ಬೆಂಗಳೂರು.
ರಾಜ ವಿಧಾನಸಭೆಯ ಮೂರೂ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್ ಮತ್ತು ಕೇಂದ್ರ ಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಿತು.
ಈ ಇಬ್ಬರ ರಾಜಕೀಯ ಭವಿಷ್ಯ ಎಲೆಕ್ಟ್ರಾನಿಕ್ ಯಂತ್ರದಲ್ಲಿ ಭದ್ರವಾಗಿ ಕುಳಿತಿದ್ದು ನವೆಂಬರ್ 23ರಂದು ಫಲಿತಾಂಶ ಸ್ಪೋಟಗೊಳ್ಳಲಿದೆ. ಇದು ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ.
ಈ ಜಿದ್ದಾಜಿದ್ದಿನ ಅಖಾಡದಲ್ಲಿ ಗೆಲ್ಲುವವರು ಯಾರು ಸೋಲುವವರು ಯಾರು ಎಂಬ ಕುರಿತಂತೆ ಸಾಕಷ್ಟು ಚರ್ಚೆ ಮತ್ತು ಲೆಕ್ಕಾಚಾರಗಳು ನಡೆದಿದೆ ಇದರ ನಡುವೆ ಬೆಟ್ಟಿಂಗ್ ಭರಾಟೆಯಿಂದ ನಡೆಯುತ್ತಿದೆ.
ಮತದಾನ ಮುಗಿಯುತಿದ್ದಂತೆ ಮಾತನಾಡಿದ ಯೋಗೇಶ್ವರ್ ಅವರು ಒಂದು ರೀತಿಯಲ್ಲಿ ಈ ಚುನಾವಣೆಯಲ್ಲಿ ತಾವು ಸೋಲು ಅನುಭವಿಸುತ್ತೇನೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಆದರೆ ವಾಸ್ತವ ಬೇರೆ ಇದೆ ಅವರ ಈ ಮಾತಿನ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ ಎನ್ನುತ್ತವೆ ಅವರ ಆಪ್ತ ಮೂಲಗಳು.
ಸ್ವತಃ ಯೋಗೇಶ್ವರ್ ತಾವು ಎಂದಿಗೂ ಸೋಲುತ್ತೇನೆ ಎಂದು ಹೇಳುವವರಲ್ಲ ಆದರೆ ಈ ಚುನಾವಣೆಯ ಅಕಾಡ ಜಿದ್ದಾಜಿದ್ದಿನಿಂದ ಕೂಡಿದ ಪರಿಣಾಮ ತಮ್ಮ ಆಪ್ತರಿಗೆ ಬೆಟ್ಟಿಂಗ್ ಕಟ್ಟಲು ಅನುಕೂಲವಾಗಲಿ ಎಂದು ಈ ರೀತಿ ಹೇಳಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ನ ಮತಗಳ ಪಟ್ಟಿಯನ್ನು ಹಿಡಿದುಕೊಂಡು ಕುಳಿತಿರುವ ಯೋಗೇಶ್ವರ್ ಆಪ್ತರು ತಮ್ಮ ನಾಯಕ ಕನಿಷ್ಠ ನಾಲ್ಕರಿಂದ 6000 ಅಂತರದಲ್ಲಿ ಗೆಲ್ಲುವುದು ನಿಶ್ಚಿತ ಆದರೆ ಮಾಧ್ಯಮಗಳಲ್ಲಿ ಅತಿ ಹೆಚ್ಚು ಪ್ರಚಾರ ಪಡೆದಿರುವ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ ಹೀಗಾಗಿ ನಿಖಿಲ್ ಕುಮಾರಸ್ವಾಮಿ ಪರ ವಿರುವ ವ್ಯಕ್ತಿಗಳಿಂದ ಬೆಟ್ಟಿಂಗ್ ಕಟ್ಟಿಸಿ ತಮ್ಮ ಆಪ್ತರಿಗೆ ನೆರವು ಮಾಡುವ ಲೆಕ್ಕಾಚಾರ ಯೋಗೇಶ್ವರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Previous Articleಇಎಸ್ಐ ವ್ಯವಸ್ಥೆಗೆ ಕನ್ನ.
Next Article ಈ ಕಳ್ಳರಿಗಾಗಿ 25 ವರ್ಷ ಹುಡುಕಾಟ ನಡೆದಿತ್ತು .