ಬೆಂಗಳೂರು, ಮಾ.10-ನಕಲಿ ಚಿನ್ನದ ಗಟ್ಟಿಯನ್ನು ಮಾರಾಟ ಮಾಡಿ ಮೋಸದಿಂದ ಹಣವನ್ನು ದೋಚುತ್ತಿದ್ದ ಖತರ್ನಾಕ್ ಖದೀಮನೊಬ್ಬನನ್ನು ಗಿರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಂಗೇರಿ ಹೋಬಳಿಯ ಗೊಲ್ಲಹಳ್ಳಿಯ ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ(39) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಕೃಷ್ಣಕಾಂತ್ ಅವರು ತಿಳಿಸಿದ್ದಾರೆ.
ಆಂದ್ರಪ್ರದೇಶದ ಪಲ್ನಾಡು ಜಿಲ್ಲೆಯ ಮೂಲದ ಬಂಧಿತ ಆರೋಪಿಯಿಂದ 8 ಲಕ್ಷ ರೂ ನಗದು ಕಬ್ಬಿಣದ ಸುತ್ತಿಗೆ, ಕಬ್ಬಿಣದ ಮಚ್ಚು ಹಾಗೂ ಹೀರೋ ಹೋಂಡ ಸ್ಪ್ಲೆಂಡರ್ ಬೈಕ್ ಜಪ್ತಿ ಮಾಡಲಾಗಿದೆ.
ಗಿರಿನಗರದ ಟಿ ಬ್ಲಾಕ್ ನ ನ್ಯೂ ಮಂಗಳೂರು ಸ್ಟೋರ್ ಮಾಲೀಕ ನಿಕಿತ್ ಮೂಲ್ಯ ದೂರು ನೀಡಿ ಕೆಲ ದಿನಗಳ ಹಿಂದೆ ಶಿವ ಎಂಬಾತ ಅಂಗಡಿಗೆ ಬಂದು ಸಾಮಾಗ್ರಿಗಳನ್ನು ಖರೀದಿಸಿ ನನ್ನನ್ನು ಪರಿಚಯಿಸಿಕೊಂಡು
ಫೆ.5 ರಂದು ಚಿನ್ನದ ಗಟ್ಟಿಯನ್ನು ತರಿಸಿ ಅದರ ಸ್ವಲ್ಪ ಭಾಗವನ್ನು ಕಟ್ ಮಾಡಿ ಸ್ಯಾಂಪಲ್ ನೀಡಿ, ಅದನ್ನು ಪರಿಶೀಲಿಸಿ ಎಂದು ಕೊಟ್ಟಿರುತ್ತಾನೆ. ಆತನು ಕೊಟ್ಟಿದ್ದ ಚಿನ್ನದ ಗಟ್ಟಿಯನ್ನು ಚೆಕ್ ಮಾಡಿಸಿದಾಗ ಚಿನ್ನವೆಂದು ತಿಳಿಯಿತು.
ಆತನನ್ನು ನಂಬಿದ ನಾನು ಬಳಿಕ ಆತನ ಬಳಿಯಿಂದ ಚಿನ್ನ ಖರೀದಿಸಲು ಮುಂದಾಗಿ ಫೆ.17 ರಂದು 440 ಗ್ರಾಂ ಚಿನ್ನದ ಗಟ್ಟಿಯನ್ನು 13 ಲಕ್ಷ -ರೂ.ಗಳಿಗೆ ಮಾತನಾಡಿ ಫೆ. 21 ರಂದು ಮಧ್ಯಾಹ್ನ 1ರ ವೇಳೆ 13 ಲಕ್ಷ ನೀಡಿ ಚಿನ್ನವನ್ನು ಪಡೆದುಕೊಂಡಿದ್ದು ಅದು ನಕಲಿ ಚಿನ್ನವಾಗಿದ್ದು ಮೋಸ ಮಾಡಿದ ಆತನ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದ್ದರು.
ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಗಿರಿನಗರ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್‍ಕುಮಾರ್ ಬಿ.ಎನ್ ರವರ ನೇತೃತ್ವದಲ್ಲಿ ರಚಿಸಲಾಗಿದ್ದ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಗುಂಜಿ ಶಿವಶಂಕರ್ ರಾವ್ ಮೊದಲು ಚಿನ್ನದಂತೆ ಕಾಣುವ ತಾಮ್ರದ ಗಟ್ಟಿಯನ್ನುವಮಾಡಿಸಿಕೊಂಡು,ಬೆಂಗಳೂರಿಗೆ ಬಂದು ಅಂಗಡಿಗಳನ್ನು ಹುಡುಕಿ ಅಂಗಡಿಯವರನ್ನು ಪರಿಚಯ ಮಾಡಿಕೊಂಡುಭೂಮಿಯನ್ನು ಅಗೆಯುವಾಗ ಸಿಕ್ಕಿದ ಚಿನ್ನದ ಗಟ್ಟಿಯೆಂದು ತೋರಿಸಿ, ಮೊದಲು ಸ್ಯಾಂಪಲ್‍ಗೆ
ಅಸಲಿ ಚಿನ್ನವನ್ನು ಕೊಟ್ಟು ಜನರಿಗೆ ಚಿನ್ನದ ಗಟ್ಟಿಯೆಂದು ನಂಬಿಸಿ ನಂತರ ತಾಮ್ರದ ಗಟ್ಟಿಯನ್ನು ಕೊಟ್ಟು ಮೋಸದಿಂದ ಹಣ ಪಡೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
Previous ArticleToilet ನಲ್ಲಿ ಧೂಮಪಾನ-ಮಹಿಳೆ ಬಂಧನ
Next Article ವಿಧಾನಸಭೆಗೆ ಎರಡು ಹಂತದಲ್ಲಿ ಚುನಾವಣೆ!
3 ಪ್ರತಿಕ್ರಿಯೆಗಳು
can you buy cheap clomiphene without a prescription can i get generic clomiphene without rx order generic clomiphene pills can i order clomid without a prescription how can i get clomid tablets order generic clomid online order generic clomid without rxРіРѕРІРѕСЂРёС‚:
I couldn’t turn down commenting. Warmly written!
The sagacity in this tune is exceptional.