ಬೆಂಗಳೂರು,ನ.12-
ಕೆಲ ತಿಂಗಳ ಹಿಂದೆ ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ಬಳಿ ನಡೆದ ರೇವ್ ಪಾರ್ಟಿಯ
ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಸಿಸಿಬಿ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಹತ್ತು ಲಕ್ಷ ರೂಪಾಯಿ ಲಂಚ ಕೇಳಿದ ಆರೋಪ ಎದುರಿಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆರೋಪ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಸೂಚನೆ ನೀಡಿದೆ.
ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಆರೋಪದ ಸಂಬಂಧ ಸೂಕ್ತ ತನಿಖೆ ನವೆಂಬರ್ 21ರೊಳಗೆ ವರದಿ ನೀಡುವಂತೆ ಕಮೀಷನರ್ ಅವರಿಗೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
ಆರ್‌ಟಿಐ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್‌ಗೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
ಕಳೆದ ಮೇ 19ರಂದು ಹೊಸೂರು ಕೈಗಾರಿಕಾ ಪ್ರದೇಶದ ಗೋಪಾಲರೆಡ್ಡಿ ಫಾರ್ಮ್ ಹೌಸ್‌ನಲ್ಲಿ ಎಲ್.ವಾಸು ಎಂಬವರು ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದರು.
ಇದರಲ್ಲಿ ತೆಲುಗು ನಟಿ ಹೇಮಾ ಸೇರಿ ಹಲವರು ಭಾಗಿಯಾಗಿದ್ದರು. ಈ ಮಾಹಿತಿ ಮೇರೆಗೆ ಸಿಸಿಸಿ ಪೊಲೀಸರು ದಾಳಿ ನಡೆಸಿ, ಹೇಮಾ ಸೇರಿ ಐವರನ್ನು ಬಂಧಿಸಿದ್ದರು.
ಈ ವೇಳೆ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳ ಬಳಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳ ವಿರುದ್ಧ ಸುಳ್ಳು ವೈದ್ಯಕೀಯ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಲ್ಲದೆ, ಪ್ರಕರಣದಲ್ಲಿದ್ದ ಅಧಿಕಾರಿಗಳ ವಿರುದ್ಧ ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಆರೋಪ ಕೂಡ ಮಾಡಲಾಗಿದೆ.
Previous Articleಬೆಂಗಳೂರಲ್ಲಿ ಆಲ್ ಖೈದಾ ಉಗ್ರರು..?
Next Article ಸುಳ್ಳು ಹೇಳಿದ್ರಾ ಪ್ರಹ್ಲಾದ್ ಜೋಷಿ.?