ಶ್ರೀನಗರ, ಮೇ 23 –ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ (ಎಲ್ಇಟಿ)ಯ ಇಬ್ಬರು ಸ್ಥಳೀಯ ಉಗ್ರರನ್ನು ಇಂದು ನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳೊಂದಿಗೆ ಬಂಧಿಸಲಾಗಿದೆ.
ಹೈಬ್ರಿಡ್ ಉಗ್ರಗಾಮಿಗಳು ಎಂದು ಪರಿಗಣಿಸಲಾಗಿದ್ದು, ಭಯೋತ್ಪಾದಕ ದಾಳಿಯನ್ನು ನಡೆಸಿ ನಂತರ ದಿನನಿತ್ಯದ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 15 ಪಿಸ್ತೂಲ್ಗಳು, 30 ಮ್ಯಾಗಜೀನ್ಗಳು, 300 ರೌಂಡ್ಸ್ ಗುಂಡುಗಳು ಮತ್ತು ಒಂದು ಸೈಲೆನ್ಸರ್ ಜಪ್ತಿ ಮಾಡಲಾಗಿದೆ. ಭಯೋತ್ಪಾದಕರ ವಿರುದ್ಧ ಸಂಬಂಧಿತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು ಇದು ಪೊಲೀಸರಿಗೆ ದೊರೆತ ದೊಡ್ಡ ಯಶಸ್ಸು ಎಂದು ಐಜಿಪಿ ಹೇಳಿದ್ದಾರೆ
Previous Articleಹಿಂದಿ ಮಾತನಾಡಿದ ಜಪಾನ್ ಬಾಲಕ: ವಾವ್ ಎಂದ ಮೋದಿ
Next Article ಕಣ್ಣಾ ಮುಚ್ಚಾಲೆ ಆಟ…ಚಿನ್ನದ ಜೊತೆ ಓಟ..