ನವದೆಹಲಿ, Aug 30 : ಮಹಿಳೆಯರ ಮೇಲೆ ಎಸಗುವ ಅಪರಾಧ ಪ್ರಕರಣಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ದೇಶದ ಮೆಟ್ರೋ ನಗರಗಳ ಪೈಕಿ 3ನೇ ಸ್ಥಾನ ಪಡೆದಿದೆ.
ಮೊದಲ ಎರಡು ಸ್ಥಾನದಲ್ಲಿ ಕ್ರಮವಾಗಿ ದೆಹಲಿ ಮತ್ತು ಮುಂಬೈ ನಗರಗಳಿವೆ. ಈ ಮೂಲಕ ಸತತ ಮೂರನೇ ವರ್ಷ, ಎಲ್ಲಾ ಮೆಟ್ರೋಪಾಲಿಟನ್ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪಟ್ಟಿಯಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ.
2021 ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಹಿಂದಿನ ವರ್ಷಕ್ಕಿಂತ ಶೇ 40 ರಷ್ಟು ಹೆಚ್ಚಾಗಿದೆ, 1,226 ಅತ್ಯಾಚಾರ ಘಟನೆಗಳು ಮತ್ತು 136 ವರದಕ್ಷಿಣೆ ಸಾವುಗಳು ಸಂಭವಿಸಿವೆ.
2021ನೇ ಸಾಲಿನ ರಾಷ್ಟ್ರೀಯ ಅಪರಾಧ ಬ್ಯೂರೋದ ವರದಿ ಪ್ರಕಟವಾಗಿದ್ದು, ಅದರನ್ವಯ, ಕಳೆದ ವರ್ಷ ದೇಶಾದ 19 ಮೆಟ್ರೋ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧದ 43414 ಪ್ರಕರಣ ದಾಖಲಾಗಿವೆ. ಈ ಪೈಕಿ ದೆಹಲಿಯಲ್ಲಿ 13892 ಪ್ರಕರಣ ದಾಖಲಾಗಿದೆ. ದೆಹಲಿ ನಂತರದ ಸ್ಥಾನದಲ್ಲಿ ಮುಂಬೈ (5543) ಮತ್ತು ಬೆಂಗಳೂರು (3127) ನಗರಗಳಿವೆ.ಈ ಎರಡೂ ನಗರಗಳು, 19 ಮೆಟ್ರೋ ನಗರಗಳಲ್ಲಿನ ಇಂಥ ಅಪರಾಧ ಪ್ರಕರಣಗಳ ಪೈಕಿ ಕ್ರಮವಾಗಿ ಶೇ.12.76 ಮತ್ತು ಶೇ.7.2ರಷ್ಟುಪಾಲು ಹೊಂದಿವೆ ಎಂದು ವರದಿ ಹೇಳಿದೆ.
ಕಳೆದ ವರ್ಷದಲ್ಲಿ ಪ್ರತಿ ದಿನ ಸರಾಸರಿ ಮೂರು ಅತ್ಯಾಚಾರಗಳು ವರದಿಯಾಗುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಆರ್ ಸಿಬಿ) ವರದಿ ತೋರಿಸಿದೆ. 2020ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಇಂಥ ಪ್ರಕರಣಗಳಲ್ಲಿ ಶೇ.40ರಷ್ಟುಭಾರೀ ಏರಿಕೆಯಾಗಿದೆ. ಜೊತೆಗೆ ದೆಹಲಿಯಲ್ಲಿ ಪ್ರತಿ ದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಮಹಿಳೆಯರ ಅಪಹರಣ (3948), ಪತಿಯರ ಕ್ರೌರ್ಯ (4674), ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ (833)ದಲ್ಲೂ ದೆಹಲಿ ನಂ.1 ಸ್ಥಾನದಲ್ಲಿದೆ.
19 ಮೆಟ್ರೋ ನಗರಗಳಲ್ಲಿ ದಾಖಲಾದ ಒಟ್ಟಾರೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ದೆಹಲಿ ಪಾಲೇ ಶೇ.32.20ರಷ್ಟಿದೆ. ಈ ಮೂಲಕ ದೇಶದ ರಾಜಧಾನಿ ನವದೆಹಲಿ, ಮೆಟ್ರೋ ನಗರಿಗಳ ಪೈಕಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ನಗರವಾಗಿ ಹೊರಹೊಮ್ಮಿದೆ ಎಂದು ವರದಿ ಹೇಳಿದೆ.
ಸತತ ಮೂರನೇ ವರ್ಷ, ಎಲ್ಲಾ ಮೆಟ್ರೋಪಾಲಿಟನ್ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪಟ್ಟಿಯಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ. 2021 ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಹಿಂದಿನ ವರ್ಷಕ್ಕಿಂತ 40 ರಷ್ಟು ರ ಹೆಚ್ಚಾಗಿದೆ, 1,226 ಅತ್ಯಾಚಾರ ಘಟನೆಗಳು ಮತ್ತು 136 ವರದಕ್ಷಿಣೆ ಸಾವುಗಳು ಸಂಭವಿಸಿದವು.
ಜುಲೈನಲ್ಲಿ, ಹೊಸದಿಲ್ಲಿ ರೈಲು ನಿಲ್ದಾಣದ ವಿದ್ಯುತ್ ನಿರ್ವಹಣಾ ಕೊಠಡಿಯೊಳಗೆ ನಾಲ್ವರು ರೈಲ್ವೆ ಉದ್ಯೋಗಿಗಳು 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಗರವು ಭಾರೀ ಆಕ್ರೋಶಕ್ಕೆ ಸಾಕ್ಷಿಯಾಯಿತು
ಮಹಿಳೆಯರ ಮೇಲಿನ ದೌರ್ಜನ್ಯ ದೆಹಲಿಯೇ ನಂಬರ್ 1..ಬೆಂಗಳೂರು ಕಮ್ಮಿಯೇನಲ್ಲ
Previous Articleಮೋಹಕ ತಾರೆ ರಮ್ಯಾ ನಾಳೆ ಏನು ಹೇಳ್ತಾರೆ ಗೊತ್ತಾ..
Next Article ಜಪಾನ್ ಸರ್ಕಾರಕ್ಕೆಕುಡಿಯದವರಿಂದ ತಲೆನೋವು