ಬೆಂಗಳೂರು,ಮೇ.28-ಕೊಲೆ,ಸುಲಿಗೆ, ಬೆದರಿಕೆ,ಮನೆಗಳವು,ವಾಹನ ಕಳವು ಸೇರಿದಂತೆ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಸಿಬ್ಬಂದಿಯ ಕೊರತೆ ಎದುರಾಗಿದೆ.
ನಗರದ ಜನಸಂಖ್ಯೆ ಮತ್ತು ಪೊಲೀಸ್ ಸಿಬ್ಬಂದಿಯ ಅನುಪಾತದಲ್ಲಿ ಭಾರಿ ಅಂತರ ಕಂಡುಬಂದಿದೆ,ನಗರದಲ್ಲಿ 1,825 ಪೊಲೀಸ್ ಕಾನ್ಸ್‌ಟೇಬಲ್‌ಗಳು, 347 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 3,814 ಹುದ್ದೆಗಳು ಖಾಲಿ ಇವೆ.
ಈ ಕೊರತೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿವಿಧ ಸವಾಲುಗಳಿಗೆ ಕಾರಣವಾಗಿದೆ.
ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿಪಿಆರ್ ಆಂಡ್ ಡಿ) ಪ್ರಕಾರ, ಪ್ರತಿ 1 ಲಕ್ಷ ಜನಸಂಖ್ಯೆಗೆ 170 ಸಿವಿಲ್ ಪೋಲೀಸರ ಅಗತ್ಯವಿದ್ದು, ನಗರದಲ್ಲಿ 1.4 ದಶಲಕ್ಷ ಜನಸಂಖ್ಯೆಗೆ ಈಗ ಮಂಜೂರಾದ ಪೊಲೀಸ್ ಬಲವೂ ಸಾಕಾಗುವುದಿಲ್ಲ.
ನಗರಕ್ಕೆ 21,720 ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಆದರೆ ರಾಜ್ಯದ ರಾಜಧಾನಿಯಲ್ಲಿ ಈಗ 15,475 ಪೊಲೀಸರು ಮತ್ತು ಅಧಿಕಾರಿಗಳಷ್ಟೇ ಇದ್ದಾರೆ. ಇದರಲ್ಲಿ ಡಿಸಿಪಿಗಳು, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಮತ್ತು ವಿಶೇಷ ಪಡೆಗಳ ಎಸಿಪಿಗಳು ಸೇರಿದ್ದಾರೆ. ಇದು ಈಗಿರುವ ಸಿಬ್ಬಂದಿ ಸಾಮರ್ಥ್ಯ ಮತ್ತು ಅಗತ್ಯವುಳ್ಳ ಸಿಬ್ಬಂದಿಯ ನಡುವಿನ ಗಣನೀಯ ಅಂತರವನ್ನು ಬಹಿರಂಗಪಡಿಸಿದೆ.
ತಂತ್ರಜ್ಞಾನವನ್ನು ಉನ್ನತೀಕರಿಸಿದಾಗ ಕೆಲಸವು ಹೆಚ್ಚು ಪರಿಣಾಮಕಾರಿಯಾಗಲಿದೆ, ಆದರೆ ಸಿಬ್ಬಂದಿ ಸಂಖ್ಯೆ ಕೂಡ ಅಷ್ಟೇ ಅವಶ್ಯಕವಾಗುತ್ತದೆ, ಹೊಯ್ಸಳ ಮತ್ತು ಚೀತಾಗಳಂತಹ ಗಸ್ತು ವಾಹನಗಳು ಹೆಚ್ಚುತ್ತಿರುವಾಗ, ಅವುಗಳನ್ನು ನಿರ್ವಹಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯ ಅವಶ್ಯಕತೆಯಿದೆ
ಸಿವಿಲ್ ಕಾನ್‌ಸ್ಟೆಬಲ್‌ಗಳು, ಸಶಸ್ತ್ರ ಮೀಸಲು ಮುಂತಾದ ಪೊಲೀಸ್ ಪಡೆಗಳಲ್ಲಿ ಹಲವಾರು ಸಿಬ್ಬಂದಿಗಳಿರುವುದರಿಂದ ನೇಮಕಾತಿ ನಿರಂತರವಾಗಿರಬೇಕು. ಹುದ್ದೆಗಳು ಖಾಲಿ ಇರುವುದನ್ನು ಭರ್ತಿ ಮಾಡದಿದ್ದರೆ ನಿವೃತ್ತಿ, ಮರಣ, ಬಡ್ತಿ ಇತ್ಯಾದಿಗಳಿಂದಾಗಿ ಕೆಲವು ಹುದ್ದೆಗಳು ಖಾಲಿಯಾದಾಗ ಮತ್ತಷ್ಟು ಸಮಸ್ಯೆಯಾಗುತ್ತವೆ.
ಅಪರಾಧ, ಜನಸಂಖ್ಯೆ, ಕೈಗಾರಿಕಾ ಮತ್ತು ವಿದ್ಯಾರ್ಥಿಗಳ ಚಟುವಟಿಕೆಗಳು ಮತ್ತು ವಾಹನ ದಟ್ಟಣೆ ಪ್ರತಿದಿನ ಹೆಚ್ಚುತ್ತಿರುವ ಕಾರಣ ಮಂಜೂರಾದ ಪೊಲೀಸ್ ಬಲವನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಿದೆ.
ಎಲ್ಲಾ ಕ್ಷೇತ್ರಗಳಲ್ಲಿ ನಗರದ ಬೆಳವಣಿಗೆಗೂ ಪೊಲೀಸ್ ಇಲಾಖೆಯ ಬೆಳವಣಿಗೆಗೂ ತಾಳೆಯಾಗುತ್ತಿಲ್ಲ. ಬಜೆಟ್ ನಿರ್ಬಂಧಗಳಿಂದಾಗಿ ಪೊಲೀಸ್ ಬಲವನ್ನು ಹೆಚ್ಚಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸಿಬ್ಬಂದಿಯ ಕೊರತೆಗೆ ಕಾರಣವಾಗಿದೆ.
Previous Articleಪ್ರಜ್ವಲ್ ಹೆಜ್ಜೆ ಜಾಡು ಬೆನ್ನು ಹತ್ತಿದ SIT.
Next Article ಲೋಕಾಯುಕ್ತ ಪೋಲಿಸ್ ಮತ್ತಷ್ಟು Smart.
3 ಪ್ರತಿಕ್ರಿಯೆಗಳು
ГК Айтек multimedijnyj-integrator.ru .
Налоги в Испании Налоги в Испании .
вызов нарколога на дом частная скорая помощь вызов нарколога на дом частная скорая помощь .