ಕಥೆ ಇಲ್ಲ ಕಥೆಯ ಗಂಧವೂ ಇಲ್ಲ, ಸಂಭಾಷಣೆ ಹಿಡಿಸಲ್ಲ, ಹಾಡಿನಲ್ಲಿ ಮಜವಿಲ್ಲ, ಗುನುಗುನಿಸುವ ಸಾಹಿತ್ಯವಿಲ್ಲ, ತರ್ಕವಿಲ್ಲ, ವಿಷಯವಿಲ್ಲ, ವಿಜಯ್ ದೇವರಕೊಂಡ ನಟನೆಗೆ ಒಂದು ಹಂದರವೇ ಇಲ್ಲ, ನಟಿಗೆ ನಟನೆ ಗೊತ್ತಿಲ್ಲ, ಆಕೆಯನ್ನು ನೋಡಲು ಮನಸ್ಸು ಆಗುವುದಿಲ್ಲ, ಕೊನೆಗೆ ವಿಶೇಷ ಪಾತ್ರದಲ್ಲಿ ನಟಿಸಿರುವ ಮೈಕ್ ಟೈಸನ್ ಗೆ ಯಾವ ಚಿತ್ರದಲ್ಲಿ ನಟಿಸಿದ್ದೇನೆ ಎಂದೇ ಮರೆತುಹೋಗುವಷ್ಟು ತಲೆಬುಡವಿಲ್ಲದ ಆದರೆ ತಲೆ ಚಿಟ್ಟು ಹಿಡಿಸುವ ನಿರೂಪಣೆ ನೀಡಿದ ಅನುಭವಿ ನಿರ್ದೇಶಕ ನಿರ್ದೇಶನವನ್ನೇ ಮರೆತು ಮಾಡಿದಂತಿದೆ ಇದೆಲ್ಲ.
ಅಂತೂ ಇಂತೂ ಬಹಳಷ್ಟು ಪ್ರಚಾರ ಗಿಟ್ಟಿಸಿಕೊಂಡು ಬಿಡುಗಡೆಯಾದ ಸಿನೆಮಾ ಲೈಗರ್ ಬೋರು ಹೊಡೆಸುವುದು ಮಾತ್ರವಲ್ಲದೆ ತಲೆ ಚಿಟ್ಟು ಹಿಡಿಸಿ ತಲೆ ನೋವು ಕೊಡುವುದೂ ಖಂಡಿತ. ವಿಜಯ್ ದೇವರಕೊಂಡ ಅವರ ಅಹಂಕಾರವೋ ಇಲ್ಲ ಧರ್ಮ ಸಂಸ್ಥೆಯ ಉಡಾಫೆಯೊ ಅಂತೂ ಅತ್ಯಂತ ದೊಡ್ಡ ಫ್ಲಾಪ್ ನೀಡಿದ ಅಪಕೀರ್ತಿ ಈ ಕರಣ್ ಜೋಹರ್, ವಿಜಯ್ ದೇವರಕೊಂಡ, ಪುರಿ ಜಗನ್ನಾಥ ತ್ರಿಮೂರ್ತಿಗಳಿಗೆ ಸಲ್ಲುತ್ತದೆ. ಈ ಸಿನೆಮಾ ನೋಡದಿದ್ದರೇನೇ ಒಳಿತು ಎಂದು ವಿಮರ್ಶಕರು ಒಕ್ಕರೊಲಿನಿಂದ ಬೇಡಿಕೊಳ್ಳುತ್ತಿದ್ದಾರೆ.
Previous Articleಮಳೆಯ ಹೊಡೆತಕ್ಕೆ ತತ್ತರಿಸಿದ ಬೆಂಗಳೂರು
Next Article ಮೋಹಕ ತಾರೆ ರಮ್ಯಾ ನಾಳೆ ಏನು ಹೇಳ್ತಾರೆ ಗೊತ್ತಾ..