ಬೆಂಗಳೂರು,ಏ.21-ನಿವೃತ್ತ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಓಂ ಪ್ರಕಾಶ್ ಅವರ ಭೀಕರ ಕೊಲೆ ಸಂಬಂಧ ಪತ್ನಿ ಪಲ್ಲವಿಯನ್ನು ಬಂಧಿಸಿರುವ ಪೊಲೀಸರು ಅವರ ಮಗಳು ಕೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಓಂಪ್ರಕಾಶ್ ಅವರ ಕೊಲೆಗೆ ಆಸ್ತಿ ಹಾಗೂ ಕೌಟುಂಬಿಕ ಕಲಹವೇ ಪ್ರಮುಖ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಓಂ ಪ್ರಕಾಶ್ ಅವರು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಖರೀದಿಸಿದ್ದ ಕೋಟ್ಯಂತರ ಬೆಲೆ ಬಾಳುವ ಭೂಮಿಯೂ ಈ ಹತ್ಯೆಗೆ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇಪದೇ ಗನ್ ತಂದು ನನಗೆ, ನನ್ನ ಮಗಳಿಗೆ ಶೂಟ್ ಮಾಡುವುದಾಗಿ ಬೆದರಿಸುತ್ತಿದ್ದರು. ಬೆಳಗ್ಗೆಯಿಂದ ಬೇರೆಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ.
ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮನ್ನೇ ಕೊಲೆ ಮಾಡಲು ಓಂಪ್ರಕಾಶ್ ಯತ್ನಿಸಿದ್ದರು. ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದೆವು ಎಂದು ಓಂ ಪ್ರಕಾಶ್ ಪತ್ನಿ ಪಲ್ಲವಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಜೀವಕ್ಕಾಗಿ ಹೋರಾಟ:
ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಡಿದೆವು. ಬಳಿಕ ಖಾರದಪುಡಿ ಹಾಗೂ ಅಡುಗೆ ಎಣ್ಣೆ ಹಾಕಿದೆವು. ಕೈಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದ್ದೆವು ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸಾವಿಗೀಡಾಗಿದ್ದು,ಮುಖಕ್ಕೆ ಬಟ್ಟೆ ಕಟ್ಟಿದೆವು ಎಂದು ಪಲ್ಲವಿ ಮಾಹಿತಿ ನೀಡಿದ್ದಾರೆ.
ಎದೆ, ಕೈಗಳು, ಹೊಟ್ಟೆಯ ಭಾಗಕ್ಕೆ 10ಕ್ಕೂ ಹೆಚ್ಚು ಬಾರಿ ಪಲ್ಲವಿ ಚಾಕು ಇರಿದಿದ್ದಾರೆ. ಹೊಟ್ಟೆಗೆ ನಾಲ್ಕರಿಂದ ಐದು ಬಾರಿ ಚಾಕು ಇರಿದಿರುವ ಕಾರಣ ತೀವ್ರ ರಕ್ತಸ್ರಾವವಾಗಿದೆ. ಕೊಲೆ ನಡೆದಿರುವ ಹಾಲ್‌ನ ತುಂಬೆಲ್ಲಾ ನೆತ್ತರು ಹರಿದಿದೆ.
ಓಂಪ್ರಕಾಶ್, ತೀವ್ರ ರಕ್ತಸ್ರಾವವದಿಂದ ಸುಮಾರು 20 ನಿಮಿಷಗಳ ಕಾಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಈ ವೇಳೆ ಪತ್ನಿಗೆ ಮಗಳು ಕೃತಿಯೂ ಕೈಜೋಡಿಸಿರುವ ಸಾಧ್ಯತೆ ಇದೆ. ಪತಿಯ ನರಳಾಟ ನೋಡುತ್ತಾ ನಿಂತಿದ್ದ ಪಲ್ಲವಿ, ಅಂತಿಮವಾಗಿ ಓಂಪ್ರಕಾಶ್ ಮೃತಪಟ್ಟ ಬಳಿಕ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿಗೆ ಹಾಗೂ ಸ್ಥಳೀಯ ಎಚ್‌ಎಸ್‌ಆರ್ ಠಾಣೆಗೆ ಕರೆ ಮಾಡಿ ಕೊಲೆ ವಿಚಾರ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿವಿಧ ಜಿಲ್ಲೆಗಳಲ್ಲಿ ಆಸ್ತಿ:
ಓಂ ಪ್ರಕಾಶ್ ಅವರು 2017 ರಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದರು. ನಿವೃತ್ತಿಗೂ ಮೊದಲು ಹಾಗೂ ನಂತರದಲ್ಲಿ ಅವರು ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಸ್ತಿ ಖರೀದಿಸಿದ್ದರು. ಇದರ ಮೌಲ್ಯ ಕೋಟ್ಯಂತರ ರೂ ಆಗಿದೆ. ಪತ್ನಿ ಪಲ್ಲವಿ, ಪುತ್ರಿ ಕೃತಿ ಹಾಗೂ ಪುತ್ರನ ಹೆಸರಿನಲ್ಲೂ ಅವರು ಆಸ್ತಿ ನೊಂದಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಓಂ ಪ್ರಕಾಶ್ ಅವರು ಜಮೀನು ಒಂದನ್ನು ಖರೀದಿ ಮಾಡಿದ್ದರು. ಈ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಹೋದರಿಯರ ಹೆಸರಿನಲ್ಲಿ ನೋಂದಾಯಿಸಿದ್ದರು ಎಂದು ಹೇಳಲಾಗಿದೆ. ಆದರೆ ಇದಕ್ಕೆ ಓಂ ಪ್ರಕಾಶ್ ಪತ್ನಿ ಪಲ್ಲವಿ ಆಕ್ಷೇಪ ಎತ್ತಿದ್ದರು. ಈ ಜಗಳವೂ ವಿಕೋಪಕ್ಕೆ ಹೋಗಿತ್ತು. ಇದು ಹತ್ಯೆಗೆ ಕಾರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಪಲ್ಲವಿ ಮೊದಲ ಆರೋಪಿಯಾಗಿದ್ದಾರೆ. ಹತ್ಯೆಯಲ್ಲಿ ಮಗಳ ಪಾತ್ರದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇಬ್ಬರೂ ಪೊಲೀಸ್ ವಶದಲ್ಲಿದ್ದಾರೆ.
ಮೂವರು ಮಾತ್ರ:
ಓಂ ಪ್ರಕಾಶ್ ಕೊಲೆ ಸಂದರ್ಭದಲ್ಲಿ ಮನೆಯಲ್ಲಿ ಮೂವರಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ತಾವೇ ಓಂ ಪ್ರಕಾಶ್ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಪತ್ನಿ ಪಲ್ಲವಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
Previous Articleಜನಿವಾರ ತೆಗೆದಿದ್ದಕ್ಕೆ ಸಸ್ಪೆಂಡ್.
Next Article ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅಸ್ತಂಗತ
10 ಪ್ರತಿಕ್ರಿಯೆಗಳು
can i order generic clomiphene without a prescription clomid tablet price order clomid without a prescription clomiphene price at clicks where can i buy clomid no prescription can i get clomiphene without insurance buy clomid no prescription
Thanks for putting this up. It’s well done.
This is the stripe of content I get high on reading.
purchase amoxil generic – order ipratropium online cheap ipratropium medication
where to buy azithromycin without a prescription – order azithromycin order bystolic online
augmentin where to buy – atbioinfo.com oral ampicillin
buy cheap generic esomeprazole – nexiumtous esomeprazole 20mg price
how to buy medex – https://coumamide.com/ losartan generic
buy meloxicam 7.5mg without prescription – https://moboxsin.com/ order meloxicam 15mg without prescription
oral deltasone 40mg – corticosteroid deltasone cheap