ಬೆಂಗಳೂರು
ಟೈಗರ್ ಅಶೋಕ್ ಕುಮಾರ್.. ಬೆಂಗಳೂರು ವಾಸಿಗಳಿಗೆ ಚಿರಪರಿಚಿತ ಹೆಸರು. ಉದ್ಯಾನ ನಗರಿ ಬೆಂಗಳೂರಿನ ನಿವಾಸಿಗಳಿಗೆ ಆತಂಕ ಮೂಡಿಸಿದ್ದ ಕುಖ್ಯಾತ ಸರಗಳ್ಳರನ್ನು ಹೆಡೆಮುರಿ ಕಟ್ಟಿದ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಪಡೆದವರು.
ಬೆಂಗಳೂರು ನಗರದಲ್ಲಿ ಪೊಲೀಸ್ ಅಧಿಕಾರಿಯಾಗಿ ಇವರು ಮಾಡಿದ ಹಲವು ಸಾದನೆಗಳು ಇಂದಿಗೂ ಜನರ ಬಾಯಲ್ಲಿ ನಲಿಯುತ್ತಿವೆ.
ಇಂತಹ ಅಶೋಕ್ ಕುಮಾರ್ ಈಗ ನಿವೃತ್ತಿಯಾಗಿ ವಿಶ್ರಾಂತ ಜೀವನ ಮಾಡುತ್ತಿದ್ದಾರೆ ಅವರಿಗೆ ಇದೀಗ ವಂಚಕರ ಕಾಟ ಶುರುವಾಗಿದೆ.
ಸೈಬರ್ ವಂಚಕರು ನಿವೃತ್ತ ಎಸಿಪಿ ಬಿ.ಬಿ.ಅಶೋಕ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದು ಹಲವರಿಗೆ ಮೆಸೇಜ್ ಮಾಡಿದ್ದಾರೆ.
ಅಶೋಕ್ ಕುಮಾರ್ ಫೋಟೊ ಬಳಸಿ ನಕಲಿ ಅಕೌಂಟ್ ಓಪನ್ ಮಾಡಿ ಹಣಕ್ಕಾಗಿ ಮೆಸೇಜ್ ಮಾಡಿದ್ದಾರೆ. ಈ ಸಂಬಂಧ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಜೊತೆಗೆ ನಕಲಿ ಖಾತೆಯಿಂದ ಯಾರಾದರೂ ಮೆಸೇಜ್ ಮಾಡಿ, ಹಣ ಕೇಳಿದರೆ ಯಾರೂ ಸ್ಪಂದಿಸಬೇಡಿ ಎಂದು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
Previous Articleಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಏನಾಗುತ್ತಿದೆ ಗೊತ್ತಾ.
Next Article ಭೂ ಚಕ್ರದ ಸುಳಿಯಲ್ಲಿ ಛಲವಾದಿ ನಾರಾಯಣ ಸ್ವಾಮಿ.