ಬೆಂಗಳೂರು,ಸೆ.6-
ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಕನ್ನಡ ಸಿನಿಮಾರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದಾರೆ.
ದರ್ಶನ್ ಜೈಲು ಪಾಲಾಗಿರುವುದು ಅವರ ಕುಟುಂಬದ ಸದಸ್ಯರಿಗೆ ಮಾತ್ರ ನೋವು ಬೇಸರ ತಂದಿಲ್ಲ.ಅವರ ಅಸಂಖ್ಯಾತ ಅಭಿಮಾನಿಗಳಿಗೂ ಬೇಸರ ಉಂಟು ಮಾಡಿದೆ ಈ ತರ ಜೊತೆಯಲ್ಲಿ ಹಲವರಿಗೆ ಹಲವಾರು ರೀತಿಯ ಸಮಸ್ಯೆಗಳಿಗೂ ಕಾರಣವಾಗಿದೆ.
ಅದರಲ್ಲೂ ಹರಪ್ಪನ ಅಗ್ರಹಾರ ಪ್ರದೇಶದ ಜನತೆ ತಾವು ಯಾವುದೇ ತಪ್ಪು ಮಾಡದೆ ಹೋದರೂ ದರ್ಶನ್ ಕಾರಣಕ್ಕಾಗಿ ಶಿಕ್ಷೆ ಅನುಭವಿಸುವಂತಾಗಿದೆ. ಐಟಿ ಆಧಾರಿತ ಉದ್ಯೋಗಿಗಳು ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ ವಿದ್ಯಾರ್ಥಿಗಳು ಅಂತರ್ಜಾಲ ಆಧಾರಿತ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ದೇಶದಿಂದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಆದರೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಕೆಲಸ ಮಾಡುವುದಿಲ್ಲ.
ಮೊಬೈಲ್ ಫೋನುಗಳು ರಿಂಗಣಿಸುವುದಿಲ್ಲ. ಇದಕ್ಕೂ ದರ್ಶನ್ ಗೂ ಏನು ಸಂಬಂಧ ಎಂದು ಕೇಳುತ್ತೀರಾ.. ದರ್ಶನ್ ಜೈಲುವಾಸಿಯಾಗಿದ್ದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟೋರಿಯಸ್ ರೌಡಿಗಳು ಮೋಸ್ಟ್ ವಾಂಟೆಡ್ ಉಗ್ರರು ಸೇರಿದಂತೆ ಅನೇಕ ಕುಖ್ಯಾತರನ್ನು ಇರಿಸಲಾಗಿದೆ. ಜೈಲಿನಲ್ಲಿದ್ದೆ ಈ ಕುಖ್ಯಾತರು ಅಂತರ್ಜಾಲ ತಂತ್ರಜ್ಞಾನದ ಮೂಲಕ ಹೊರ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದು ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಜೈಲಿಗೆ ಆತ್ಯಾಧುನಿಕ ಜಾಮರ್ ಗಳನ್ನು ಅಳವಡಿಸಲಾಗಿತ್ತು.
ಇದರಿಂದ ಈ ಪ್ರದೇಶದ ಜನತೆ ಸಂಕಷ್ಟಕ್ಕೆ ಸಿಲುಕಿ ಪ್ರತಿಭಟನೆಯ ಹಾದಿ ಹಿಡಿದಿದ್ದರು ಜನಸಾಮಾನ್ಯರ ಪ್ರತಿಭಟನೆಗೆ ಮಾಡಿದ ರಾಜ್ಯ ಸರ್ಕಾರ ಜಾಮರ್ ಗಳ ತಂತ್ರಜ್ಞಾನದ ಪ್ರಮಾಣವನ್ನು ಕಡಿಮೆ ಮಾಡಿದ್ದರು ಇದರಿಂದ ಜೈಲಿನ ಎರಡು ಕಿಲೋ ಮೀಟರ್ ಆಸುಪಾಸಿನಲ್ಲಿ ಮಾತ್ರ ಇಂಟರ್ನೆಟ್ ಕೆಲಸ ಮಾಡುತ್ತಿರಲಿಲ್ಲ.
ಆದರೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ತಮ್ಮ ಆಪ್ತದೊಂದಿಗೆ ಜೈಲಿನ ಆವರಣದಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ ಹಾಗೂ ಮೊಬೈಲ್ ಫೋನ್ ಬಳಸಿ ವಿಡಿಯೋ ಕಾಲ್ ಮಾಡಿದ ದೃಶ್ಯಗಳು ಬಹಿರಂಗ ಗೊಂಡಿದ್ದವು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅತ್ಯಾಧುನಿಕ ಜಾಮರುಗಳು ಇರುವ ಈ ಜೈಲಿನಲ್ಲಿ ಮೊಬೈಲ್ ಫೋನ್ ಬಳಕೆ ಹೇಗೆ ಮಾಡಲಾಯಿತು ಎಂಬ ಬಗ್ಗೆ ತನಿಖೆ ನಡೆಸಿದ ಸರ್ಕಾರ ಇದೀಗ ಜೈಲಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಗಳಲ್ಲಿ ಟಿ-ಎಚ್‌ಸಿಬಿಎಸ್ ಎಂಬ ಅತ್ಯಾಧುನಿಕ ಜಾಮರ್‌ಗಳ ಅಳವಡಿಕೆ ಮಾಡಲಾಗಿದೆ.
ಇದರಿಂದ ಕಾರಾಗೃಹದಲ್ಲಿ ಮೊಬೈಲ್ ಫೋನ್ ಮತ್ತು ಅಂತರ್ಜಾಲ ಬಳಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂವಹನಕ್ಕೆ ಸ್ಥಿರ ದೂರವಾಣಿ ಸೌಲಭ್ಯ, ಇ-ಮೇಲ್, ವಾಕಿಟಾಕಿ ಮಾತ್ರ ಬಳಸುತ್ತಿದ್ದಾರೆ. ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.
ಜೈಲಿನಲ್ಲಿ ಇಂತಹ ಅತ್ಯಾಧುನಿಕ ಜಾಮರ್ ಅಳವಡಿಸ ಪರಿಣಾಮ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸುತ್ತಮುತ್ತಲಿನ ಎಂಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ ಇದರಿಂದ ಈ ಪ್ರದೇಶದ ಜನತೆ ರೋಸಿ ಹೋಗಿದ್ದಾರೆ.
Previous ArticleInfosys ಶೋಷಣೆ ಮಾಡುತ್ತಿದೆಯಾ..?
Next Article ಸೌರ ವಿದ್ಯುತ್ ನಲ್ಲಿ ಕರ್ನಾಟಕ ದಾಖಲೆ.