ಬೆಂಗಳೂರು,ಜು.14- ಟ್ರಾಫಿಕ್ ಸಿಗ್ನಲ್ ಇದೆ ಎಂದು ಬೈಕ್ ನಿಲ್ಲಿಸಿದ ಡೆಲಿವರಿ ಬಾಯ್ ಮೇಲೆ ಮೂವರು ದುಷ್ಕೃರ್ಮಿ ಗಳು ಹಲ್ಲೆ ಮಾಡಿದ ಘಟನೆ ಮೋದಿ ಆಸ್ಪತ್ರೆ ಜಂಕ್ಷನ್ ಬಳಿ ಸಂಭವಿಸಿದೆ.
ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್ ಸಿಗ್ನಲ್ನಲ್ಲಿ ಕೆಂಪು ಬಣ್ಣದ ಲೈಟ್ ಇದೆ ಎಂದು ಬೈಕ್ ನಿಲ್ಲಿಸಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಅಪರಿಚಿತರು ದಾರಿ ಬಿಡುವಂತೆ ಹೇಳಿದ್ದಲ್ಲೆ ಹಲ್ಲೆ ಮಾಡಿದ್ದಾರೆ.
ಸಿಗ್ನಲ್ನಲ್ಲಿ ರೆಡ್ ಲೈಟ್ ಆನ್ ಆದಾಗ ಡೆಲಿವರಿ ಬಾಯ್ ಬೈಕನ್ನು ನಿಲ್ಲಿಸಿದ್ದಾರೆ. ಬೈಕ್ ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿದ್ದವರು ಹಾರ್ನ್ ಮಾಡಿ ಮುಂದೆ ಹೋಗುವಂತೆ ಸೂಚಿಸಿದ್ದರು. ಆಗ ಡೆಲಿವರಿ ಬಾಯ್, ತಾನು ಸಂಚಾರ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಹೇಳಿದ್ದಾರೆ. ನಂತರ ವಾಗ್ವಾದ ನಡೆದು, ಕಾರಿನಲ್ಲಿದ್ದವರು ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ.
ಅಪರಿಚಿತರು ಪದೇ ಪದೇ ಹಲ್ಲೆ ಮಾಡಿ, ಒದ್ದು ಸ್ಥಳದಿಂದ ಕಾಲ್ಕಿತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಡೆಲಿವರಿ ಬಾಯ್ ಗಾಯಗೊಂಡು ರಸ್ತೆಬದಿಯಲ್ಲಿ ರಕ್ತಸ್ರಾವವಾಗಿ ಬಿದ್ದಿದ್ದಾರೆ.
ನಂತರ ಡೆಲಿವರಿ ಬಾಯ್ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿ, ಹಲ್ಲೆಕೋರರು ಮದ್ಯದ ಅಮಲಿನಲ್ಲಿದ್ದಂತೆ ಕಾಣಿಸಿತ್ತು ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಿರುವುದಾಗಿ ದೃಢಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Previous Articleಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!
Next Article ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !