ನಿಗದಿತ ಆದಾಯ ಮೂಲ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಪಾಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೋಕಾಯುಕ್ತ ಕಚೇರಿಗೆ ಹಾಜರಾಗಿ ಹೇಳಿಕೆ ಸಲ್ಲಿಸಿದ್ದಾರೆ.
ಶಿವಕುಮಾರ್ ವಿರುದ್ಧ ಸಲ್ಲಿಕೆಯಾಗಿರುವ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಈ ಬಗ್ಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಶಿವಕುಮಾರ್ ಅವರಿಗೆ ಸೂಚನೆ ನೀಡಿತು ಈ ಹಿನ್ನೆಲೆಯಲ್ಲಿ ಅವರು ಲೋಕಾಯುಕ್ತ ಕಚೇರಿಗೆ ಹಾಜರಾಗಿ ವಿವರ ಸಲ್ಲಿಸಿದರು.
ಲೋಕಾಯುಕ್ತ ಪೊಲೀಸ್ ತಮಗೆ ನೀಡಿದ್ದ ಸಮನ್ಸ್ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆಯ ಮಧ್ಯದಲ್ಲೇ ಎದ್ದು ಬಂದ ಶಿವಕುಮಾರ್ ಅವರು ಲೋಕಾಯುಕ್ತ ಕಚೇರಿಗೆ ಹಾಜರಾಗಿ ಡಿವೈಎಸ್ಪಿ ಸತೀಶ್ ಮುಂದೆ ಹೇಳಿಕೆ ಸಲ್ಲಿಸಿದರು.
ಡಿಕೆ ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣವನ್ನು ಈ ಹಿಂದೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಸ್ತಿತ್ವಕ್ಕೆ ಬಂದ ನಂತರ ಸಿಬಿಐಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಿತ್ತು.
ಸಂಗ್ರಹಗಳು
- ಏಪ್ರಿಲ್ 2026
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022

