Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಲ್ಲಿ ISIS ಹೆಜ್ಜೆ ಗುರುತು!
    ಅಂತಾರಾಷ್ಟ್ರೀಯ

    ಬೆಂಗಳೂರಲ್ಲಿ ISIS ಹೆಜ್ಜೆ ಗುರುತು!

    vartha chakraBy vartha chakraಮೇ 20, 2022Updated:ಮಾರ್ಚ್ 20, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮೇ.20- ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವ ಭಯೋತ್ಪಾದಕ ಕೃತ್ಯ ನಡೆಸುವ ಉಗ್ರರ ನೇಮಕಾತಿಗೆ ರಾಜಧಾನಿ ಬೆಂಗಳೂರಿನಲ್ಲಿ ವೇದಿಕೆ ಸಿದ್ದ ಪಡಿಸಿದ್ದ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಐಸಿಸ್ ಉಗ್ರ ಸಂಘಟನೆಗೆ(ಇಸ್ಲಾಮಿಕ್‌ ಸ್ಟೇಟ್‌)ಯುವಕರ ನೇಮಕಾತಿಗಾಗಿ ದೊಡ್ಡ ವೇದಿಕೆಯೇ ಸಿದ್ದವಾಗಿದ್ದನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೇಧಿಸಿದೆ.
    ಐಸಿಎಸ್ ಗೆ ಉಗ್ರರ ನೇಮಕಾತಿ ಹಾಗು ತರಬೇತಿ ವಿಚಾರದ ಸುಳಿವು ಆಧರಿಸಿ ಕಾರ್ಯಾಚರಣೆ ಕೈಗೊಂಡ ಎನ್ಐಎ ಅಧಿಕಾರಿಗಳು ಉಗ್ರರ ನೇಮಕಾತಿಗೆ ನಗರದಲ್ಲಿ ವೇದಿಕೆ ಸಿದ್ದಪಡಿಸಿರುವುದನ್ನು ಬಯಲಿಗೆಳೆದ ಸಂಬಂಧ ಪೂರಕ ಆರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಿದೆ.
    ಪ್ರಮುಖವಾಗಿ, ಜೊಹೈಬ್ ಮನ್ನ ಹಾಗು ಅಬ್ದುಲ್ ಖಾದೀರ್ ನಗರದಲ್ಲಿ ಸುಮಾರು 28 ಅನ್ಯಕೋಮಿನ ಯುವಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರು.ಊಟದ ಪಾರ್ಟಿಯೊಂದರ ನೆಪದಲ್ಲಿ ಕರೆದು ಯುವಕರಿಗೆ ಉಗ್ರವಾದದ ಭಾಷಣ ಮಾಡಿ ಪ್ರಚೋದಿಸಿ ಐಸಿಸ್ ಸೇರಲು ಪ್ರೇರೇಪಿಸಲಾಗುತ್ತಿತ್ತು ಎನ್ನುವ ಆತಂಕಕಾರಿ ಅಂಶವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
    ಸಿರಿಯಾದಲ್ಲಿ ಕುಖ್ಯಾತ ಬಂಡುಕೋರ ಎಂದು ಗುರುತಿಸಿಕೊಂಡಿದ್ದ ಮಹಮ್ಮದ್ ಸಾಜಿದ್ ನಗರಕ್ಕೆ ಆಗಮಿಸಿ ಯುವಕರನ್ನು ಸೆಳೆಯುವ ಭಾಷಣ ಮಾಡಿದ್ದ. ಈತ ಮೂರು ದಿನಗಳ ಕಾಲ ನಗರದಲ್ಲೇ ಉಳಿದುಕೊಂಡು ಯುವಕರಿಗೆ ಐಸಿಸ್ ಸೇರಲು ಪ್ರೇರೇಪಿಸಿದ್ದಾನೆ.
    ಅಷ್ಟೇ ಅಲ್ಲ, ನಗರದಿಂದ ಮರಳಿ ಹೋಗುವಾಗ ಹಲವು ಯುವಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಆತನನ್ನು ಬೀಳ್ಕೊಟ್ಟಿದ್ದರು ಎಂದು ಎನ್ಐಎ ತನ್ನ ಚಾರ್ಜ್​ಶೀಟ್​ನಲ್ಲಿ ವಿವರವಾಗಿ ತಿಳಿಸಿದೆ.
    ಮೂವರು ಸೆರೆ:
    ಐಸಿಎಸ್ ಗೆ ಉಗ್ರರ ನೇಮಕಾತಿ ಹಾಗು ತರಬೇತಿ ಸಂಬಂಧ ತಿಲಕ ನಗರದ ಮುಹಮ್ಮದ್ ತೌಕಿರ್ ಮಹಮೂದ್, ಹಾಗು ಕಾಮನಹಳ್ಳಿಯ ಜೊಹೈಬ್ ಮನ್ನಾ, ಹಾಗು ಭಟ್ಕಳದ ಮೊಹಮ್ಮದ್ ಶಿಹಾಬ್ ನನ್ನು ಅಧಿಕಾರಿಗಳು ಬಂಧಿಸಿದ್ದರು.
    ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120 ಬಿ, 125 ಮತ್ತು ಸೆಕ್ಷನ್ 17, 18 ಮತ್ತು 18 ಬಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ಕೆಲದಿನಗಳ ಹಿಂದೆ ಚಾರ್ಜಶೀಟ್ ಸಲ್ಲಿಸಲಾಗಿತ್ತು.
    ನೇಮಕ ಬಹಿರಂಗ:
    ಈ ಸಂಬಂಧ ತನಿಖೆಯನ್ನು ತೀವ್ರಗೊಳಿಸಿ ಪೂರಕ‌ ಚಾರ್ಜಶೀಟ್ ಸಲ್ಲಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
    ಬಂಧಿತ ಆರೋಪಿಗಳಾದ ಮುಹಮ್ಮದ್ ತೌಕಿರ್ ಮಹಮೂದ್ ಮತ್ತು ಜೊಹೈಬ್ ಮನ್ನಾ ಅವರು ಕುರಾನ್ ಸರ್ಕಲ್ ಗುಂಪಿನ ಮೂಲಕ ಐಸಿಎಸ್ ಗೆ ಮುಸ್ಲಿಂ ಯುವಕರನ್ನು ಆಮೂಲಾಗ್ರವಾಗಿ ಮತ್ತು ನೇಮಕ ಮಾಡುವಲ್ಲಿ ತೊಡಗಿಸಿಕೊಂಡಿರುವುದು ಪ್ರಕರಣದ ತನಿಖೆಯು ಬಹಿರಂಗಪಡಿಸಿದೆ.
    ಸಿರಿಯಾಕ್ಕೆ ಭೇಟಿ:
    ಅವರು ಸಿರಿಯಾಕ್ಕೆ ಮೂಲಭೂತವಾದಿ ಮುಸ್ಲಿಂ ಯುವಕರ ಭೇಟಿಗೆ ಹಣಕಾಸು ಒದಗಿಸಲು ನಿಧಿಯನ್ನು ಸಂಗ್ರಹಿಸಿ‌ ಸ್ವೀಕರಿಸುವಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿ ಮುಹಮ್ಮದ್ ತೌಕಿರ್ ಮಹಮೂದ್ ಮತ್ತು ಮೊಹಮ್ಮದ್ ಶಿಹಾಬ್ ಈ ಹಿಂದೆ ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲು ಅಕ್ರಮವಾಗಿ ಸಿರಿಯಾಕ್ಕೆ ಭೇಟಿ ನೀಡಿದ್ದರು.ಈ ವಿಚಾರವಾಗಿ ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ.

    isis isis entered bangalore News ಉಗ್ರ ಕಾನೂನು ಧರ್ಮ ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Article‘ಬಘೀರ’ ಚಿತ್ರ ಮುಹೂರ್ತ…
    Next Article ನೋಡು ನೋಡುತ್ತಿದ್ದಂತೆ ಬಿದ್ದ ಪವನ್ ವಿದ್ಯುತ್ ಉತ್ಪಾದನೆ ಸ್ಥಾವರ
    vartha chakra
    • Website

    Related Posts

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ಜುಲೈ 7, 2025

    ಬೆಂಗಳೂರಿನ ಎಲ್ಲಾ Bar Pub ಗಳ CCTV ಮೇಲೆ ಪೊಲೀಸ್ ಕಣ್ಣು.

    ಜುಲೈ 7, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸುರ್ಜೇವಾಲಾ ಬದಲಾವಣೆಗೆ ತಂತ್ರ.

    ಅಮೃತಧಾರೆ ನಟಿ ಹತ್ಯೆ ಯತ್ನ

    ಡಿ ಬಾಸ್ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಕೆ ಆಗೋಲ್ಲ!

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • qiyto ರಲ್ಲಿ ಬ್ಯಾಂಕ್ ದರೋಡೆಗೆ ಬೇಕರಿ ನಡೆಸುತ್ತಿದ್ದ ಕಳ್ಳರು
    • mhm32 ರಲ್ಲಿ ಸತೀಶ್ ಜಾರಕಿಹೊಳಿ ನಡೆ ಏನು.
    • morgx ರಲ್ಲಿ ನಿಮಗೆ Scented Candles ಇಷ್ಟನಾ?
    Latest Kannada News

    ಸುರ್ಜೇವಾಲಾ ಬದಲಾವಣೆಗೆ ತಂತ್ರ.

    ಜುಲೈ 11, 2025

    ಅಮೃತಧಾರೆ ನಟಿ ಹತ್ಯೆ ಯತ್ನ

    ಜುಲೈ 11, 2025

    ಡಿ ಬಾಸ್ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಕೆ ಆಗೋಲ್ಲ!

    ಜುಲೈ 11, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ದೆಹಲಿಯಿಂದ ಸಿದ್ದರಾಮಯ್ಯ ಸ್ಪಷ್ಟ ಸಂದೇಶ #siddaramaiah #randeepsinghsurjewala #dkshivakumar #congress
    Subscribe