ಚಿಕ್ಕಮಗಳೂರು.
ಸಮಾಜದ ಕಾರ್ಯಕ್ರಮವೊಂದರಲ್ಲಿ ರಾಜಕೀಯ ಭಾಷಣ ಮಾಡಲು ಹೋದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಸಭಿಕರಿಂದ ತೀವ್ರ ವಿರೋಧ ಎದುರಿಸುವ ಮೂಲಕ ಮುಜುಗರಕ್ಕೀಡಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಒಕ್ಕಲಿಗರ ಸಂಘ ಎಐಟಿ ವೃತ್ತದ ಬಳಿ ಬೆಳ್ಳಿ ಭವನ ನಿರ್ಮಾಣ ಮಾಡಿದೆ. ಸಮುದಾಯದ ಚಟುವಟಿಕೆಗಳಿಗಾಗಿ ನಿರ್ಮಾಣ ಮಾಡಿರುವ ಭವನದ ಉದ್ಘಾಟನೆಯನ್ನು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಚಾರ್ಜ್ ನೆರವೇರಿಸಿದರು.
ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದರು.
ಇದಕ್ಕೆ ಸಭೆಯಲ್ಲಿದ್ದ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದರು ಇದು ಸರ್ಕಾರ ಅಥವಾ ರಾಜಕೀಯ ಸಮಾರಂಭ ಅಲ್ಲ ಸಮುದಾಯದ ಸಮಾರಂಭವಾಗಿದೆ ಇಲ್ಲಿ ರಾಜಕೀಯ ಭಾಷಣ ಮಾಡಬೇಡಿ ಎಂದು ತಾಕೀತು ಮಾಡಿದರು.
ಇದರಿಂದ ತೀವ್ರ ಮುಜುಗರಕ್ಕೀಡಾದ ಸಚಿವ ಜಾರ್ಜ್ ಅವರು ಆಕ್ರೋಶಗೊಂಡು ಭಾಷಣಕ್ಕೆ ಅಡ್ಡಿಪಡಿಸಿ ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತದೆ’ ಎಂದು ಕಿಡಿಕಾರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಿಕರು ಸಚಿವ ಜಾರ್ಜ್ ಅವರ ಜೊತೆ ವಾಗ್ವಾದಕ್ಕಿಳಿದರು.ಆಗ
ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮತ್ತೆ ಮೈಕ್ ಬಳಿ ಬಂದ ಸಚಿವರು, ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.