೋಜಿಸಿದ್ದ ಓಣಂ ಆಚರಣೆಗೆ ತೆರಳಿದರು.
ಕೇರಳದ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾದ ಮೆಲ್ಬರ್ನ್ ಗೆ ಮಲ್ಲಿಗೆ ಮುಡಿದುಕೊಂಡು ತೆರಳಿದ ಅವರು ಮೆಲ್ಬರ್ನ್ ವಿಮಾನ ನಿಲ್ದಾಣ ಇಳಿಯುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ನವ್ಯ ಅವರಿಗೆ ಒಂದು ಲಕ್ಷ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆಕೆ ಮಲ್ಲಿಗೆಯೊಂದಿಗೆ ಆಸ್ಟ್ರೇಲಿಯಾಕ್ಕೆ ಬಂದಿರುವುದು.
ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಯಾವುದೇ ಸಸ್ಯದ ಭಾಗವನ್ನು ವಿದೇಶದಿಂದ ತರುವ ಮುನ್ನ ಮಾಹಿತಿ ನೀಡಬೇಕು. ಹಾಗೂ ಅದಕ್ಕೆ ಅಗತ್ಯ ಅನುಮತಿಯನ್ನು ಪಡೆದುಕೊಳ್ಳಬೇಕು.
ಆದರೆ ನವ್ಯಾ ನಾಯರ್ ಅವರು ತಾವು ಮುಡಿದುಕೊಂಡು ಬಂದಿರುವ ಮಲ್ಲಿಗೆ ಬಗ್ಗೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಜೊತೆಗೆ ಅದಕ್ಕೆ ಅನುಮತಿಯನ್ನು ಪಡೆದಿಲ್ಲ ಹೀಗಾಗಿ ಅವರಿಗೆ ದಂಡ ವಿಧಿಸಿದ್ದಾರೆ.
ಮಲ್ಲಿಗೆ ಮುಡಿದ ತಪ್ಪಿಗೆ ದಂಡ ಪಾವಚ್ಚಿ ಹೊರಬಂದ ನವ್ಯೂ ನಾಯರ್ ಕೇರಳ ಸಮಾಜದ ಓಣಂ ಆಚರಣೆಯಲ್ಲಿ ತಮಗಾದ ಅನುಭವ ಹೇಳಿಕೊಂಡಿದ್ದಾರೆ ಇದೊಂದು ಹೊಸ ಅನುಭವ ಎಂದು ನಟಿ ನವ್ಯಾ ನಾಯರ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ.
Previous Articleಮುಂಬೈ ಅನ್ನು ಬೆಚ್ಚಿ ಬೀಳಿಸಿದ್ದ ವ್ಯಕ್ತಿ ಅರೆಸ್ಟ್.
Next Article Digital ಅರೆಸ್ಟ್ ನಲ್ಲಿ ಹಣ ಕಳೆದುಕೊಂಡ ಮಾಜಿ ಶಾಸಕ.