ಬೆಂಗಳೂರು,ಜೂ.1-
ಲೈಂಗಿಕ ಕಿರುಕುಳ ಆರೋಪದ ಸುಳಿಯಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಎಸ್ ಐ ಟಿ ಪೊಲೀಸರು ಕೇಳುತ್ತಿರುವ ಪ್ರಶ್ನೆಗಳಿಗೆ ತತ್ತರಿಸಿ ಹೋಗಿದ್ದಾರೆ. ಯಾವುದೇ ಪ್ರಶ್ನೆಗೂ ಸಮರ್ಪಕ ಉತ್ತರ ನೀಡದ ಅವರು ವಿಡಿಯೋದಲ್ಲಿ ಇರುವ ಮಹಿಳೆಯರು ನನಗೆ ಗೊತ್ತಿಲ್ಲ ಅವರು ಯಾರು ಎಂದು ಮರು ಪ್ರಶ್ನೆ ಹಾಕುತ್ತಿದ್ದಾರೆ.
ಹಲವು ಅಶ್ಲೀಲ ವಿಡಿಯೋಗಳು ಇದ್ದವು ಎನ್ನಲಾದ ಮೊಬೈಲ್ ಫೋನ್ ಕಳೆದ ಆರು ತಿಂಗಳ ಹಿಂದೆಯೇ ಕಳುವಾಗಿದ್ದು, ಈ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಹೀಗಾಗಿ ವಿಡಿಯೋ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿರುವ ಯಾವುದೇ ವ್ಯಕ್ತಿಯನ್ನು ಗುರುತಿಸಲು ನಿರಾಕರಿಸಿರುವವರು ಇವರಾರೋ ನನಗೆ ಗೊತ್ತೇ ಇಲ್ಲ. ಅವರ ಬಗ್ಗೆ ಎಲ್ಲಾ ನನಗೆ ಯಾಕೆ ಪ್ರಶ್ನೆ ಕೇಳುತ್ತಿದ್ದೀರಿ ನನ್ನ ವಿರುದ್ಧ ಯಾವ ದೂರು ದಾಖಲಾಗಿದೆ ಯಾರು ದೂರು ಕೊಟ್ಟಿದ್ದಾರೆ ಎಂದು ಕೇಳುತ್ತಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ.
ನನ್ನ ವಿರುದ್ಧ ದೂರು ಕೊಟ್ಟ ಮಹಿಳೆ ಯಾರು ಅನ್ನೊದೆ ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ ಎನ್ನುವುದೂ ನನಗೆ ಗೊತ್ತಿಲ್ಲ. ತೋಟದ ಮನೆ, ಊರು, ಬೆಂಗಳೂರಿನಲ್ಲಿ ಕೆಲಸದವರಿದ್ದಾರೆ. ಈ ವೇಳೆ ಮನೆಯಲ್ಲಿರುವ ಕೆಲಸದವರು ಯಾರು ಅನ್ನೊದು ಗೊತ್ತಿಲ್ಲ. ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂದು ಪ್ರಜ್ವಲ್ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡಿರುವುದಾಗಿ ಗೊತ್ತಾಗಿದೆ.
ನನ್ನ ವಿರುದ್ಧ ದೂರು ಕೊಟ್ಟಿರುವ ಆಕೆ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಇವರನ್ನು ನಾನು ನೋಡಿಯೇ ಇಲ್ಲ. ನಾನು ಬೆಂಗಳೂರು, ಹಾಸನ, ದೆಹಲಿಯಲ್ಲಿರುತ್ತೇನೆ. ನನಗೆ ಇವರು ಯಾರು ಅನ್ನೊದು ಗೊತ್ತಿಲ್ಲ. ಇವರು ನನ್ನ ಬಗ್ಗೆ ಏನೆಂದು ದೂರು ಕೊಟ್ಟಿದ್ದಾರೆ. ಈ ವಿಚಾರಗಳು ನನಗೇನು ಗೊತ್ತಿಲ್ಲ. ಅವರಿಗೆಲ್ಲ ನಾನು ಯಾಕೆ ಹಾಗೆ ಮಾಡಲಿ ನನಗೆ ಅವರು ಯಾರು ಎನ್ನುವುದೇ ಗೊತ್ತಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ನಾಲ್ಕು ವರ್ಷದ ಹಿಂದೆ ನಡೆದಿದೆ ಅಂತಾರೆ. ನನಗೆ ಅವರು ಯಾರು ಅನ್ನೊದು ಗೊತ್ತಿಲ್ಲ. ಯಾಕೆ ಆಗ ಅವರು ದೂರು ಕೊಟ್ಟಿರಲಿಲ್ಲ. ದೂರು ಕೊಡದೇ ಇಲ್ಲಿವರೆಗೂ ಏನು ಮಾಡುತಿದ್ದರಂತೆ. ನಾನು ಯಾರ ಜೊತೆಯೂ ಮಾತನಾಡಲ್ಲ. ಇವರು ಯಾರೆಂಬುದೇ ನನಗೆ ಗೊತ್ತಿಲ್ಲ. ಇದೆಲ್ಲದರ ಹಿಂದೆ ಕಾರ್ತಿಕನ ಕೆಲಸವಿದೆ. ಅವನನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿ. ಆಗ ಇದಕ್ಕೆಲ್ಲ ಸರಿಯಾದ ಉತ್ತರ ಸಿಗತ್ತೆ. ಎಷ್ಟು ದುಡ್ಡು ಕೊಟ್ಟು ಇವರನ್ನು ಕರೆತಂದಿದ್ದಾನೆ ಅಂತ. ಆಗ ಎಲ್ಲ ಉತ್ತರ ನಿಮಗೆ ಸಿಗತ್ತೆ ಎಂದು ವಿಚಾರಣೆ ವೇಳೆ ಪ್ರಜ್ವಲ್ ಎಸ್ಐಟಿ ಅಧಿಕಾರಿಗಳ ಬಳಿ ಹೇಳಿರುವುದಾಗಿ ತಿಳಿದು ಬಂದಿದೆ.
ತನಿಖೆಯ ಸಮಯದಲ್ಲಿ ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದೆ ಅಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ತನಿಖಾ ತಂಡ
ಪ್ರಜ್ವಲ್ ರೇವಣ್ಣ ಅವರ ಆಡಿಯೊ ಮಾದರಿಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಪ್ರಜ್ವಲ್ ರೇವಣ್ಣ ಅವರ ಧ್ವನಿಯನ್ನು ಆಡಿಯೊದಲ್ಲಿನ ಧ್ವನಿಯೊಂದಿಗೆ ಹೊಂದಿಸುವುದು ಇದರ ಉದ್ದೇಶವಾಗಿದೆ. ಎರಡೂ ಧ್ವನಿಗಳ ಫೊರೆನ್ಸಿಕ್ ತನಿಖೆಯಿಂದ ವೈರಲ್ ಸೆಕ್ಸ್ ವಿಡಿಯೋದಲ್ಲಿ ಬರುವ ಧ್ವನಿ ಪ್ರಜ್ವಲ್ ಅವರದ್ದೇ ಅಥವಾ ಅಲ್ಲವೇ ಎಂಬುದು ಬಹಿರಂಗಗೊಳ್ಳಲಿದೆ. ಈ ಸೆಕ್ಸ್ ವಿಡಿಯೋಗಳ ಧ್ವನಿ ಪ್ರಜ್ವಲ್ ರೇವಣ್ಣ ಅವರದ್ದು ಎಂಬುದು ಸಾಬೀತಾದರೆ ಮುಂದಿನ ದಿನಗಳಲ್ಲಿ ಅವರ ಸಮಸ್ಯೆಗಳು ಹೆಚ್ಚಾಗುವುದು ಖಚಿತ. ಹೀಗಿರುವಾಗ ಪ್ರಜ್ವಲ್ ಅವರ ಧ್ವನಿ ಅವರಿಗೆ ಶತ್ರುಆಗಬಹುದು.
ಮಾಯವಾದ ಭವಾನಿ:
ಮತ್ತೊಂದೆಡೆ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಾಗಿರುವ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರು ನಾಪತ್ತೆಯಾಗಿದ್ದಾರೆ.
ತಮಗೆ ಕ್ಯಾನ್ಸರ್ ಇದೆ ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿ ನಿರೀಕ್ಷಣಾ ಜಾಮೀನು ಕೋರಿದ್ದ ಅವರ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಇದೀಗ ಬಂಧನದ ಭೀತಿ ಎದುರಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ತಂಡ ಅವರಿಗೆ ನೀಡಿದ ನೋಟಿಸ್ ಗೆ ಉತ್ತರ ನೀಡಿದ ಅವರು ತಮ್ಮ ಮನೆಗೆ ಬಂದು ಹೇಳಿಕೆ ದಾಖಲಿಸಿಕೊಳ್ಳುವಂತೆ ಹೇಳಿದ್ದರು
ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ತನಿಖೆಗೆ ತಾನು ಲಭ್ಯ ಇರುತ್ತೇನೆ ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಭವಾನಿ ಅವರ ವಿಚಾರಣೆಗಾಗಿ ಬಂದ ಎಸ್‌ಐಟಿ ಅಧಿಕಾರಿಗಳು ಮನೆಯಲ್ಲಿ ವಿಚಾರಿಸಿದಾಗ ಅವರು ಇಲ್ಲ ಎಂಬ ಉತ್ತರ ಬಂದಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರಿಗೆ ಕಾಯುತ್ತಾ ಮನೆಯ ಆವರಣದಲ್ಲೇ ಜೀಪ್‌ನಲ್ಲಿ ಕುಳಿತಿದ್ದಾರೆ.
Previous Articleಜಾಮೀನು ಪಡೆದುಕೊಂಡ ಸಿಎಂ ಮತ್ತು ಡಿಸಿಎಂ.
Next Article ಶಿವಕುಮಾರ್ ನಮ್ಮ ಶಕ್ತಿ ತೋರಿಸುತ್ತೇವೆ ಎಂದಿದ್ದು ಯಾರಿಗೆ.?
4 ಪ್ರತಿಕ್ರಿಯೆಗಳು
clomiphene sleep apnea can you get generic clomid online where buy clomid without dr prescription can i order generic clomid pills how to get clomid no prescription can i buy generic clomiphene price order generic clomid prices
I am in fact happy to gleam at this blog posts which consists of tons of profitable facts, thanks towards providing such data.
Hola, estrategas del riesgo !
п»їLas plataformas como casinos fuera de espaГ±a permiten a los jugadores disfrutar de una experiencia sin restricciones locales. casino online fuera de espaГ±aPuedes registrarte desde cualquier parte del mundo sin compartir datos personales. AdemГЎs, ofrecen mГ©todos de pago alternativos como criptomonedas.
Casinos online fuera de EspaГ±a СЃ opciones de pago criptogrГЎficas – п»їhttps://casinosonlinefuera.xyz/
Los casinos fuera de EspaГ±a aceptan recargas con tarjetas regalo o cГіdigos prepagos. En casinos online fuera de EspaГ±a, la experiencia de usuario es mГЎs fluida y rГЎpida. Casinosonlinefuera.xyz ofrece soporte en espaГ±ol con chat en vivo 24/7.
¡Que disfrutes de fantásticas jackpots impresionantes!
¡Hola, seguidores de las apuestas!
Casinoporfuera.xyz te conecta con plataformas que permiten jugar en euros, dГіlares, libras o criptomonedas sin restricciones.Es ideal para quienes usan wallets internacionales.Los tipos de cambio son competitivos.
El casino fuera de espaГ±a suele ofrecer soporte tГ©cnico en varios idiomas, incluyendo espaГ±ol.Esto facilita resolver dudas en cualquier momento del dГa.
Descubre los mejores casinos fuera de espaГ±a este aГ±o – https://casinoporfuera.xyz/#
¡Que disfrutes de recompensas maravillosas