ಮೈಸೂರು ಜಿಲ್ಲೆ ತಿ.ನರಸೀಪುರ ಪಟ್ಟಣಕ್ಕೆ ಜನತಾ ಜಲಧಾರೆ ರಥಯಾತ್ರೆ ಗುರುವಾರ ಬೆಳಗ್ಗೆ ಆಗಮಿಸಿದೆ.ಇಂದಿನಿಂದ ಮೂರು ದಿನಗಳ ಕಾಲ ನರಸೀಪುರ ಕ್ಷೇತ್ರದಲ್ಲಿ ಜನತಾ ಜಲಧಾರೆ ರಥಯಾತ್ರೆ ಸಂಚರಿಸಲಿದೆ.
ಈ ವೇಳೆ ಜನತಾ ಜಲಧಾರೆ ರಥಯಾತ್ರೆಗೆ ಶಾಸಕ ಎಂ.ಅಶ್ವಿನ್ ಕುಮಾರ್ ಚಾಲನೆ ನೀಡಿದ್ರು. ನರಸೀಪುರ ತಾಲ್ಲೂಕಿನ ಮಡುವಾಡಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ರಾಜ್ಯದ ನೀರಾವರಿ ಅಭಿವೃದ್ಧಿಗೋಸ್ಕರ ಕುಮಾರಸ್ವಾಮಿ ಹಾಗು ದೇವೇಗೌಡರು ಮಹತ್ವಕಾಂಕ್ಷೆ ಯೋಜನೆಗಳನ್ನ ತಯಾರು ಮಾಡಿದ್ದಾರೆ. ಅದರಲ್ಲಿ ಜನತಾ ಜಲಧಾರೆಯು ಸಹ ಒಂದು. ಇಂದಿನಿಂದ 24ನೇ ತಾರೀಖಿನ ತನಕ ನರಸೀಪುರ ಕ್ಷೇತ್ರದಲ್ಲಿ ರಥಯಾತ್ರೆ ಸಂಚಾರ ಮಾಡಲಿದೆ. 24ನೇ ತಾರೀಖು ದೇವೇಗೌಡರು ನರಸೀಪುರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಈ ಭಾರೀ ರಾಜ್ಯದ ಜನತೆ ಪ್ರಾದೇಶಿಕ ಪಕ್ಷವನ್ನ ಜನತೆ ಬೆಂಬಲಿಸುತ್ತಾರೆ. 2023ಕ್ಕೆ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ರಾಜ್ಯದ ಅಧಿಕಾರ ಹಿಡಿಯಲಿದೆ ಎಂದು ಎಂ.ಅಶ್ವಿನ್ ಕುಮಾರ್ ಹೇಳಿದ್ರು
ತಿ.ನರಸೀಪುರ ಪಟ್ಟಣಕ್ಕೆ ಜನತಾ ಜಲಧಾರೆ ರಥಯಾತ್ರೆ
Previous Articleತಪ್ಪಾಯ್ತು ಕ್ಷಮಿಸಿ….
Next Article ಕೈಕೈ ಹಿಡಿದು ದೇಶಭಕ್ತಿ ಗೀತೆ ಹೇಳಿದ ಹಿಂದೂ-ಮುಸ್ಲೀಂ