Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಿನ ಮನೆ ಮಾಲೀಕರೇ ಎಚ್ಚರ !
    ಸುದ್ದಿ

    ಬೆಂಗಳೂರಿನ ಮನೆ ಮಾಲೀಕರೇ ಎಚ್ಚರ !

    vartha chakraBy vartha chakraಸೆಪ್ಟೆಂಬರ್ 5, 2025Updated:ಸೆಪ್ಟೆಂಬರ್ 5, 2025ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಸೆ.5- ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರು ಹಾಗೂ ಅವರ ಸರಿಯಾದ ದಾಖಲೆಗೆ ಪರಿಶೀಲನೆ ನಡೆಸದೇ ಮನೆ ಬಾಡಿಗೆಗೆ ನೀಡಿರುವ ಮಾಲೀಕರನ್ನು ಪತ್ತೆಹಚ್ಚಿ ಪ್ರಕರಣಗಳನ್ನು ನಗರ ಪೊಲೀಸರು ದಾಖಲಿಸತೊಡಗಿದ್ದಾರೆ.
    ನಗರಕ್ಕೆ ಬರುವ ವಿದೇಶಿ ಪ್ರಜೆಗಳು ತಮ್ಮ ಪಾಸ್​​ ಪೋರ್ಟ್​, ವೀಸಾ ಅವಧಿ ಮುಗಿದಿದ್ದರು ಸಹ ಕೆಲವರು ಅಕ್ರಮವಾಗಿ ನಗರದಲ್ಲಿ ವಾಸವಿರುತ್ತಾರೆ. ಈ ವಾಸವಿದ್ದವರೂ ಹಣ ಸಂಪಾದನೆಗೆ ಅನ್ಯ ಮಾರ್ಗಗಳನ್ನು ಹಿಡಿದು ಬಳಿಕ ಪೊಲೀಸರ ಅತಿಥಿಗಳಾದ ಸಾಕಷ್ಟು ಉದಾಹರಣೆಗಳಿವೆ. ಪೊಲೀಸ್ ಠಾಣೆಗೆ ಸಿ ಫಾರಂ ಸಲ್ಲಿಸದೆ, ವಿದೇಶಿ ಪ್ರಜೆಗಳ ದಾಖಲಾತಿ ಪಡೆಯದೆ ಮನೆ ನೀಡಿದ್ದ ಮಾಲೀಕರ ವಿರುದ್ಧ ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್ ಅಡಿ ಕೇಸ್​ ದಾಖಲಾಗಿವೆ.
    ಅಮೃತಹಳ್ಳಿ, ಬಾಗಲೂರು, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿವೆ. ಕೊಡಿಗೆಹಳ್ಳಿ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ತಲಾ 2, ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ 3, ಕೊತ್ತನೂರು ಪೊಲೀಸ್ ಠಾಣೆಯಲ್ಲಿ 5, ಯಲಹಂಕ ಪೊಲೀಸ್ ಠಾಣೆಯಲ್ಲಿ 7 ಸೇರಿದಂತೆ ಪೂರ್ವ ವಿಭಾಗದಲ್ಲಿ ಒಟ್ಟು 23 ಪ್ರಕರಣ ದಾಖಲಾಗಿವೆ.
    ಮಾಲೀಕರಿಗೆ ಗೈಡ್​ಲೈನ್ಸ್:
    ಇತ್ತೀಚೆಗೆ ವಿದೇಶಿ ಪ್ರಜೆಗಳಿಗೆ ಬಾಡಿಗೆ ಕೊಡುವ ಮನೆ ಮಾಲೀಕರಿಗೆ ವೈಟ್​ಫೀಲ್ಡ್ ವಿಭಾಗದ ಡಿಸಿಪಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಮನೆ ಮಾಲೀಕರು ಸಿ ಫಾರಂ ಅನ್ನು ಎಫ್​​ಆರ್​ಆರ್​​ಓಗೆ ಸಲ್ಲಿಸಬೇಕು. ಬಾಡಿಗೆದಾರರ ಪಾಸ್​ಪೋರ್ಟ್, ವೀಸಾ ಪ್ರತಿ ಸಂಗ್ರಹಿಸಬೇಕು. ಬಾಡಿಗೆ ನೀಡುವ ಮೊದಲು ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು.
    ವೀಸಾ ಅಥವಾ ಅನುಮತಿ ಇಲ್ಲದೆ ವಾಸಿಸಲು ಅವಕಾಶ ನೀಡಬಾರದು. ನೊಂದಾಯಿತ ಬಾಡಿಗೆ ಒಪ್ಪಂದ ಮಾಡಬೇಕು. ವಿದೇಶಿ ಬಾಡಿಗೆದಾರರ ಬಗ್ಗೆ ಮಾಹಿತಿ ನೀಡದಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಅನುಮಾನಾಸ್ಪದ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದು ಗೈಡ್​ಲೈನ್ಸ್ ಬಿಡುಗಡೆ ಮಾಡಲಾಗಿತ್ತು.

    ಕಾನೂನು ನ್ಯಾಯ ಬೆಂಗಳೂರು ಮದುವೆ ವಿದ್ಯಾ
    Share. Facebook Twitter Pinterest LinkedIn Tumblr Email WhatsApp
    Previous Articleಹಣಕ್ಕಾಗಿ ಅಪ್ಪನ ಅಶ್ಲೀಲ ಚಿತ್ರ ಸೃಷ್ಟಿಸಿದ ಮಗ
    Next Article ನಡು ರಸ್ತೆಯಲ್ಲಿ ಲಾಂಗ್ ಹಿಡಿದ ಮರಿ ರೌಡಿ
    vartha chakra
    • Website

    Related Posts

    ಕೋರ್ಟ್ ನಲ್ಲಿ ಕಾಂಗ್ರೆಸ್ ಗೆಲುವು

    ಡಿಸೆಂಬರ್ 16, 2025

    ಕಡ್ಡಾಯವಾಗಿ ಕನ್ನಡ ನಾಮಫಲಕ ಅಳಡಿಸದಿದ್ದರೆ ದಂಡ

    ಡಿಸೆಂಬರ್ 13, 2025

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೋರ್ಟ್ ನಲ್ಲಿ ಕಾಂಗ್ರೆಸ್ ಗೆಲುವು

    ಶಕ್ತಿ ಪ್ರದರ್ಶನಕ್ಕೆ ಮುಂದಾದರಾ ಡಿಸಿಎಂ

    ಕಡ್ಡಾಯವಾಗಿ ಕನ್ನಡ ನಾಮಫಲಕ ಅಳಡಿಸದಿದ್ದರೆ ದಂಡ

    ಎಚ್ಚೆತ್ತ ರಾಜ್ಯ ಸರ್ಕಾರ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Danielbaf ರಲ್ಲಿ ಬುಡುಬುಡಿಕೆ ಆಡಿಸುತ್ತಾ ಹಣ, ಒಡವೆ ದೋಚಿದ | Budbudike
    • aviator_zwEi ರಲ್ಲಿ ಅಪರೂಪದ ಸಾಧಕ ಬಿಂದೇಶ್ವರ್ ಪಾಠಕ್ | Bindeshwar Pathak
    • aviator_oyEi ರಲ್ಲಿ ಎದೆ ನಡುಗಿಸಿದ ಭೀಕರ ಹತ್ಯೆ.
    Latest Kannada News

    ಕೋರ್ಟ್ ನಲ್ಲಿ ಕಾಂಗ್ರೆಸ್ ಗೆಲುವು

    ಡಿಸೆಂಬರ್ 16, 2025

    ಶಕ್ತಿ ಪ್ರದರ್ಶನಕ್ಕೆ ಮುಂದಾದರಾ ಡಿಸಿಎಂ

    ಡಿಸೆಂಬರ್ 13, 2025

    ಕಡ್ಡಾಯವಾಗಿ ಕನ್ನಡ ನಾಮಫಲಕ ಅಳಡಿಸದಿದ್ದರೆ ದಂಡ

    ಡಿಸೆಂಬರ್ 13, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಾಜಕಾರಣಿಗಳ ಅಚ್ಚುಮೆಚ್ಚಿನ ಜ್ಯೋತಿಷಿಗಳು ಯಾರು ಗೊತ್ತಾ #varthachakra #astrologyposts #indianpoliticians
    Subscribe