ಮೈಸೂರು: ರಾಜ್ಯ ಮಾತ್ರವಲ್ಲದೆ ದೇಶದಲ್ಲಿಯೂ ಹಿಂದೂ ಮುಸ್ಲಿಂ ವಿಚಾರದಲ್ಲಿ ಪರ- ವಿರೋಧ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಮೈಸೂರಿನ ಹಿಂದೂ ಮಹಿಳೆಯ ಅಂತ್ಯ ಕ್ರಿಯೆ ನೇರವೇರಿಸಿದ ಮುಸ್ಲಿಂ ಸಮುದಾಯ ಯುವಕರು ದೇಶಕ್ಕೆ ಸೌಹರ್ದತೆಯ ಸಂದೇಶ ಸಾರಿದ್ದಾರೆ.
ಮೈಸೂರಿನಲ್ಲಿ ಕೋವಿಡ್ ನಲ್ಲೂ ಮುಸ್ಲಿಂ ಸಂಘಟನೆಗಳು ಅಂತ್ಯಕ್ರಿಯೆ ನಡೆಸಿ ಗಮನ ಸೆಳೆದಿದ್ದವು. ಇದರ ಬೆನ್ನಲ್ಲೇ ಈಗ ಮತ್ತೊಂದು ಘಟನೆ ಎಲ್ಲರ ತಿರುಗಿ ನೋಡುವಂತೆ ಮಾಡಿದೆ. ಮೈಸೂರಿನ ಗೌಸಿಯಾನಗರದ ನಿವಾಸಿ ಜಯಕ್ಕ(60) ಅನಾರೋಗ್ಯ ದಿಂದ ಶುಕ್ರವಾರ ನಿಧನರಾಗಿದ್ದಾರೆ.ಮೃತರಿಗೆಮಗ ಸೊಸೆ ಇಬ್ಬರೂ ಬಿಟ್ಟರೆ ಬೇರೆ ಸಂಬಂಧಿಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೃತರ ಬೆಂಬಲಕ್ಕೆ ನಿಂತ ನೆರೆ ಮುಸ್ಲಿಂ ಯುವ ಸಮೂಹ ಹಿಂದೂ ಸಂಪ್ರದಾಯದಂತೆ ಅಂತಿಮ ಕಾರ್ಯಗಳನ್ನು ತಾವೇ ನೇರವೇರಿಸಿ ಮಣ್ಣು ಮಾಡಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಎರಡು ಕೋಮಿನ ನಡುವೆ ವೈ ಮನಸ್ಬೆಳೆಯುತ್ತಿರುವ ಈ ವೇಳೆ ಇಂತಹದೊಂದು ಸಂದೇಶ ಸಾರಿರುವುದು ಎಲ್ಲರ ಗಮನ ಸೆಳೆದಿದೆ.