ರಷ್ಯಾ ಯುಕ್ರೇನ್ ಸಂಘರ್ಷದ ಮೊದಲ ಆರು ತಿಂಗಳಲ್ಲಿ ರಷ್ಯಾದ ಸುಮಾರು 46,550 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಯುಕ್ರೇನ್ ಅಗಸ್ಟ್ ೨೭ರಂದು ಹೇಳಿದೆ.
ಅಗಸ್ಟ್ ೨೬ರಂದು ಒಂದು ದಿನವೇ ಹೆಚ್ಚುವರಿಯಾಗಿ 250 ರಷ್ಯಾದ ಯೋಧರು ಕೊಲ್ಲಲ್ಪಟ್ಟಿದ್ದಾರೆ ಎಂದು ಯುಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಜರ್ಮನಿಯ DW ವಾಹಿನಿಗೆ ಅಂಕಿಅಂಶಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ, ಆದರೆ ಅವರು ಬ್ರಿಟನ್‌ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಅವರ ಅಂದಾಜುಗಳೊಂದಿಗೆ ಹೋಲಿಸಿದಾಗ ಇದು ನಂಬಲರ್ಹ ಎಂದು ತೋರುತ್ತಿದೆ. ಈ ವಾರ BBC ಗೆ ತಿಳಿಸಿರುವ ಪ್ರಕಾರ, ಸಾವುಗಳು, ಗಾಯಗಳು ಮತ್ತು ಯುದ್ಧ ತೊರೆದು ಓದಿದವರ ಲೆಕ್ಕ ಒಟ್ಟುಗೂಡಿಸಿದಾಗ ರಷ್ಯಾದ ನಷ್ಟವು 80,000 ಆಗಿದೆ ಎಂದು ಊಹಿಸಲಾಗಿದೆ.
ಇದು ಅಫ್ಘಾನಿಸ್ತಾನದಲ್ಲಿ ಒಂದು ದಶಕದಲ್ಲಿ ಅವರು ಕಳೆದುಕೊಂಡ 15,000 ಸಾವಿರಕ್ಕೆ ಹೋಲಿಸಿದರೆ ಬಹಳ ಜಾಸ್ತಿ ಎಂದು ವ್ಯಾಲೇಸ್ ಹೇಳಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಈ ವಾರ ಸುಮಾರು 9,000 ಉಕ್ರೇನಿಯನ್ ಸೈನಿಕರ ವಿರುದ್ಧ 25,000 ರಷ್ಯಾದ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಂದಾಜಿಸಿದೆ.
ಯುಕ್ರೇನ್ ತನ್ನ ಇತ್ತೀಚಿನ ವರದಿಯಲ್ಲಿ ಫೆಬ್ರವರಿ 24 ರಿಂದ ರಷ್ಯಾ ಒಟ್ಟು 1,939 ಟ್ಯಾಂಕ್‌ಗಳು, 1045 ಫಿರಂಗಿ ವ್ಯವಸ್ಥೆಗಳು, 836 ಡ್ರೋನ್‌ಗಳು ಮತ್ತು 3,165 ವಾಹನಗಳನ್ನು ಕಳೆದುಕೊಂಡಿದೆ ಎಂದು ಹೇಳಿದೆ.
ವಿಶ್ವಸಂಸ್ಥೆಯು ಈ ವಾರ ಉಕ್ರೇನ್‌ನಲ್ಲಿ 5,587 ನಾಗರಿಕರ ಸಾವುಗಳನ್ನು ದೃಢೀಕರಿಸಲು ಸಾಧ್ಯವಾಯಿತು ಎಂದು ಹೇಳಿದೆ, ನಿಜವಾದ ಸಂಖ್ಯೆಯು ತುಂಬಾ ಹೆಚ್ಚಿರಬಹುದು ಎಂದೂ ಹೇಳಿದೆ. ಆದರೆ ಇದೆಲ್ಲದರ ಮಧ್ಯೆ ರಷ್ಯಾಕ್ಕೆ ಅಪಾರ ಸಾವು ನೋವು ಮತ್ತು ನಷ್ಟವಾಗಿರುವುದಂತೂ ಸ್ಪಷ್ಟ ಎಂಬುದು ಧೃಡವಾಗುತ್ತಿದೆ.