ಬೆಂಗಳೂರು
ಹಾಸನ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿ ಆತಂಕ ಹುಟ್ಟಿಸಿದ ದುಷ್ಕರ್ಮಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಆತನ ಕಾಲಿಗೆ ಗುಂಡಿಟ್ಟು ಬಂಧಿಸಿದ್ದಾರೆ.
ಹಾಸನ ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತನ್ನ ಸ್ವಿಫ್ಟ್ ಕಾರು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ ಮರಿ ರೌಡಿ ಕಾರಿನಿಂದ ಇಳಿದು ಬಂದು ಗಲಾಟೆ ಮಾಡಿದ್ದ
ಆನಂತರ ಕಾರಿನಲ್ಲಿದ್ದ ಲಾಂಗ್ ಹೊರತೆಗೆದು ಬಸ್ಸಿನ ಗ್ಲಾಸ್ ನ್ನು ಒಡೆದು ಹಾಕಿದ್ದಾನೆ.ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಆರೋಪಿಯ ಮಂಗಳೂರು ಕಡೆಯಿಂದ ಬೆಂಗಳೂರಿನೆಡೆಗೆ ವಾಪಸ್ ಆಗುತ್ತಿದ್ದಾಗ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಟೋಲ್ ಗೇಟ್ ಸಮೀಪ ಆತನನ್ನು ಸುತ್ತುವರಿದಿದ್ದಾರೆ.
ಈ ವೇಳೆ ಆರೋಪಿ ಕಾರಿನಲ್ಲಿದ್ದ ಲಾಂಗ್ ತೆಗೆದು ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದ. ಪ್ರಾಣ ರಕ್ಷಣೆಗೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬಂಧಿತ ಆರೋಪಿಯನ್ನು ಮನು ಎಂದು ಗುರುತಿಸಲಾಗಿದೆ ಈತನ ಮೇಲೆ ಒಂದು ಕೊಲೆ ಪ್ರಕರಣ, ಮೂರು ಕೊಲೆ ಯತ್ನ ಹಾಗೂ ರಾತ್ರಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.