ಮಂಡ್ಯ,ಮೇ.16- ಮಳವಳ್ಳಿ ತಾಲೂಕಿನ ಮುತ್ತತ್ತಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ಹಾಗು ಆತನನ್ನು ರಕ್ಷಿಸಲು ತೆರಳಿದ್ದ ಸ್ಥಳೀಯ ಸೇರಿ ಇಬ್ಬರು ನೀರುಪಾಲಾದ ದಾರುಣ ಘಟನೆ ನಡೆದಿದೆ.
ಮಿಥುನ್ ಚಕ್ರವರ್ತಿ (19) ಹಾಗೂ ಮುತ್ತು ರಾಜ್ (23) ಮೃತ ದುರ್ದೈವಿಗಳು. ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದ ಮಿಥುನ್ ಚಕ್ರವರ್ತಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು ರಕ್ಷಿಸಲು ಹೋದ ಸ್ಥಳೀಯ ಮುತ್ತು ರಾಜ್ ಕೂಡ ನೀರು ಪಾಲಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮುತ್ತು ರಾಜ್ ಶವ ಮೇಲೆತ್ತಿದ್ದಾರೆ.
ಯುವಕ ಮಿಥುನ್ ಚಕ್ರವರ್ತಿಯ ದೇಹವನ್ನು ಇಂದು ಬೆಳಿಗ್ಗೆ ಹೊರತೆಗೆಯಲಾಗಿದ್ದು, ಹಲಗೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ
Previous Articleಸಾಹಾ ಸಾಹಸ: ಅಗ್ರ ಸ್ಥಾನದಲ್ಲಿ ಗುಜರಾತ್ ಭದ್ರ
Next Article ಬಾಲ್ಯ ಸ್ನೇಹಿತರಾದರು ಕಳ್ಳರು..!