ಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವ-2024. ವಿಶ್ವ ವಿಖ್ಯಾತ ಮೈಸೂರು ದಸರಾ ವೀಕ್ಷಣೆ ಮಾಡಲು ದೇಶ-ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮೈಸೂರು ಜಿಲ್ಲಾಡಳಿತ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ದಸರಾ ಗೋಲ್ಡ್ ಕಾರ್ಡ್, ದಸರಾ 2024 ಜಂಬೂಸವಾರಿ ವೀಕ್ಷಣೆ ಕಾರ್ಡ್, ಯುವ ದಸರಾ 2024 ಕಾರ್ಡ್, ಪಂಜಿನ ಕವಾಯತು ಬನ್ನಿ ಮಂಟಪ ಕಾರ್ಡ್ ಬಿಡುಗಡೆ ಮಾಡಿದೆ. ಇದರಿಂದ ದಸರಾ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇದರಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಲಾಗಿದ್ದು, ಜೊತೆಯಲ್ಲಿ ಯಾವ ರೀತಿಯಲ್ಲಿ ಈ ಕಾರ್ಡ್ ಪಡೆಯಬಹುದು ಎನ್ನುವ ಮಾಹಿತಿ ನೀಡಲಾಗಿದೆ.
ಈ ಕಾರ್ಡ್ ಪಡೆಯಲು ಇನ್ನು 3 ದಿನಗಳು ಮಾತ್ರ ಅವಕಾಶ ನೀಡಲಾಗಿದೆ. ನಂತರ 10 ರಂದು ಆಯುಧ ಪೂಜೆ ಮತ್ತು 11 ರಂದು ವಿಜಯದಶಮಿ, ಜಂಬೂಸವಾರಿ ಅದ್ದೂರಿಯಾಗಿ ಜರುಗಲಿದೆ.
- ಮೈಸೂರು ದಸರಾ ಗೋಲ್ಡ್ ಕಾರ್ಡ್ ಬುಕ್ ಮಾಡಲು ಒಬ್ಬರಿಗೆ ಬೆಲೆ: 6,500/- ರು ನಿಗದಿ ಮಾಡಲಾಗಿದೆ.
- ಈ ಕಾರ್ಡ್ ಇದ್ದಲ್ಲಿ ಜಂಬೂಸವಾರಿ ವೀಕ್ಷಣೆ
- ಪಂಜಿನ ಕವಾಯತು ವೀಕ್ಷಣೆ
- ಚಾಮುಂಡಿಬೆಟ್ಟ ಪ್ರವೇಶ
- ಚಾಮರಾಜೇಂದ್ರ ಮೃಗಾಲಯ ಪ್ರವೇಶ
- ಅರಮನೆ ಪ್ರವೇಶ ಮಾಡಬಹುದಾಗಿದೆ
- ಟಿಕೆಟ್ ಖರೀದಿಸಲು ಮೈಸೂರು ದಸರಾ ಅಫೀಷಿಯಲ್ ವೆಬ್ಸೈಟ್ ಅಲ್ಲಿ ನೋಡಬೇಕು.
- ದಸರಾ 2024 ಜಂಬೂಸವಾರಿ ವೀಕ್ಷಣೆ ಕಾರ್ಡ್ ಪಡೆಯಲು ಒಬ್ಬರಿಗೆ ಬೆಲೆ: 3,500/- ನಿಗದಿ ಮಾಡಿದ್ದಾರೆ
- ಈ ಕಾರ್ಡ್ ನಲ್ಲಿ ಆರಮನೆ ಆವರಣದೊಳಗೆ ಜಂಬೂ ಸವಾರಿ ವೀಕ್ಷಣೆ ಮಾಡಬಹುದಾಗಿದೆ.
- ಟಿಕೆಟ್ ಖರೀದಿಸಲು ಮೈಸೂರು ದಸರಾ ಅಫೀಷಿಯಲ್ ವೆಬ್ಸೈಟ್ ಅಲ್ಲಿ ನೋಡಬೇಕು.
- ಯುವ ದಸರಾ 2024 ಕಾರ್ಡ್ ಪಡೆಯಲು ಒಬ್ಬರಿಗೆ ಬೆಲೆ: 5000/- ನಿಗದಿ ಮಾಡಿದ್ದಾರೆ.
- ಈ ಕಾರ್ಡ್ ಇದ್ದಲ್ಲಿ 6 ಅಕ್ಟೋಬರ್ – ಶ್ರೇಯಾ ಘೋಷಾಲ್
- 7 ಅಕ್ಟೋಬರ್ – ರವಿ ಬಸ್ರೂರ್
- 8 ಅಕ್ಟೋಬರ್ – ಬಾದ್‌ಶಾ
- 9 ಅಕ್ಟೋಬರ್ – ಎ ಆರ್ ರೆಹಮಾನ್
- 10 ಅಕ್ಟೋಬರ್ – ಇಳಯರಾಜಾ ರವರ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.
- ಪಂಜಿನ ಕವಾಯತು ಬನ್ನಿ ಮಂಟಪ ಕಾರ್ಡ್ ಒಬ್ಬರಿಗೆ 1000ಇದ್ದು ಇದು ಸೋಲ್ಡ್ ಔಟ್ ಆಗಿದೆ.
ಬುಕಿಂಗ್ ಮಾಡುವುದು ಹೇಗೆ
- https://www.mysoredasara.gov.in/tickets ಮೈಸೂರು ದಸರಾ ಅಫೀಷಿಯಲ್ ವೆಬ್ಸೈಟ್ ಹೋಗಿ
- ಅಲ್ಲಿ ಬೇಕಾದ ಕಾರ್ಡ್ ಆಯ್ಕೆ ಮಾಡಿ ಅದರ ಕೆಳಗೆ ನೀಡಿರುವ ಟಿಕೆಟ್ ಬುಕಿಂಗ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನೋಂದಾಯಿತ ಮೊಬೈಲ್ ಸಂಖ್ಯೆ ಹೆಸರು ನೀಡಿ, ಕೋಪನ್ ನಂಬರ್ ಇದ್ದಲ್ಲಿ ಅದನ್ನು ನೀಡಿ ಹಣವನ್ನು ಪೇ ಮಾಡುವ ಮೂಲಕ ಬುಕ್ ಮಾಡಬಹುದಾಗಿದೆ.