ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ತಡರಾತ್ರಿವರೆಗೆ ನಡೆದಿದ್ದು ಬರೋಬ್ಬರಿ ಎರಡೂವರೆ ಕೋಟಿ ರೂ. ಸಂಗ್ರಹವಾಗಿದೆ. ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಎಣಿಕೆ ಕಾರ್ಯ ನಡೆದಿದ್ದು ಕೇವಲ 34 ದಿನಗಳಲ್ಲಿ 2,57,25,859 ನಗದು ಸಂಗ್ರಹವಾಗಿದೆ. ಇದರೊಟ್ಟಿಗೆ, 127 ಗ್ರಾಂ ಚಿನ್ನ, 3,447 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಹದೇಶ್ವರನಿಗೆ ಅರ್ಪಿಸಿದ್ದಾರೆ.
ದಿನನಿತ್ಯದ ವಿವಿಧ ಸೇವಗಳನ್ನು ಹೊರತುಪಡಿಸಿ, ಹುಂಡಿಯಲ್ಲೇ ಎರಡೂವರೆ ಕೋಟಿ ಆದಾಯ ಬಂದಿದ್ದು ಕೊರೊನಾ ಬಳಿಕ ಭಕ್ತಸಾಗರವೇ ಬೆಟ್ಟಕ್ಕೆ ಹರಿದುಬರುತ್ತಿದೆ. ವಾರಾಂತ್ಯ ಹಾಗು ಸೋಮವಾರದಂದು ಚಿನ್ನದ ರಥ ಸೇವೆ ಮಾಡಲು ಕಿಕ್ಕೇರಿದು ಸೇರುತ್ತಿದ್ದಾರೆ.