ಬೆಂಗಳೂರು
ಸ್ಯಾಂಡಲ್ ವುಡ್ ನ ಮೋಹಕತಾರೆ ರಮ್ಯ ಎನು ಮಾಡಿದರೂ ದೊಡ್ಡ ಸುದ್ದಿಯೇ. ಬಹು ಬೇಡಿಕೆಯಲ್ಲಿದ್ದ ಈ ನಟಿ ಕೆಲ ಕಾಲ ಸಿನಿಮಾ ರಂಗದಿಂದ ದೂರವಿದ್ದರೂ ಇವರ ಬಗೆಗಿನ ಕ್ರೇಜ್ ಕಡಿಮೆಯಾಗಿಲ್ಲ.
ಅದರಲ್ಲೂ ಇವರ ಮದುವೆ,ಹೊಸ ಸಿನಿಮಾ, ರಾಜಕಾರಣ, ಬಾಯ್ ಫ್ರೆಂಡ್ ಯಾರು ಎಂಬ ಕುತೂಹಲ ಸದಾ ಇದ್ದದ್ದೆ.ಹೀಗಿರುವಲ್ಲಿ ಅವರ ಟ್ವೀಟ್ ಈಗ ಎಲ್ಲರ ಗಮನ ಸೆಳೆದಿದೆ.
ಅದು ಏನೆಂದರೆ ‘ನಾನು ಕೈಗೊಳ್ಳುವ ನಿರ್ಧಾರದ ಬಗ್ಗೆ ನೀವು ಯೋಚಿಸುವುದಿಲ್ಲವೇ? ನಾಳೆ ಬೆಳಗ್ಗೆ 11.15ಕ್ಕೆ ನಾನೊಂದು ಸಿಹಿ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಇದು ಅಧಿಕೃತ‘ ಎಂದು ರಮ್ಯಾ ಬರೆದುಕೊಂಡಿದ್ದಾರೆ.
ರಮ್ಯಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ‘ಇದು ಮದುವೆ ಸಂಬಂಧಿಸಿದ್ದೋ ಅಥವಾ ಹೊಸ ಸಿನಿಮಾದಲ್ಲೇನಾದರೂ ನಟಿಸುತ್ತಿದ್ದೀರೋ’ ಎಂದು ಪ್ರಶ್ನೆ ಮಾಡಿದ್ದಾರೆ.ಆದರೆ ಇದಕ್ಕೆ ಉತ್ತರ ಬೇಕಾದರೆ ನಾಳೆಯವರೆಗೆ ಕಾಯಬೇಕು..