ಬೆಂಗಳೂರು,ಜು.3-
ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣ ಎಕ್ಸ್ ಗೆ ಪರ್ಯಾಯ ಎಂದು ಬಿಂಬಿಸಲಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಮೂಲದ ಸಾಮಾಜಿಕ ಮಾಧ್ಯಮ ‘ಕೂ’ (Koo) ಸ್ಥಗಿತಗೊಂಡಿದೆ.
ಬೆಂಗಳೂರಿನ ಟೆಕಿ ಅಪ್ರಮೇಯ ರಾಧಾಕೃಷ್ಣ ಅವರು ರೂಪಿಸಿದ್ದ ಕೂ ಇನ್ನುಮುಂದೆ ಇರುವುದಿಲ್ಲ ಎಂದು ಅವರ ಮಾಹಿತಿ ಹಂಚಿಕೊಂಡಿದ್ದಾರೆ.
2020 ರಲ್ಲಿ ದೇಶದಲ್ಲಿ ಟ್ವಿಟರ್ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಾಗ ಕೂ ವೇದಿಕೆ ಚಿಗುರೊಡೆದಿತ್ತು. ಟ್ವಿಟರ್‌ಗೆ ಪರ್ಯಾಯ ಎಂದು ಕೂ ವನ್ನು ಬಿಂಬಿಸಲಾಗಿತ್ತು. ಕೂ ಬಳಕೆದಾರರು ತಮ್ಮ ಮನಸ್ಸಿನ ಭಾವನೆಗಳನ್ನು ಧ್ವನಿ, ವಿಡಿಯೊ ಮತ್ತು ಅಕ್ಷರ ರೂಪದಲ್ಲಿ ಇಲ್ಲಿ ಹಂಚಿಕೊಳ್ಳಬಹುದಾಗಿತ್ತು. ಘಟನಾವಳಿಗಳಿಗೆ ಸ್ಪಂದಿಸುವುದು, ಸುದ್ದಿಗಳಿಗೆ ಪ್ರತಿಕ್ರಿಯಿಸುವುದು. ಕವನಗಳನ್ನೂ ಬರೆದು ಸಹೃದಯದ ಓದುಗರ ಜತೆ ಹಂಚಿಕೊಳ್ಳುವುದು ಮಾಡಬಹುದಿತ್ತು..
ಆದರೆ, ಡಿಜಿಟಲ್ ವೇದಿಕೆಯಲ್ಲಿ ಅಸ್ತಿತ್ವ ಸ್ಥಾಪಿಸಲು ಕೂ ವಿಫಲವಾಗಿದೆ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗುತ್ತಿದ್ದು ಅಪ್ರಮೇಯ ಅವರು, ಪಾಲುದಾರರ ಜೊತೆಗಿನ ಮಾತುಕತೆಗಳು ವಿಫಲವಾಗಿದೆ. ನಾವು ಕೂ ವೇದಿಕೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ಅವರು ಘೋಷಣೆ ಮಾಡಿದ್ದಾರೆ.
