Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಿದ್ದರಾಮಯ್ಯ ಅವರಿಗಿಂತ ಚಾಣಾಕ್ಷರಂತೆ‌ ನಿರ್ಮಲಾ ಸೀತಾರಾಮನ್.
    Trending

    ಸಿದ್ದರಾಮಯ್ಯ ಅವರಿಗಿಂತ ಚಾಣಾಕ್ಷರಂತೆ‌ ನಿರ್ಮಲಾ ಸೀತಾರಾಮನ್.

    vartha chakraBy vartha chakraಜುಲೈ 29, 20241 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಜು.28:
    ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೊಬ್ಬರೇ ಚಾಣಾಕ್ಷರು ಎಂದುಕೊಂಡಿದ್ದಾರೆ ನಾನು ಅವರಿಗಿಂತ ಚಾಣಾಕ್ಷತನ ತೋರಬಲ್ಲೆ ಎಂದು ಹೇಳಿರುವ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಹೊಣೆ ಸಿದ್ದರಾಮಯ್ಯ ಅವರದ್ದಾಗಿದೆ ಎಂದಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕುಗಳಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧ ಖಂಡಿತವಾಗಿ ಕಾನೂನಿನ ಪ್ರಕಾರವೇ ಕ್ರಮ ಆಗುತ್ತದೆ. ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ನೆಲದ ಕಾನೂನಿಗಿಂತ ಯಾರೊಬ್ಬರೂ ದೊಡ್ಡವರಲ್ಲ ಎಂದು ಹೇಳಿದರು.
    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಯೂನಿಯನ್‌ ಬ್ಯಾಂಕ್‌ನಲ್ಲಿ ಹಣ ವರ್ಗಾವಣೆಯಾಗಿದ್ದರೆ ಅದರ ಹೊಣೆಗಾರಿಕೆಯನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಬೇಕೇ ವಿನಃ ಫಲಾಯನ ಮಾಡಬಾರದು ಎಂದು ಹೇಳಿದರು
    ನಾನು ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳುವುದಾದರೆ ಸಿದ್ದರಾಮಯ್ಯನವರು ಹಾಗೆಯೇ ಹೇಳಿಕೊಳ್ಳಲಿ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಅವರೊಬ್ಬರೇ ಚಾಣಾಕ್ಷ ಎಂದುಕೊಂಡಿದ್ದರೆ ನನಗೂ ಅದರ ಹತ್ತು ಪಟ್ಟು ಚಾಣಾಕ್ಷತನ ತೋರಿಸಲು ಬರುತ್ತದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನಾನು ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು
    ಮಹರ್ಷಿ ವಾಲೀಕಿ ನಿಗಮದಲ್ಲಿ ಹಗರಣ ನಡೆದಿಲ್ಲ ಎಂದಿದ್ದರೆ ಅವರ ಸಂಪುಟದ ಸಚಿವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ? ಮತ್ತೊಬ್ಬ ಶಾಸಕರು ಇ.ಡಿ. ವಿಚಾರಣೆಯನ್ನು ಏಕೆ ಎದುರಿಸುತ್ತಿದ್ದಾರೆ? ಎಂಬ ಸತ್ಯ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು
    ಎಸ್‌‍ಸಿ/ಎಸ್‌‍ಟಿ ಸಮುದಾಯಕ್ಕೆ ಸೇರಿದ ಹಣವನ್ನು ದರೋಡೆ ಮಾಡಿದವರು ಯಾರು?, ಇದಕ್ಕೆ ಹೊಣೆಗಾರರು ಯಾರು? ಎಂಬುದು ಗೊತ್ತಾಗಬೇಕು. ಹಗರಣ ನಡೆದು ತಿಂಗಳಾಗಿದ್ದರೂ ಸಂಬಂಧಪಟ್ಟ ಸಚಿವರಿಂದ ರಾಜೀನಾಮೆ ನೀಡಲು ವಿಳಂಬ ಮಾಡಿದಿರಿ. ಅಧಿಕಾರಿಗಳ ತಲೆಗೆ ಕಟ್ಟಿ ಈ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿತ್ತು ಎಂದು ಆರೋಪಿಸಿದರು.
    ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿದ್ದರೂ ಸಿದ್ದರಾಮಯ್ಯ ಒಪ್ಪಿಕೊಳ್ಳದಿರುವುದು ನನಗೆ ಆಶ್ಚರ್ಯವೇನೂ ಉಂಟುಮಾಡಿಲ್ಲ. ಏಕೆಂದರೆ ಅದು ಎಸ್‌‍ಸಿ/ಎಸ್‌‍ಟಿ ಸಮುದಾಯಕ್ಕೆ ಸೇರಿದ ಹಣ ಎಂಬ ಧೋರಣೆಯಿಂದ ಇದನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಈ ವರ್ಗಗಳಿಗೆ ಅನ್ಯಾಯ ಆಗಿದೆ ಎಂದು ವಾಗ್ದಾಳಿ ನಡೆಸಿದರು.
    ಎಸ್‌‍ಸಿ/ಎಸ್‌‍ಟಿ ವರ್ಗಗಳಿಗೆ ಸೇರಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದೀರಿ. ನಿಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುವ ಸೌಜನ್ಯ ಇಲ್ಲವೇ ಎಂದು ಪ್ರಶ್ನಿಸಿದರು.
    ಶನಿವಾರ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಬೇಕಿತ್ತು. ರಾಜ್ಯದ ಸಮಸ್ಯೆಗಳ ಬಗ್ಗೆ ಅಲ್ಲಿ ಬೆಳಕು ಚೆಲ್ಲಿದ್ದರೆ ಕರ್ನಾಟಕಕ್ಕೆ ಅನುಕೂಲವಾಗುತ್ತಿತ್ತು. ಅವರು ನೀತಿ ಆಯೋಗವನ್ನು ವೇದಿಕೆಯಾಗಿ ಬಳಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    Verbattle
    Verbattle
    Verbattle
    Bangalore Congress Entertainment Government Karnataka News Politics Trending Varthachakra ಕಾಂಗ್ರೆಸ್ ಕಾನೂನು ನ್ಯಾಯ ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಮಂತ್ರಿಗಳಿಗೆ DCM ಶಿವಕುಮಾರ್ ಮನವಿ.
    Next Article ಕುಮಾರಸ್ವಾಮಿ ಶೀಘ್ರದಲ್ಲಿ ಸಿಎಂ ಆಗುತ್ತಾರಂತೆ.
    vartha chakra
    • Website

    Related Posts

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಫೆಬ್ರವರಿ 11, 2026

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    ಫೆಬ್ರವರಿ 11, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    ಫೆಬ್ರವರಿ 11, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    ಜೋರಾಗಿ ಕೆಮ್ಮೋದು ತಪ್ಪಾ..?

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah ರಲ್ಲಿ ಸಫಾರಿ ಆರಂಭಕ್ಕೆ ಅಶೋಕ್ ಆಗ್ರಹ
    • Glennhof ರಲ್ಲಿ ಜ.29ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
    • LeonardReawn ರಲ್ಲಿ ಪ್ರಿಯಾಂಕಾ ಗಾಂಧಿಗೆ ಪಟ್ಟ ಕಟ್ಟಲು ಸಕಾಲ
    Latest Kannada News

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಫೆಬ್ರವರಿ 11, 2026

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    ಫೆಬ್ರವರಿ 11, 2026

    ಜೋರಾಗಿ ಕೆಮ್ಮೋದು ತಪ್ಪಾ..?

    ಫೆಬ್ರವರಿ 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.