ಹಾಸನ,ಜ.30-
ಖಾಸಗಿ ಬಸ್ ತಡೆದು ದುಷ್ಕರ್ಮಿಯೊಬ್ಬ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿ ಆತಂಕ ಹುಟ್ಟಿಸಿದ ಘಟನೆ ಹಾಸನ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಮುಂಜಾನೆ 2ರ ವೇಳೆ ಈ ಘಟನೆ ನಡೆದಿದೆ
ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನ ಮುಂದೆ ಸಾಗಿ ಬಂದ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ ಮರಿ ರೌಡಿ ಕಾರಿನಿಂದ ಇಳಿದು ಬಂದು ಗಲಾಟೆ ಮಾಡಿದ್ದಾನೆ. ಆನಂತರ ಕಾರಿನಲ್ಲಿದ್ದ ಲಾಂಗ್ ಹೊರತೆಗೆದು ಬಸ್ಸಿನ ಗ್ಲಾಸ್ ನ್ನು ಒಡೆದು ಹಾಕಿದ್ದಾನೆ.
ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮರಿ ರೌಡಿ ಲಾಂಗ್ ಹಿಡಿದು ದರ್ಪ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
Previous Articleಬಿ.ಶ್ರೀರಾಮುಲು ಕಾಂಗ್ರೆಸ್ ಸೇರೋದು ಗ್ಯಾರಂಟಿ
Next Article ಜಯಲಲಿತಾ ಆಸ್ತಿ ಏನೆಲ್ಲಾ ಇದೆ ಗೊತ್ತಾ