ಹಬ್ಬಗಳಂದ್ರೆ ಸಂಭ್ರಮ, ಸಡಗರ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಅನೇಕ ಬಗೆಯ ವಿಶಿಷ್ಠ ಹಬ್ಬಗಳನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಪ್ರಸಿದ್ಧಿ, ವೈಶಿಷ್ಟ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆಯುತ್ತಿರುವ ಹಬ್ಬವೊಂದು ಒಮ್ಮೆ ಎಲ್ಲರನ್ನೂ ರೋಮಾಂಚನಗೊಳಿಸಬಲ್ಲದು!.ಹೌದು, ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ ಇಂದು ಸೀಗಮಾರಮ್ಮನ ಬಲಿ ಹಬ್ಬ ನಡೆಯಲಿದೆ. ಇಲ್ಲಿ ವ್ಯಕ್ತಿಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿ 6 ತಾಸಿನ ಬಳಿಕ ಮತ್ತೆ ಆ ವ್ಯಕ್ತಿ ಬದುಕಿ ಬರ್ತಾರಂತೆ! ಹೀಗೂ ಉಂಟೇ! ಎಂದು ಉದ್ಘಾರ ತೆಗೆದರೂ ಅಚ್ಚರಿಯೇನಿಲ್ಲ ಬಿಡಿ. ಕಳೆದ ತಿಂಗಳ 24ರಂದು ಈ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಇಂದು ತಡರಾತ್ರಿ ನರಬಲಿ ಆಚರಣೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.ಸೀಗಮಾರಮ್ಮ ದೇವಾಲಯದ ಅರ್ಚಕರು ದೇವಿಗೆ ನಡೆದುಕೊಳ್ಳುವ ಒಕ್ಕಲಿನ ವ್ಯಕ್ತಿಯೊಬ್ಬರ ಎದೆಯ ಮೇಲೆ ಕಾಲಿಟ್ಟಾಗ ಅವರ ಪ್ರಾಣ ಪಕ್ಷಿ ಹಾರಿಹೋಗಲಿದೆ. ಬಳಿಕ ಆ ವ್ಯಕ್ತಿಯನ್ನು ಶವದ ಮೆರವಣಿಗೆ ರೀತಿ ಮಾಡಲಾಗುತ್ತದೆ. ಈ ಮೆರವಣಿಗೆ ಮುಗಿದ ಬಳಿಕ ದೇವಿಯ ತೀರ್ಥವನ್ನು ಪ್ರೋಕ್ಷಣೆ ಮಾಡಿದಾಗ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬುದು ನಂಬಿಕೆ.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022
