ಬೆಂಗಳೂರು,ಮೇ.22:
ಫೆಡೆಕ್ಸ್ ಕೊರಿಯರ್, ದೂರಸಂಪರ್ಕ ಇಲಾಖೆ , ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಆನ್ ಲೈನ್ ಮೂಲಕ ಜನಸಾಮಾನ್ಯರನ್ನು ವಂಚಿಸುತ್ತಿದ್ದ ಖದೀಮರ ಜಾಲವನ್ನು ಭೇದಿಸಿರುವ ವಿಜಯಪುರ ಪೊಲೀಸರು ಈ ಸಂಬಂಧ ಸುಮಾರು 502 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ
ವಿಜಯಪುರದ ಖ್ಯಾತ ವೈದ್ಯ, ಡಾ.ಅನಿರುದ್ಧ ಉಮರ್ಜಿ ಅವರಿಗೆ ಕರೆ ಮಾಡಿದ ವಂಚಕರ ತಂಡ, ನಿಮಗೆ ಕಾಬೂಲ್‍ನಿಂ ಫಿಡೆಕ್ಸ್ ಕೋರಿಯರ್ ಬಂದಿದ್ದು, ಅರದಲ್ಲಿ ಕಾನೂನು ಭಾಹಿರವಾಗಿ ಮಾದಕ ವಸ್ತು, ಅಂತರಾಷ್ಟ್ರೀಯ 15 ಸಿಮ್ ಕಾರ್ಡ್‍ಗಳು ಹಾಗೂ 950 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಕಳಿಸಲಾಗಿದೆ. ಈ ಬಗ್ಗೆ ಮಂಬೈನ ನಾರ್ಕೋಟಿಕ್ಸ್ ಕ್ರೈಂ ಶಾಖೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ.
ನಿಮ್ಮ ವಿರುದ್ಧ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲು ಹಣ ಕೊಡಬೇಕಾಗುತ್ತದೆ ಎಂದು ಪೊಲೀಸರ ಹೆಸರಿನಲ್ಲಿ ನಂಬಿಸಿದ ಈ ವಂಚಕರು ವೈದ್ಯರಿಂದ 55 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದರು.
ಹಣ ಕಳೆದುಕೊಂಡ ವೈದ್ಯರು ತಮಗಾದ ವಂಚನೆಯ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಹಲವರಿಗೆ ವಂಚನೆ ನಡೆದ ಕುರಿತಂತೆ ದೂರುಗಳು ಸಲ್ಲಿಕೆಯಾಗಿದ್ದವು ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡ ರಚಿಸಿದ್ದರು.
ಈ ತಂಡ ನುರಿತ ಸೈಬರ್ ತಜ್ಞರ ನೆರವಿನೊಂದಿಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ, ಹರಿಯಾಣ ರಾಜ್ಯದ ಕುರುಕ್ಷೇತ್ರ ಮೂಲದ ರಾಜೀವ ವಾಲಿಯಾ, ರಾಜಸ್ಥಾನ ರಾಜ್ಯದ ಉದಯಪುರ ಜಿಲ್ಲೆ ಲಸದಿಯಾ ಮೂಲದ ರಾಕೇಶಕುಮಾರ ಟೈಲರ್, ಉದಯಪುರದ ಕರಣ ಯಾದವ ಹಾಗೂ ಸುರೇಂದ್ರಸಿಂಗ್ ಎಂಬ ನಾಲ್ವರನ್ನು ಬಂಧಿಸಿ ಎಳೆದು ತಂದಿದ್ದಾರೆ.
ಆನ್‍ಲೈನ್ ವಂಚನೆ ಕೃತ್ಯವನ್ನೇ ದಂಧೆ ಮಾಡಿಕೊಂಡಿದ್ದ ಈ ಖದೀಮರು ದೇಶದಾದ್ಯಂತ 502 ವಂಚನೆ ಕೃತ್ಯ ಎಸಗಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ವಂಚಕರ ಬ್ರಹಾಂಡ ವಂಚನೆಯ ಚಾಲ ಕಳಚಿಕೊಂಡಿದೆ. ಸದರಿ ಬಂಧಿತರು ವಿಜಯಪುರ ಜಿಲ್ಲೆ ಮಾತ್ರವಲ್ಲದೇ ಇಡೀ ದೇಶದಲ್ಲಿ ಇದೇ ರೀತಿ ಕೃತ್ಯ ಎಸಗಿದ್ದಾಗಿ ಬಾಯಿ ಬಿಟ್ಟಿದ್ದಾರೆ.
ಬಂಧಿತರು ಆನ್‍ಲೈನ್ ವಂಚನೆ ಮಾಡುವ ಉದ್ದೇಶದಿಂದಲೇ ಅನಾಮಧೇಯರ ಹೆಸರಿನಲ್ಲಿ ದೇಶದ ವಿವಿಧ ಕಡೆಗಳಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ 170 ಖಾತೆಗಳನ್ನು ತೆರೆದು, ಆನ್‍ಲೈನ್ ಮೂಲಕ ವಂಚಿದಿ ಹಣವನ್ನು ತಮ್ಮ ನಕಲಿ ಖಾತೆಗೆಗಳಿಗೆ ಜಮೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಆನ್ ಲೈನ್ ವಂಚನೆಯ ಕೃತ್ಯಕ್ಕೆ ಬಳಸಲು ಅನಾಮಧೇಯರ ಹೆಸರಿನಲ್ಲಿ 120 ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದರು.
ಆನ್‍ಲೈನ್ ವಂಚನೆ ಮೂಲಕ ವಿಜಯಪುರದ ಎರಡು ಪ್ರಕರಣಗಳಲ್ಲಿ ವಂಚಿಸಿದ್ದ 68,77,135 ರೂ.ಗಳಲ್ಲಿ ಬಂಧಿತರಿಂದ ವಶಕ್ಕೆ ಪಡೆದಿರುವ 40 ಲಕ್ಷ ರೂ. ಹಣವನ್ನು ಬಾಧಿತರಿಗೆ ಹಿದಿರುಗಿಸಿದ್ದಾರೆ. ಇತರೆ ಹಣವನ್ನು ಪಡೆಯಲಾಗದಂತೆ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ವಿವರಿಸಿದರು.
Previous Articleಪ್ರಬುದ್ಧ ಸಾವಿನ ಬಗ್ಗೆ ಅನುಮಾನ.
Next Article ರಾಹುಲ್ ಗಾಂಧಿಗೆ ಸಮನ್ಸ್ ನೀಡಲು ಜೆಡಿಎಸ್ ಆಗ್ರಹ