ಇದು ಇಡೀ ರಾಜ್ಯವೇ ತಲೆ ತಗ್ಗಿಸುವ ಸುದ್ದಿ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗಿಲ್ವ ರಕ್ಷಣೆ ಅನ್ನುವ ಪ್ರಶ್ನೆಯನ್ನು ಮೂಡಿಸುತ್ತಿದೆ. ಇನ್ನು ಈ ವಿಚಾರದಲ್ಲಿ ನಮ್ಮ ಕರ್ನಾಟಕ ಬಿಹಾರವನ್ನು ಹಿಂದಿಕ್ಕಿದೆ.ಇಡೀ ದೇಶದಲ್ಲಿ ಹೆಂಡತಿಗೆ ಹಿಂಸೆ ಕೊಡುವುದರ ಪೈಕಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ.
ಇದು ಬೆಳಕಿಗೆ ಬಂದಿದ್ದು ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ. ಎನ್‍ಹೆಚ್‍ಎಫ್‍ಎಸ್ ಎಲ್ಲಾ ರಾಜ್ಯಗಳ ಸರ್ವೆಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ. ಎನ್‍ಹೆಚ್‍ಎಫ್‍ಎಸ್ ಕೊಟ್ಟ ವರದಿಯಲ್ಲಿ ಏನಿದೆ?
- ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ ಹೆಂಡತಿ ಹಿಂಸೆಯಲ್ಲಿ ರಾಜ್ಯ ಮೊದಲು.
- ರಾಜ್ಯದ ಶೇ. 48 ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುವ ಅಂಶ ಬಯಲು.
- ಬಿಹಾರಗಿಂತ ರಾಜ್ಯದಲ್ಲಿ ಸಂಗಾತಿ ಹಿಂಸೆ ಅಧಿಕ.* ಬಿಹಾರದಲ್ಲಿ ಶೇ. 43ರಷ್ಟು ಮಹಿಳೆಯರಿಗೆ ಸಂಗಾತಿ ಹಿಂಸೆ ಪ್ರಕರಣ.
- ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರು.
- ಚಿತ್ರಹಿಂಸೆಗೆ ಒಳಪಡುತ್ತಿರುವ ಮಹಿಳೆಯರು.
- ತನ್ನ ಪತಿಯಿಂದಲೇ ಪತ್ನಿ ದೈಹಿಕ ಹಲ್ಲೆಗೆ ಒಳಪಡುತ್ತಿರುವ ಅಂಶ ಬಯಲು.
- ಸಂಗಾತಿ ಹಿಂಸೆಯಿಂದ ಹಲವು ರೀತಿಯ ಹಲ್ಲೆ, ಗಾಯಗಳಿಗೆ ತುತ್ತಾಗುತ್ತಿರುವುದು ಪತ್ತೆ
ಯಾವ ರೀತಿಯ ಹಲ್ಲೆ? - ಪತಿಯಿಂದ ವಿವಿಧ ರೀತಿಯ ಹಲ್ಲೆಗೆ ಒಳಪಡುತ್ತಿರುವ ಮಹಿಳೆ.
* ಶೇ. 7ರಷ್ಟು ಮಹಿಳೆಯರಿಗೆ ಕಣ್ಣಿನ ಗಾಯ, ಕೈ ಕಾಲು ಮುರಿತ, ಬರೆಯಂತಹ ಹಲ್ಲೆ. - ಶೇ. 6ರಷ್ಟು ಮಹಿಳೆಯರಿಗೆ ತೀವ್ರ ತರದ ಗಾಯ, ಮೂಳೆ ಮುರಿತ, ಹಲ್ಲು ಮುರಿತ.
- ಶೇ. 3ರಷ್ಟು ಮಹಿಳೆಯರಿಗೆ ಬೆಂಕಿಯಿಂದ ಸುಡುವ ಚಿತ್ರಹಿಂಸೆ.
ಮೌನಕ್ಕೆ ಶರಣಾದ ಮಹಿಳೆಯರೆಷ್ಟು? ಸಹಾಯ ಪಡೆದವರೆಷ್ಟು? - ಪತಿಯಿಂದ ಹಿಂಸೆಗೆ ಒಳಪಡುವ ಭಾಗಶಃ ಮಹಿಳೆಯರು ಸಮಾಜಕ್ಕೆ ಹೆದರಿ ಮೌನ.
* ಶೇ. 58ರಷ್ಟು ಮಹಿಳೆಯರು ತವರು ಮನೆಯವರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.
* ಶೇ. 27ರಷ್ಟು ಮಹಿಳೆಯರು ಅತ್ತೆ, ಮಾವನ ಮನೆಯವರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. - ಶೇ. 9ರಷ್ಟು ಮಹಿಳೆಯರು ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.
- ಶೇ. 2ರಷ್ಟು ಮಹಿಳೆಯರು ಧಾರ್ಮಿಕ ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.
- ಕೇವಲ ಶೇ. 1ರಷ್ಟು ಮಹಿಳೆಯರು ಮಾತ್ರ ಪೊಲೀಸ್ ಹಾಗು ವಕೀಲರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.