ಬೆಂಗಳೂರು,ಮೇ.24-ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಿಂಪಡೆದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹವಾಲಾ ಹಣದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಬ್ಯಾಂಕ್ ಗಳ ಮೂಲಕ ಆರ್‌ಬಿಐ 3 ತಿಂಗಳುಗಳ ಕಾಲ ನೋಟು ವಿನಿಮಯಕ್ಕೆ ಅವಕಾಶ ಕೊಟ್ಟಿದ್ದು ಹವಾಲಾ ದಂಧೆಕೋರರಿಂದ ನೋಟು ವಿನಿಮಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದರಿಂದಾಗಿ ಇಡಿ ಹಾಗೂ ಐಟಿ ಇಲಾಖೆಗಳು ಹವಾಲಾ ದಂಧೆಕೋರರ ಮೇಲೆ ನಿಗಾ ಇರಿಸಿ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹವಾಲಾ ದಂಧೆಕೋರರು ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದು, ಹೀಗಾಗಿ ನೋಟು ಹಿಂಪಡೆಯಲು ಮುಂದಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಕಾಳಸಂತೆಯಲ್ಲಿ ಹವಾಲಾ ದಂಧೆಕೋರರ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪ್ರಮುಖವಾಗಿ ಪೆಟ್ರೋಲ್ ಬಂಕ್‌ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.
ನೋಟು ವಿನಿಮಯಕ್ಕೆ ಸೆಪ್ಟೆಂಬರ್ 30ರ ವರೆಗೆ ಆರ್‌ಬಿಐ ಅವಕಾಶ ನೀಡಿದೆ. ಆದರೆ ನೋಟು ಬದಲಾವಣೆ ವೇಳೆ ಸಾರ್ವಜನಿಕರು ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ. ಹೀಗಾಗಿ ಕಾಳಸಂತೆಯ ಹವಾಲಾ ದಂಧೆಕೋರರಿಗೆ ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಲು ಸುವರ್ಣ ಅವಕಾಶವಾಗಿದೆ. ಆದರೆ ಒಬ್ಬರಿಗೆ ದಿನಕ್ಕೆ 20 ಸಾವಿರ ರೂ. ಮಾತ್ರವೇ ಬದಲಾಯಿಸಿಕೊಳ್ಳಲು ಅವಕಾಶವಿದ್ದು, ಹೀಗಾಗಿ ಹವಾಲಾ ದಂಧೆಕೋರರು ಸಾರ್ವಜನಿಕರ ಮೂಲಕ ನೋಟು ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಹಿಂದೆ ಹವಾಲಾ ಹಣದೊಂದಿಗೆ ಸಿಕ್ಕಿರವವರ ಮೇಲೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದು, ಬ್ಯಾಂಕ್‌ಗಳ ಬಳಿ ಮಫ್ತಿಯಲ್ಲಿದ್ದಾರೆ