ಯಾದಗಿರಿ,ಮಾ.2:
ಭವಿಷ್ಯವಾಣಿ ಮೂಲಕ ದೇಶದೆಲ್ಲೆಡೆ ಗಮನ ಸೆಳೆದಿರುವ ಹಾಸನ ಜಿಲ್ಲೆಯ ಅರಸೀಕೆರೆಯ ಕೋಡಿಮಠದ ಶ್ರೀಗಳು ಇದೀಗ ರಾಜ್ಯದಲ್ಲಿ ನಡೆದಿರುವ ಅಧಿಕಾರ ಹಂಚಿಕೆ ಕುರಿತಾಗಿ ಭವಿಷ್ಯ ನುಡಿದಿದ್ದಾರೆ.
ಉತ್ತರ ಕರ್ನಾಟಕದ ಯಾದಗಿರಿಯಲ್ಲಿ ಮಾತನಾಡಿರುವ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸದ್ಯದಲ್ಲಿ ಆ ಹುದ್ದೆಯಿಂದ ಕೆಳಗಿಳಿಸುವುದು ಕಷ್ಟ. ಸ್ವತಃ ಅವರೇ ಮನಸು ಮಾಡಿ ಅಧಿಕಾರ ತ್ಯಜಿಸಬೇಕಾಗುತ್ತದೆ. ಇಲ್ಲವಾದರೆ ಯಾರಿಂದಲೂ ಅವರನ್ನು ಪದಚ್ಯುತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ
ಕೋಡಿಮಠದ ಮಠಾಧೀಶರಾದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಅವರು ನುಡಿದಿರುವ ಈ ಭವಿಷ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.
ಮುಂಬರುವ ವರ್ಷದಲ್ಲಿ ರಾಜ್ಯಕ್ಕೆ ಉತ್ತಮ ಮಳೆ, ಬೆಳೆ ಮತ್ತು ಸುಭೀಕ್ಷೆ ಇರುತ್ತದೆ ಎಂದು
ಭವಿಷ್ಯ ನುಡಿದಿರುವ ಸ್ವಾಮೀಜಿ, ಜಾಗತಿಕವಾಗಿ ತೊಂದರೆಗಳು ಹೆಚ್ಚಾಗಲಿವೆ ಎಂದು ಎಚ್ಚರಿಸಿದ್ದಾರೆ.
ಭೂಕಂಪ, ಸುನಾಮಿಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ, ಯುಗಾದಿ ನಂತರ ವಿವರವಾದ ಭವಿಷ್ಯ ನುಡಿಯುವುದಾಗಿ ಹೇಳಿದ್ದಾರೆ.
ಹಾಲುಮತ ಸಮಾಜದ ಬಗ್ಗೆ ಮಾತನಾಡುತ್ತ, ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವದಾರಾಧನೆ ಮಾಡುವ ಸಮಾಜ, ಹಾಲು ಕೆಟ್ಟರು ಹಾಲು ಸಮಾಜ ಕೆಡದು, ಹಕ್ಕು ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು, ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ, ಸಿಎಂ ಕುರ್ಚಿಯಿಂದ ಬಿಡಿಸುವದು ಅಷ್ಟು ಸುಲಭವಲ್ಲ, ಸಿಎಂ ಸಿದ್ದರಾಮಯ್ಯ ಅವರು ಅವರಾಗೆ ಸಿಎಂ ಸ್ಥಾನ ಬಿಡಬೇಕು ಹೊರತು ನೀವು ಬಿಡಿಸಿಕೊಳ್ಳುವದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಯುಗಾದಿ ಇನ್ನೂ ಒಂದು ತಿಂಗಳಿದ್ದು,ಈಗಲೇ ಮುಂದಿನದು ಹೇಳುವದು ಕಷ್ಟ, ನಮ್ಮ ದೃಷ್ಟಿಯಲ್ಲಿ ಬರುವ ಸಂವತ್ಸರದಲ್ಲಿ ರಾಜ್ಯಕ್ಕೆ ತೊಂದರೆ ತಾಪತ್ರಯವಿಲ್ಲ, ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಸುಭಿಕ್ಷತೆ ಇರುತ್ತದೆ, ನಾಡಿನಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ, ಯುಗಾದಿ ನಂತರ ಕರ್ನಾಟಕ ಬಗ್ಗೆ ಗೊತ್ತಾಗಲಿದೆ” ಎಂದು ಹೇಳಿದ್ದಾರೆ.
Previous Articleಸತೀಶ್ ಜಾರಕಿಹೊಳಿ ಅವರಲ್ಲಿ ಡಿಕೆ ಸುರೇಶ್ ಕೇಳಿದ್ದೇನು.?
Next Article ಕಿಡ್ನಾಪ್ ಮಾಡಿಸಿದ ಸತೀಶ್ ಜಾರಕಿಹೊಳಿ ಆಪ್ತೆ.


1 ಟಿಪ್ಪಣಿ
Des conseils experts, des produits de confiance et un service rapide – https://www.pharmacie-odeon-saint-joseph.com/mentions-legales/ , La pharmacie qui vous accompagne Г chaque Г©tape de votre vie .