ಬೆಂಗಳೂರು.
ರಾಜಧಾನಿ ಮಹಾನಗರ ಬೆಂಗಳೂರುನಲ್ಲಿ ವಾಹನ ಸಂಚಾರ ಎಂದರೆ ಅದೊಂದು ದೊಡ್ಡ ಸಾಹಸ ಇದಕ್ಕೆ ಕಾರಣ ಅತಿಯಾದ ಸಂಚಾರ ದಟ್ಟಣೆ. ಈ ಸಂಚಾರ ದಟ್ಟಣೆಯಿಂದಾಗಿ ಕಚೇರಿ ಕೆಲಸ ಆಸ್ಪತ್ರೆಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲಾರದೆ ಪರದಾಡುವಂತಾಗಿದೆ.
ಹಲವು ರಸ್ತೆಗಳಲ್ಲಂತೂ ವಾಹನ ಸಂಚಾರ ಈ ಯಮ ಯಾತನೆ ತರಿಸುತ್ತದೆ ಇದರಿಂದ ನಗರಕ್ಕೆ ಕೆಟ್ಟ ಹೆಸರು ಕೂಡ ಬಂದಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಉಸ್ತುವಾರಿ ಹೋತ್ತಿರುವ ಉಪ ಮುಖ್ಯಮಂತ್ರೀ ಡಿಕೆ ಶಿವಕುಮಾರ್ ಇದೀಗ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಹಲವಾರು ವಿನೂತನ ಕ್ರಮಗಳನ್ನು ರೂಪಿಸಲು ಮುಂದಾಗಿದ್ದಾರೆ.
ಇವರ ಈ ವಿಶೇಷ ಆಸಕ್ತಿಯ ಪರಿಣಾಮವಾಗಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಹಲವಾರು ರಸ್ತೆಗಳಲ್ಲಿ ಮೇಲ್ಸೇತುವೆ, ಅಂಡರ್ ಪಾಸ್ ಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ಮುಂಬರುವ ಬಜೆಟ್ ನಲ್ಲಿ ಈ ರಸ್ತೆಗಳಿಗೆ ಕಾಯಕಲ್ಪ ನೀಡಲು ವಿಶೇಷ ಅನುದಾನ ತೆಗೆದಿರಿಸಲು ಸಿದ್ಧತೆ ನಡೆಸಲಾಗಿದೆ ಅದಕ್ಕಾಗಿ ಯಾವ ಯಾವ ರಸ್ತೆಗಳಲ್ಲಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಲಾಗಿದೆ
ಕಾಮಗಾರಿಗಳು:
1.ಎಂಇಐ ಜಂಕ್ಷನ್ ಬಳಿ ಫ್ಲೈಓವರ್ ವಿಭಜನೆ.
2.ಕೋಣನಕುಂಟೆ ಕ್ರಾಸ್ನಿಂದ ಬನಶಂಕರಿವರೆಗೂ 3.ಅಂಡರ್ ಪಾಸ್ ಅಥವಾ ಫ್ಲೈಓವರ್ ನಿರ್ಮಾಣ.
4.ಅನಂದ್ ಸರ್ಕಲ್ ಬಳಿ ಇರುವ ಫ್ಲೈಓವರ್ ಕೆಆರ್ ಸರ್ಕಲ್ ವರೆಗೂ ವಿಸ್ತರಣೆ.
5.ಕನಕಪುರ ರಸ್ತೆಯ ಆನಂದ್ ಭವನ, ರಘುವನಹಳ್ಳಿವರೆಗೂ ಫ್ಲೈಓವರ್.
6.ಮಡಿವಾಳ ಅಂಡರ್ ಪಾಸ್ ಅನ್ನು ಟ್ರಾಫಿಕ್ ಪೊಲೀಸ್ ಸ್ಟೇಷನ್ ಜಂಕ್ಷನ್‌ವರೆಗೂ ಮುಂದುವರಿಸಲು ಪ್ಲಾನ್.
7.ಹೊಸೂರು ರೋಡ್ನಿಂದ ಶೋಲೆ ಸರ್ಕಲ್ ವರೆಗೂ ಎಲಿವೆಟೆಡ್ ಕಾರಿಡಾರ್.
8.ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ನಿಂದ ನಾಯಂಡನಹಳ್ಳಿವರೆಗೂ ಎಲಿವೆಟೆಡ್ ಕಾರಿಡಾರ್.
9.ಹಳೇ ಮದ್ರಾಸ್ ರಸ್ತೆಯಿಂದ ವಿವೇಕಾನಂದ ಮೆಟ್ರೋ ಸ್ಟೇಷನ್‌ವರೆಗೂ ಎಲೆವೆಟೆಡ್ ಕಾರಿಡಾರ್.
10.ನಾಗವಾರ ಜಂಕ್ಷನ್ನಿಂದ ರಾಮಕೃಷ್ಣ ಹೆಗ್ಡೆನಗರ ಜಂಕ್ಷನ್ ವರೆಗೂ ಎಲೆವೆಟೆಡ್ ಕಾರಿಡಾರ್.
11.ಔಟರ್ ರಿಂಗ್ ರೋಡ್, ಹೆಣ್ಣೂರು ಮೆನ್‌ರೋಡ್, ಬಾಗಲೂರು ಜಂಕ್ಷನ್‌ವರೆಗೂ ಲಿಂಕ್ ರಸ್ತೆಗಳ ನಿರ್ಮಾಣ.
12.ಕೆಂಪೇಗೌಡ ಏರ್‌ಪೋರ್ಡ್ನಿಂದ ಯಲಹಂಕ ನ್ಯೂ ಟೌನ್‌ವರೆಗೂ ಎಲಿವೇಟೆಡ್ ಕಾರಿಡಾರ್.
13.ನಾಗವರ ಜಂಕ್ಷನ್ ನಿಂದ ಮೊದಲಿಯರ್ ರೋಡ್ ಮೂಲಕ ಟ್ಯಾನಿರಿ ರೋಡ್‌ವರೆಗೂ ಎಲಿವೇಟೆಡ್ ಕಾರಿಡಾರ್.
14.ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ರಿಂಗ್‌ರೋಡ್‌ವರೆಗೂ ಎಲಿವೆಟೆಡ್ ಕಾರಿಡಾರ್.
Previous Articleಮೊಟ್ಟೆ ಅಟ್ಯಾಕ್ ಚಿತ್ರಕತೆ ಯಾರದ್ದು ಗೊತ್ತಾ.
Next Article ಡಿಜಿಟಲ್ ಅರೆಸ್ಟ್ ವಂಚಕ ಅರೆಸ್ಟ್.