ಬೆಂಗಳೂರು,ಜು.6:
ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಭವಿಷ್ಯ ನೋಡಿದಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆಪ್ಟೆಂಬರ್ ಕ್ರಾಂತಿ ಯಾವ ಸ್ವರೂಪದ್ದು ಎಂದು ಈಗಲೇ ಹೇಗೆ ಹೇಳಲು ಸಾಧ್ಯ ಈಗಿನ್ನು ಜುಲೈ ಸೆಪ್ಟೆಂಬರ್ ವರೆಗೆ ಕಾಯಿರಿ ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದರು.
ಇಷ್ಟೊಂದು ಅವಧಿಯಲ್ಲಿ ದೇಶವನ್ನೇ ತಲೆಕೆಳಗೆ ಮಾಡಬಹುದು ಬನ್ನಿ ಎಂದು ಅಚ್ಚರಿ ಹೇಳಿಕೆ ನೀಡಿದರು. ರಾಜಕಾರಣಕ್ಕೆ ಏಕೆ ತಲೆ ಕೆಡಿಸಿಕೊಳ್ತೀರಾ? ಜನಗಳಿಗೆ ಒಳ್ಳೆಯದಾಗುವುದಿದ್ದರೆ ಹೇಳಿ ಎಂದರು.
ಸುರ್ಜೆವಾಲಾ ಮೊದಲನೇ ಸರಿ ಬಂದು ಏನು ಮಾಡಿದರೋ ಎರಡನೇ ಸಲ ಬಂದಾಗಲೂ ಅದನ್ನೆ ಮಾಡೋದು. ಅವರು ನಮ್ಮ ಉಸ್ತುವಾರಿ ಕಾರ್ಯದರ್ಶಿಗಳಿದ್ದಾರೆ. ಎಐಸಿಸಿಯಿಂದ ಕರ್ನಾಟಕಕ್ಕೆ ನೇಮಕ ಮಾಡಿದ್ದಾರೆ. ನಮ್ಮಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆ. ಅದನ್ನು ಹತ್ತಿರದಿಂದ ಗಮನಿಸಿ ಕೇಂದ್ರಕ್ಕೆ ವರದಿಯನ್ನು ಕೊಡುತ್ತಾರೆ. ಆ ಜವಾಬ್ದಾರಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅದರಲ್ಲಿ ವಿಶೇಷತೆ ಏನು ನಾವು ಹುಡುಕಬಾರದು ಎಂದರು.
ಇಲಾಖೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಶಾಸಕರುಗಳ ಆರೋಪ ವಿಚಾರವಾಗಿ, ಪ್ರತಿಕ್ರಿಸಿದ ಅವರು ಒಬ್ಬೊಬ್ಬರ ವೈಯುಕ್ತಿಕ ಅಭಿಪ್ರಾಯಗಳಿಗೆ ನಾವು ಕಮೆಂಟ್ ಮಾಡಲು ಆಗಲ್ಲ ಎಂದು ಹೇಳಿದರು.
ನನ್ನ ವೈಯಕ್ತಿಕ ಅಭಿಪ್ರಾಯಗಳು ರಾಜಕಾರಣದಲ್ಲಿ ಬಹಳಷ್ಟು ಇದೆ ಅದನ್ನು ಇನ್ನೊಬ್ಬರಿಗೆ ಹೇಳಿ ಎಂದರೆ ಅದು ಅವರಿಗೆ ಸೇರಿದ್ದು ಅವರ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅದು ಸರಿ ಇರಬಹುದು, ಸರಿ ಇಲ್ಲದಿರಬಹುದು ಎಂದು ಪ್ರತಿಕ್ರಿಯಿಸಿದರು.