ಬೆಂಗಳೂರು,ಫೆ.3-
ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಜನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದು, 6 ಮಂದಿಯ ಸ್ಥಿತಿ ಚಿಂತಾಜನಕವಾಗಿರುವ ದುರ್ಘಟನೆ ರಾಮನಗರ ತಾಲೂಕಿನ ದೊಡ್ಡ ಮಣ್ಣಗುಡ್ಡೆ ಗ್ರಾಮದಲ್ಲಿ ನಡೆದಿದೆ. ದೊಡ್ಡ ಮಣ್ಣಗುಡ್ಡೆಯ ಮಂಗಳಮ್ಮ (28) ಮೃತಪಟ್ಟವರು. ಅವರ ಪತಿ ರಾಜು(31), ಅತ್ತೆ ಸೊಲ್ಲಾಪುರದಮ್ಮ (48), ಮಕ್ಕಳಾದ ಆಕಾಶ್ (9), ಕೃಷ್ಣ (13), ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ (4) ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಕುಂಬಳಗೂಡುವಿನ ಸುಬ್ಬರಾಯನಪಾಳ್ಯದ ರಾಜು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, 10 ಲಕ್ಷಕ್ಕೂ ಹೆಚ್ಚಿನ ಕೈ ಸಾಲ ಮಾಡಿಕೊಂಡು, ಸಾಲಗಾರರ ಕಾಟಕ್ಕೆ ಹುಟ್ಟೂರು ತೊರೆದು ಅತ್ತೆ ಮನೆ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದ. ಹುಟ್ಟೂರು ತೊರೆದರೂ ರಾಜುಗೆ ಸಾಲಗಾರರ ಕಾಟ ಮಾತ್ರ ತಪ್ಪಿರಲಿಲ್ಲ. ಪಡೆದ ಹಣಕ್ಕೆ ಬಡ್ಡಿಯನ್ನು ಕಟ್ಟಲಾಗದ ಬಡ ಕುಟುಂಬ, ಸಾಲ ಪಡೆದವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಬೇಸತ್ತಿತ್ತು. ಕೊನೆಗೆ ಸಾಲಕ್ಕೆ ಹೆದರಿ ನಿನ್ನೆ ಮಧ್ಯಾಹ್ನ ಇಡೀ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿತ್ತು.
ಊರ ಹೊರಗಿದ್ದ ರಾಜು ಮಾವನ ಸಮಾಧಿ ಬಳಿಗೆ ತೆರಳಿದ್ದ ಕುಟುಂಬ, ಊಟ ಹಾಗೂ ತಿಂಡಿಗಳ ಜೊತೆ ಇಲಿ ಪಾಷಾಣ ಸೇವಿಸಿದ್ದಾರೆ. ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ತಿಂದಿದ್ದರು. ತಲಾ 2 ಪ್ಯಾಕೆಟ್ ಇಲಿ ಪಾಷಾಣ ಸೇವಿಸಿದ್ದ 7 ಮಂದಿ ಸಾವಿಗಾಗಿ ಕಾದು ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದರು. ಕೆಲ ಹೊತ್ತಿನ ಬಳಿಕ ರಾಜು ಪತ್ನಿ ಮಂಗಳಮ್ಮ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಉಳಿದವರು ಸಂಕಟ ತಾಳಲಾರದೆ ಅಲ್ಲಿಂದ ಹೊರಟು ಊರ ಕಡೆಗೆ ಬಂದು ಗ್ರಾಮದ ಜನರಿಗೆ ವಿಷ ಸೇವಿಸಿರುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ತಕ್ಷಣವೇ ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಡ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮಂಡ್ಯ ಮೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
3 ಪ್ರತಿಕ್ರಿಯೆಗಳು
how much is clomiphene without insurance how can i get cheap clomiphene price can you buy cheap clomiphene prices can you get cheap clomid online where to get generic clomid without dr prescription clomiphene tablet price cost generic clomiphene pills
This is the description of topic I have reading.
More posts like this would make the blogosphere more useful.